More

    ಹುಕ್ಕಾ ನಶೆಯಲ್ಲಿ ಎಂ.ಎಸ್. ಧೋನಿ; ಏನಯ್ಯಾ ನೀನು ಹೀಗೆ ಮಾಡೋದ ಎಂದ್ರು ನೆಟ್ಟಿಗರು

    ಎಂ.ಎಸ್​. ಧೋನಿಯ ವೀಕೆಂಡ್​ ಮಸ್ತಿ ವಿಡಿಯೋ ವೈರಲ್

    ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ತಮ್ಮ ಸಭ್ಯ ವರ್ತನೆಯಿಂದಲೇ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಆದರೆ, ಅವರು ಹುಕ್ಕಾ ಸೇದುತ್ತಾರೆ ಎಂದು ಹೇಳಿದರೆ ಯಾರು ನಂಬುವುದಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಅವರು ಹುಕ್ಕಾ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

    ವೈರಲ್ ಆಗಿರುವ ವಿಡಿಯೋದಲ್ಲಿ ಧೋನಿ ಹುಕ್ಕಾ ಸೇವಿಸಿ ಹೊಗೆ ಬಿಡುತ್ತಿರುವುದನ್ನು ನೋಡಬಹುದಾಗಿದೆ. ಆದರೆ, ಈ ವಿಡಿಯೋ ಇತ್ತೀಚಿನ ಕಾರ್ಯಕ್ರಮ ಒಂದರಲ್ಲಿ ಚಿತ್ರೀಕರಿಸಲಾಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಹಲವರು ಧೋನಿ ಪರವಾಗಿ ಕಮೆಂಟ್​ ಮಾಡಿದರೆ ಇನ್ನು ಕೆಲವರು ಫಿಟ್​ನೆಸ್​ಗೆ ಹೆಸರುವಾಸಿಯಾಗಿರುವ ನೀವು ಈ ರೀತಿ ಮಾಡೋದ ಎಂದು ಕಮೆಂಟ್​ ಮಾಡಿದ್ದಾರೆ.

    ಇದನ್ನೂ ಓದಿ: ಕೈಕೊಟ್ಟ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಂಡ ಯುವತಿ; ಸರ್ಕಾರದಿಂದ ಸಿಕ್ತು ಬಂಪರ್ ಗಿಫ್ಟ್​

    ಬಹಿರಂಗಪಡಿಸಿದ ಮಾಜಿ ಆಟಗಾರ

    ಕಳೆದ ವರ್ಷ ಕ್ರಿಕೆಟ್​ ವೆಬ್​ಸೈಟ್​ಗೆ ನೀಡಿದ​ ಸಂದರ್ಶನ ಒಂದರಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಜಾರ್ಜ್ ಬೈಲಿ ಧೋನಿ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುವ ವೇಳೆ ಅವರು ಹುಕ್ಕಾ ಸೇದುತ್ತಾರೆ ಎಂದು ಹೇಳಿದ್ದರು. ನಾನು ಐಪಿಎಲ್​ನಲ್ಲಿ ಚೆನ್ನೈ ಹಾಗೂ ಪುಣೆ ತಂಡದ ಪರ ಆಡಿರುವ ನಾನು ಅವರು ಹುಕ್ಕಾ ಸೇದುವುದನ್ನು ಅನೇಕ ಬಾರಿ ನೋಡಿದ್ದೇನೆ.

    ಅವರು ತಮ್ಮ ರೂಮಿನಲ್ಲಿ ತಂಡದ ಸದಸ್ಯರೊಟ್ಟನೆ ಮಾತನಾಡುವ ವೇಳೆ ಹುಕ್ಕಾ ಸೇದುವುದನ್ನು ನಾವು ಅನೇಕ ಬಾರಿ ನೋಡಿದ್ದೇನೆ ಎಂದು ಹೇಳಿದ್ದಾರೆ. ಒಬ್ಬ ಕ್ರೀಡಾಪಟುವಾಗಿ ಧೋನಿ ಈ ರೀತಿ ಮಾಡಿದ್ದು, ಸರಿಯಾದ ಕ್ರಮವಲ್ಲ ಎಂದು ಹೇಳಿದ್ದಾರೆ. ಜಾರ್ಜ್​​​​ ಬೈಲಿಗೆ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು ಮತ್ತು ಖಂಡನೆಗೆ ಗುರಿಯಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts