ಕಾಲೇಜು ಹುಡುಗಿಯನ್ನು ಚುಡಾಯಿಸಿದ ಯುವಕರು: ರಸ್ತೆ ಮಧ್ಯದಲ್ಲೇ ರೋಡ್ ರೋಮಿಯೋಗಳಿಗೆ ಖಾಕಿ ಏಟು; ವಿಡಿಯೋ ವೈರಲ್​! Eve Teasing Viral Video

ರಸ್ತೆ ಮಧ್ಯದಲ್ಲೇ ಪೋಕರಿಗಳನ್ನು ಬರಿಗಾಲಿನಲ್ಲಿ ಕೂರಿಸಿ ಬೆಂಡೆತ್ತಿದ ಪೊಲೀಸ್!
ರಸ್ತೆ ಮಧ್ಯದಲ್ಲೇ ಪೋಕರಿಗಳನ್ನು ಬರಿಗಾಲಿನಲ್ಲಿ ಕೂರಿಸಿ ಬೆಂಡೆತ್ತಿದ ಪೊಲೀಸ್!
Published on

ಪ್ರಮುಖ ಮುಖ್ಯಾಂಶಗಳು

  • ಕಾಲೇಜು ಹುಡುಗಿಯನ್ನು ಚುಡಾಯಿಸಿದ ರೋಡ್ ರೋಮಿಯೋಗಳು
  • ರಸ್ತೆ ಮಧ್ಯದಲ್ಲೇ ಪೋಕರಿಗಳನ್ನು ಬರಿಗಾಲಿನಲ್ಲಿ ಕೂರಿಸಿ ಬೆಂಡೆತ್ತಿದ ಪೊಲೀಸ್!
  • ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​​
ವೈರಲ್​: ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳನ್ನು ಚುಡಾಯಿಸುಚ ರೋಡ್​ ರೋಮಿಯೋಗಳ ಹಾವಳಿ ಮಿತಿ ಮೀರುತ್ತಿದೆ. ಇದೇ ಕಾರಣಕ್ಕೆ ಮನೆಯ ಹೆಣ್ಣು ಮಕ್ಕಳು ಆಚೆ ಹೋಗುವಾಗ ಒಬ್ಬಳೇ ಹೋಗಬೇಡ, ಜೊತೆಗೆ ಅಣ್ಣನನ್ನೋ, ತಂದೆಯನ್ನೋ ಕರೆದೊಯ್ಯಿ ಎಂದು ಮನೆಯವರು ಗದರುತ್ತಾರೆ.
ಈ ರೋಡ್​ ರೋಮಿಯೋಗಳು ಬಸ್​ ನಿಲ್ದಾಣ, ಕಾಲೇಜ್​ ಆವರಣ, ಮಾರ್ಕೆಟ್​ಗಳಲ್ಲಿ ಗುಂಪು ಕಟ್ಟಿಕೊಂಡು ಹುಡುಗಿಯರಿಗೆ ಮತ್ತು ಯುವತಿಯರಿಗೆ ಚುಡಾಯಿಸುತ್ತಾ ಕಾಲ ಕಳೆಯುತ್ತಾರೆ. ಈ ಪೋಕರಿಗಳಿಗೆ ತಕ್ಕ ಶಿಕ್ಷೆಯಾಗಲಿ ಎಂದು ಅದೆಷ್ಟೋ ಹೆಣ್ಣು ಮಕ್ಕಳು ಮನಸ್ಸಿನಲ್ಲೇ ಶಾಪ ಹಾಕಿರುತ್ತಾರೆ.
ಆದರೆ ಕೆಲ ದಿನಗಳ ಹಿಂದೆ ಹುಡಿಯೊಬ್ಬಳಿಗೆ ಚುಡಾಯಿಸಿದ ಯುವಕರನ್ನು ಪೊಲೀಸರು ರಸ್ತೆ ಮಧ್ಯದಲ್ಲಿ ಬೆಂಡೆತ್ತಿರುವ ವಿಡಿಯೋವೊಂದು ಸೋಷಿಯಲ್​ ಮೀಡಿಯಾನಲ್ಲಿ ಸಖತ್​ ವೈರಲ್ ​(Eve Teasing Viral Video) ಆಗುತ್ತಿದ್ದು, ನೆಟ್ಟಿಗರು ಪೊಲೀಸರ ಕೆಲಸಕ್ಕೆ ಭೇಷ್​ ಎಂದಿದ್ದಾರೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ವಿಡಿಯೋ ವಿಶಾಖಪಟ್ಟಣಂನಲ್ಲಿ ನಡೆದ ಘಟನೆ ಎಂದು ತಿಳಿದು ಬಂದಿದೆ. ಕಾಲೇಜಿಗೆ ತೆರಳುತ್ತಿದ್ದ ಯುವತಿಯೊಬ್ಬಳಿಗೆ ಮೂರು ಜನ ಯುವಕರು ಚುಡಾಯಿಸಿದ್ದಾರೆ. ಆಗ ಸ್ಥಳದಲ್ಲೇ ಇದ್ದ ಪೊಲೀಸರು ಆ್ಯಕ್ಷನ್​ ಮೊಡ್​ಗೆ ಬಂದಿದ್ದಾರೆ.
ಮೂರು ಯುವಕರನ್ನು ಬರಿಗಾಲಿನಲ್ಲಿ ರಸ್ತೆ ಮಧ್ಯೆ ಕುಳಿಸಿ ಕಾಲಿಗೆ ಲಾಠಿಯಿಂದ ಸರಿಯಾಗಿ ಬೆಂಡೆತ್ತಿದ್ದಾರೆ. ಹಾಗು ಈ ಟ್ರಿಟ್​ಮೆಂಟ್​ನ್ನು ಸಾರ್ವಜನಿಕರ ಎದುರೇ ನೀಡಿರುವುದು, ಪೊಲೀಸ್​ ಇಲಾಖೆ ಮೇಲೆ ಜನರಿಗೆ ನಂಬಿಕೆ, ಭರವಸೆ ಮೂಡಿಸುವ ಕೆಲಸ ಮಾಡಿದೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಫುಲ್​ ಆಕ್ಟಿವ್​ ಆಗಿದ್ದಾರೆ. ಇಂತಹ ರೋಡ್​ ರೋಮಿಯೋಗಳಿಗೆ ಹೀಗೆ ಧರ್ಮದೇಟು ಬಿದ್ದರೆ ಮಾತ್ರ ಇವರು ಸರಿಯಾಗುವುದು ಎಂದು ಒಬ್ಬ ಬಳಕೆದಾರರು ಕಮೆಂಟ್​ ಮಾಡಿದ್ದಾರೆ.
ಖಾಕಿ ಏಟನ್ನು ತಿಂದ ಮೇಲಾದರೂ ಇವರು ಸುಧಾರಿಸುವಂತಾಗಲಿ ಎಂದು ಇನ್ನೊಬ್ಬರು ಹೇಳಿದ್ದಾರೆ. ಪೊಲೀಸರೆ ಹೀಗೆ ನೇರವಾಗಿ ಶಿಕ್ಷೆ ನೀಡಿದರೆ, ದೇಶದಲ್ಲಿ ನ್ಯಾಯಾಲಯ ಇರುವುದು ಏಕೆ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net