ರಾತ್ರಿ ಬಾತ್​ರೂಮ್​ ಬಾಗಿಲು ತೆಗೆದವನಿಗೆ ಶಾಕ್​! 7 ಅಡಿ ಮೊಸಳೆ ನೋಡಿ ಕಂಗಾಲಾದ ಮಾಲೀಕ; ವಿಡಿಯೋ ವೈರಲ್​! Crocodile in Bathroom

ಬಾತ್​ರೂಮ್​ನಲ್ಲಿ 7 ಅಡಿ ಮೊಸಳೆ
ಬಾತ್​ರೂಮ್​ನಲ್ಲಿ 7 ಅಡಿ ಮೊಸಳೆ
Published on
ಗುಜರಾತ್​: ಭಾರತದಲ್ಲಿ ಇಂಟರ್ನೆಟ್​ ಕ್ರಾಂತಿಯಾದ ದಿನದಿಂದ ಒಂದಿಲ್ಲೊಂದು ವಿಡಿಯೋಗಳು ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಲೇ ಇರುತ್ತವೆ. ಇತ್ತೀಚೆಗೆ ಗುಜರಾತಿನ ಮನೆಯೊಂದರ ಬಚ್ಚಲು ಮನೆಯಲ್ಲಿ ಮೊಸಳೆ (Crocodile in Bathroom) ಯೊಂದು ಕಾಣಿಸಿಕೊಂಡ ಸುದ್ದಿ ಸಕ್ಕತ್​ ವೈರಲ್​ ಆಗುತ್ತಿದ್ದು, ಇಂದು ಇದರ ಬಗ್ಗೆ ತಿಳಿಯೋಣ.
ರಾತ್ರಿ ನಿದ್ದೆಗಣ್ಣಲ್ಲಿ ಬಾತ್‌ರೂಮ್‌ಗೆ ತೆರಳಿದ್ದ ಸಂದರ್ಭದಲ್ಲಿ ಏಕಾಏಕಿ 7 ಅಡಿ ಉದ್ದದ ದೈತ್ಯ ಮೊಸಳೆಯೊಂದು ಪ್ರತ್ಯಕ್ಷವಾದ ಘಟನೆ ಗುಜರಾತ್‌ನ ಆನಂದ್ ಜಿಲ್ಲೆಯ ಖಾಡಿಯಾರಪುರ ಎನ್ನುವಲ್ಲಿ ನಡೆದಿದೆ.

ನಾಯಿಯ ಕೂಗು ಜೀವ ಉಳಿಸಿತು!

ಮನೆಮಂದಿ ಎಲ್ಲಾ ಆರಾಮಾಗಿ ನಿದ್ದೆ ಮಾಡುತ್ತಿದ್ದಾಗ ಮನೆಯ ಹೊರಗಿದ್ದ ನಾಯಿಗಳು ಸತತವಾಗಿ ಬೊಗಳೋಕೆ ಶುರು ಮಾಡಿವೆ. ಏನೋ ಹೆಚ್ಚು ಕಮ್ಮಿಯಾಗಿದೆ ಎಂದು ಅನುಮಾನಗೊಂಡು ಮನೆ ಮಾಲೀಕ ಎದ್ದು ಹೊರಗೆ ಬಂದಿದ್ದಾನೆ. ಅತ್ತಿತ್ತ ಕಣ್ಣಾಡಿಸುತ್ತಾ ಕೆಲವು ಹೆಜ್ಜೆ ಮುಂದೆ ಇಟ್ಟವನೇ, ಪಕ್ಕದಲ್ಲೇ ಇದ್ದ ಬಾತ್‌ರೂಮ್‌ ಕಡೆ ಹೋಗಿದ್ದಾನೆ.
ಬಾತ್‌ರೂಮ್ ಒಳಗೆ ಕಂಡ ಆ ದೃಶ್ಯ...
ಬಾತ್‌ರೂಮ್ ಬಾಗಿಲು ತೆಗೆದು ನೋಡಿದವನಿಗೆ ಅಕ್ಷರಶಃ ಹಾರ್ಟ್ ಅಟ್ಯಾಕ್ ಆಗೋದೊಂದೇ ಬಾಕಿ! ಒಳಗೆ ಬರೊಬ್ಬರಿ 7 ಅಡಿ ಎತ್ತರದ ಬೃಹತ್ ಮೊಸಳೆ ಕುಳಿತಿದೆ. ಇದನ್ನು ನೋಡಿದ ತಕ್ಷಣ ಬಾಗಿಲು ಹಾಕಿ, ಭಯದಿಂದ ಕಿರುಚಿಕೊಂಡು ಮನೆಯವರನ್ನೆಲ್ಲಾ ಎಬ್ಬಿಸಿದ್ದಾನೆ. ಭಯಭೀತರಾದ ಕುಟುಂಬಸ್ಥರು ತಕ್ಷಣ ಮನೆಯಿಂದ ಹೊರಗೆ ಓಡಿ ಬಂದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಫೋನ್ ಮಾಡಿದ್ದಾರೆ.

