ಸ್ವಿಮ್ಮಿಂಗ್​ ಮಾಡಿ ಹೊರಬಂದ ಮರುಕ್ಷಣವೇ ಕುಸಿದು ಬಿದ್ದು ಪ್ರಾಣಬಿಟ್ಟ; ವೀಡಿಯೊ ವೈರಲ್​​

Untitled-design-2024-06-22T180518.599
Published on

ಮೀರತ್: ಇತ್ತೀಚಿನ ದಿನಗಳಲ್ಲಿ ಹಠಾತ್ ಸಾವಿಗೆ ಒಳಗಾಗುವ ಘಟನೆಗಳು ಪದೇಪದೆ ಮರುಕಳಿಸುತ್ತಿದೆ. ಈ ಬಾರಿಯ ದುರ್ಘಟನೆಯಲ್ಲಿ ಈಜುಕೊಳದಲ್ಲಿ ಸ್ವಿಮ್ಮಿಂಗ್​ ಮಾಡಲು ಬಂದಿದ್ದ ಅಪ್ರಾಪ್ತ ವಯಸ್ಕ ಹಠಾತನೇ ಮೃತಪಟ್ಟಿದ್ದಾನೆ.

ಉತ್ತರಪ್ರದೇಶದ ಥಾನಾ ಜಾನಿ ಪ್ರದೇಶದ ಸಿವಾಲ್‌ಖಾಸ್​​ನಲ್ಲಿರುವ ಈಜುಕೊಳದಲ್ಲಿ ಸ್ವಿಮ್ಮಿಂಗ್​ ಮಾಡಲು ಸಮಿರ್​ ಎಂಬಾತ ಬಂದಿದ್ದಾನೆ. 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಸಮೀರ್​​ ಮಧ್ಯಾಹ್ನ ಸ್ನೇಹಿತರ ಜತೆ ಕ್ರಿಕೆಟ್ ಆಡಿದ ಬಳಿಕ ಈಜುಕೊಳಕ್ಕೆ ಬಂದು ಸ್ವಿಮ್ಮಿಂಗ್​ ಮಾಡಿ ನೀರಿನಿಂದ ಹೊರಬಂದು ಕೆಲವೇ ಹೆಜ್ಜೆಗಳನ್ನು ಇಡುತ್ತಿದ್ದಂತೆ ನಡೆಯಲು ಆಗದೆ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.

ಈಜುಕೊಳದ ಬಳಿ ಇದ್ದವರು ಆತನನ್ನು ಎತ್ತಿಕೊಂಡು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಆಸ್ಪತ್ರೆಯ ವೈದ್ಯರು ಸಮೀರ್​​ನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಘಟನೆಯು ಅಲ್ಲಿದ್ದವರಿಗೆ ಆತಂಕ ಸೃಷ್ಟಿಯಾಗಿದೆ. ಈಜುಕೊಳದಿಂದ ಹೊರಬಂದ ಸಮೀರ್​​ ಹೇಗೆ ಇದ್ದಕ್ಕಿದ್ದಂತೆ ನೆಲದ ಮೇಲೆ ಪ್ರಜ್ಞಾಹೀನರಾಗಿ ಬಿದ್ದರು ಎಂಬ ದೃಶ್ಯ ಈಜುಕೊಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಂತರ ಈಜುಕೊಳಕ್ಕೆ ಸಾರ್ವಜನಿಕರ ಪ್ರವೇಶಿಸದಂತೆ ಮುಚ್ಚಲಾಗಿದ್ದು, ಮ್ಯಾನೇಜರ್ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net