ಐಬಿ ಅಧಿಕಾರಿ ಅಂಕಿತ್​​​ ಶರ್ಮಾ ಕೊಲೆ ಪ್ರಕರಣ: AAP ನಾಯಕ ತಾಹೀರ್​ ಹುಸೇನ್​​ಗೆ ಜೀವಾವಧಿ ಶಿಕ್ಷೆ ಪ್ರಕಟ! Tahir Hussain in Ankit Sharma Murder Case

ಐಬಿ ಅಧಿಕಾರಿ ಅಂಕಿತ್​​ ಶರ್ಮಾ ಕೊಲೆ ಪ್ರಕರಣದಲ್ಲಿ ಎಎಪಿ ನಾಯಕ ತಾಹೀರ್​ ಹುಸೇನ್​ಗೆ ಜೀವಾವಧಿ ಶಿಕ್ಷೆ ಪ್ರಕಟ
ಐಬಿ ಅಧಿಕಾರಿ ಅಂಕಿತ್​​ ಶರ್ಮಾ ಕೊಲೆ ಪ್ರಕರಣದಲ್ಲಿ ಎಎಪಿ ನಾಯಕ ತಾಹೀರ್​ ಹುಸೇನ್​ಗೆ ಜೀವಾವಧಿ ಶಿಕ್ಷೆ ಪ್ರಕಟ
Published on

ಪ್ರಮುಖ ಮುಖ್ಯಾಂಶಗಳು

  • 2020 ರ ದೆಹಲಿ ದಂಗೆ ಪ್ರಕರಣ
  • ಐಬಿ ಅಧಿಕಾರಿ ಅಂಕಿತ್​ ಶರ್ಮಾ ಕೊಲೆ ಪ್ರಕರಣ
  • ಕೊಲೆ ಪ್ರಕರಣದಲ್ಲಿ ಎಎಪಿ ನಾಯಕ ತಾಹೀರ್​ ಹುಸೇನ್​ಗೆ ಜೀವಾವಧಿ ಶಿಕ್ಷೆ ಪ್ರಕಟ
  • ತಾಹೀರ್​ ಹುಸೇನ್​ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ದೆಹಲಿ ಕೋರ್ಟ್​
ನವದೆಹಲಿ: 2020 ರಲ್ಲಿ ಸಿಎಎ, ಎನ್​ಆರ್​ಸಿ ವಿರೋಧಿ ದಂಗೆ ಸಂದರ್ಭದಲ್ಲಿ ಇಂಟೆಲಿಜೆನ್ಸ್​ ಬ್ಯುರೋ (ಐಬಿ) ಅಧಿಕಾರಿ ಅಂಕಿತ್​​ ಶರ್ಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್​​ ಆದ್ಮಿ ಪಾರ್ಟಿಯ ನಾಯಕ ತಾಹೀರ್​ ಹುಸೇನ್ (Tahir Hussain in Ankit Sharma Murder Case)​ ಸೇರಿ ನಾಲ್ವರಿಗೆ ದೆಹಲಿ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ನೀಡಿದೆ.
ಶುಕ್ರವಾರ (ಜು.31) ಪ್ರಕರಣದ ವಿಚಾರಣೆ ನಡೆಸಿದ ಐಬಿ ಅಧಿಕಾರಿ ಅಂಕಿತ್​​ ಶರ್ಮಾ ಅವರನ್ನು ಕೊಲ್ಲುವಲ್ಲಿ ತಾಹೀರ್​ ಹುಸೇನ್​, ನಜೀಮ್, ಕಾಸಿಮ್, ಜಾವೇದ್ ಮತ್ತು ಅನಸ್ ಎನ್ನುವವರ ಪಾತ್ರ ದೃಢಪಟ್ಟ ಹಿನ್ನಲೆಯಲ್ಲಿ ಈ ತೀರ್ಪನ್ನು ಪ್ರಕಟಿಸಿದೆ.

ಆಮ್​ ಆದ್ಮಿ ನಾಯಕ ತಾಹೀರ್​ ಹುಸೇನ್​!

2020 ರಲ್ಲಿ ದೆಹಲಿಯ ಉತ್ತರ ಭಾಗದಲ್ಲಿ ನಡೆದಿದ್ದ ಸಿಎಎ, ಎನ್ಆರ್​ಸಿ ನೀತಿ ವಿರೋಧಿಸಿ ನಡೆದ ಹಿಂಸಾತ್ಮಕ ದಂಗೆಯಲ್ಲಿ ಎಎಪಿ ಕೌನ್ಸಿಲರ್​, ತಾಹೀರ್​ ಹುಸೇನ್​ ಪಾತ್ರ ದಟ್ಟವಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ತಾಹೀರ್​ ವಿರುದ್ಧ ಅನ್ಯ ಧರ್ಮದವರ ಮೇಲೆ ದ್ವೇಷ ಸಾಧಿಸುವ, ಸಮಾಜದಲ್ಲಿ ಅಶಾಂತಿ ನಿರ್ಮಿಸುವ, ದಂಗೆ, ಹಲ್ಲೆ, ಕೊಲೆ, ಕೊಲೆಗೆ ಸಂಚು ರೂಪಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದವು. ತಾಹೀರ್​ ನನ್ನು ಐಬಿ ಅಧಿಕಾರಿ ಅಂಕಿತ್​​ ಶರ್ಮಾ ಕೊಲೆ ಪ್ರಕರಣದಲ್ಲಿ ಬಂಧನವಾಗುತ್ತಿದ್ದಂತೆ ಆಮ್​ ಆದ್ಮಿ ಪಕ್ಷ ತಾಹೀರ್​ನನ್ನು ತಮ್ಮ ಪಕ್ಷದಿಂದ ಉಚ್ಚಾಟನೆ ಮಾಡಿತ್ತು.
ಐಬಿ ಅಧಿಕಾರಿ ಬರ್ಬರ ಕೊಲೆ!
ಐಬಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಂಕಿತ್​​ ಶರ್ಮಾ, ಫೆಬ್ರುವರಿ 25 ರಂದು ತಮ್ಮ ಮನೆಗೆ ಕಚೇರಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗಿದ್ದರು. ನಂತರ ಮನೆಗೆ ಸಾಮಾಗ್ರಿತರಲು ಆಚೆ ಹೋದಾಗ ಅವರನ್ನು ಅಪಹರಣ ಮಾಡಲಾಗಿತ್ತು.
ಆಚೆ ಹೋದ ಮಗ ಮನೆಗೆ ಮರಳದಿದ್ದಾಗ ಆಘಾತಗೊಂಡ ಕುಟುಂಬ ವರ್ಗ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದರು. ಮಾರನೇ ದಿನ ಅಂದರೆ ಫೆಬ್ರುವರಿ 26 ರಂದು ದೆಹಲಿಯ ಕೊಳಚೆ ಪ್ರದೇಶದಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು, ಪರೀಕ್ಷೆ ಬಳಿಕ ಈ ದೇಹ ಅಂಕಿತ್​ ಶರ್ಮಾರದ್ದೇ ಎಂದು ಸಾಭೀತಾಗಿತ್ತು. ಮೃಹದೇಹದ ಮುಖಕ್ಕೆ ಆ್ಯಸಿಡ್​ ಚೆಲ್ಲಿ ಗುರುತು ಸಿಗದ ರೀತಿ ಮಾಡುವ ಹುನ್ನಾರವು ನಡೆದಿತ್ತು. ನಂತರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಹೀರ್​ ಹುಸೇನ್​ನನ್ನು ಬಂಧಿಸಲಾಗಿತ್ತು, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net