ವೀಡಿಯೋದಲ್ಲಿ ಏನಿದೆ?

ಸದ್ಯ ಈ ದೃಶ್ಯದ ವೀಡಿಯೋ ಇಂಟರ್‌ನೆಟ್‌ನಲ್ಲಿ ಬೆಂಕಿ ಹಚ್ಚಿದ್ದು, ಟಾರ್ಚ್‌ಲೈಟ್ ಬೆಳಕಿನಲ್ಲಿ ದೈತ್ಯ ಮೊಸಳೆಯೊಂದು ಬಾತ್‌ರೂಮ್ ಒಳಗೆ ನಿಧಾನವಾಗಿ ಓಡಾಡುತ್ತಿರೋದನ್ನ ವೀಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದಾಗಿದೆ.
1 ಗಂಟೆ ಕಾಲ ನಡೆದ ಹೈಡ್ರಾಮಾ!
ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು, ಸತತ ಒಂದು ಗಂಟೆಗಳ ಕಾಲ ಹರಸಾಹಸ ಪಟ್ಟಿದೆ. ಕೊನೆಗೂ ಆ ದೈತ್ಯ ಮೊಸಳೆಯನ್ನು ಯಾವುದೇ ಅಪಾಯವಿಲ್ಲದಂತೆ ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ನಂತರ ಆ ಮೊಸಳೆಯನ್ನು ಹತ್ತಿರದ ಕೆರೆಗೆ ಬಿಡಲಾಗಿದೆ ಎಂದು ತಿಳಿದು ಬಂದಿದೆ.

ನೆಟ್ಟಿಗರ ರಿಯಾಕ್ಷನ್ ಹೇಗಿದೆ?

ಈ ವೀಡಿಯೋಗೆ ಲಕ್ಷಾಂತರ ವೀಕ್ಷಣೆಗಳು ಸಿಕ್ಕಿದ್ದು, ಕಾಮೆಂಟ್‌ಗಳ ಸುರಿಮಳೆಯೇ ಹರಿದುಬರುತ್ತಿದೆ. ಇಷ್ಟು ದೊಡ್ಡ ಮೊಸಳೆ ಮನೆ ಒಳಗೆ ಬರೋಕೆ ಹೇಗೆ ಸಾಧ್ಯ? ಅಂತ ನೆಟ್ಟಿಗರು ತಲೆಕೆಡಿಸಿಕೊಂಡಿದ್ದಾರೆ. ಇನ್ನು ಕೆಲವರು, ಮನೆಯ ಹೊರಗೆ ಬಾತ್‌ರೂಮ್ ಕಟ್ಟಿಕೊಳ್ಳೋದು ಎಷ್ಟು ಡೇಂಜರ್ ಅಲ್ವಾ? ಅಂತ ಚರ್ಚೆ ಶುರು ಮಾಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net