

ಕೋಟ: ಮಳೆಗಾಲ ಬಂತೆಂದರೆ ವಿವಿಧ ಬಗೆಯ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಮಕ್ಕಳಿಗಂತೂ ಬೇಗ ಕಾಯಿಲೆಗಳು ಹರಡುತ್ತವೆ. ಮಳೆಗಾಲದ ಎಚ್ಚರಿಕೆಯೊಂದಿಗೆ ಕಾಯಿಲೆಗಳ ಸ್ವರೂಪ ತಿಳಿದುಕೊಳ್ಳುವುದು ಮತ್ತು ಮುನ್ನೆಚ್ಚರಿಕೆ ವಹಿಸುವುದು ತೀರಾ ಅಗತ್ಯ ಎಂದು ಕೋಟ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಾಧವ ಪೈ ಹೇಳಿದರು.
ಇತ್ತೀಚೆಗೆ ಕೋಟದ ವಿವೇಕ ಬಾಲಕಿಯರ ಪ್ರೌಢಶಾಲೆಯ ಆರೋಗ್ಯ ಸಂಘದ ಆಶ್ರಯದಲ್ಲಿ ನಡೆದ ‘ಆರೋಗ್ಯದ ಅರಿವು’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖ್ಯಶಿಕ್ಷಕ ವೆಂಕಟೇಶ ಉಡುಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರೋಗ್ಯ ಸಂಘದ ಸಂಚಾಲಕ ದೈಹಿಕ ಶಿಕ್ಷಣ ಶಿಕ್ಷಕಿ ಮಮತಾ, ಕೋಟ ಆರೋಗ್ಯ ಕೇಂದ್ರದ ಹರೀಶ್ಚಂದ್ರ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಾನ್ವಿ ನಿರೂಪಿಸಿದರು. ಆರೋಗ್ಯ ಸಂಘದ ಕಾರ್ಯದರ್ಶಿ ರಕ್ಷಾ ವಂದಿಸಿದರು.