ದೆಹಲಿ ಮೆಟ್ರೋದಲ್ಲಿ ಸೀಟಿಗಾಗಿ ಹೊಡೆದಾಟ: ಯುವಕನ ಕೆನ್ನೆಗೆ ಬಾರಿಸಿದ ಯುವತಿ; ವಿಡಿಯೋ ವೈರಲ್! Delhi Metro Viral Video

ದೆಹಲಿ ಮೆಟ್ರೋನಲ್ಲಿ ಯುವಕನ ಕೆನ್ನೆಗೆ ಹೊಡೆದ ಯುವತಿ
ದೆಹಲಿ ಮೆಟ್ರೋನಲ್ಲಿ ಯುವಕನ ಕೆನ್ನೆಗೆ ಹೊಡೆದ ಯುವತಿ
Published on
ನವದೆಹಲಿ: ಮಹಾನಗರಗಳಲ್ಲಿ ಟ್ರಾಫಿಕ್​ ಸಮಸ್ಯೆಗಳನ್ನು ಪರಿಹರಿಸಲೆಂದು ಮೆಟ್ರೋಗಳನ್ನು ದೇಶದ ಪ್ರಮುಖ ನಗರಗಳಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಆದರೆ ಈಗ ಈ ಮೆಟ್ರೋಗಳು ಕುಸ್ತಿ ಅಖಾಡಗಳಾಗಿ ಬದಲಾಗುತ್ತಿರುವುದು ಚಿಂತನೀಯ ಸಂಗತಿಯಾಗಿದೆ.
ಇತ್ತೀಚೆಗೆ ದೆಹಲಿ ಮೆಟ್ರೋವಿನಲ್ಲಿ ಕುಳಿತುಕೊಳ್ಳಲು ಸೀಟ್​ ನೀಡದ ಕಾರಣಕ್ಕೆ ಯುವತಿಯೊಬ್ಬಳು ಪುರುಷನ ಮೇಲೆ ಕೈ ಮಾಡಿರುವ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ಸಖತ್​ ವೈರಲ್ (Delhi Metro Viral Video)​ ಆಗುತ್ತಿದೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿರುವ ವಿಡಿಯೋನಲ್ಲಿ ಸುಮಾರು 25-27 ವಯಸ್ಸಿನ ಯುವತಿಯೊಬ್ಬಳು ಮಧ್ಯ ವಯಸ್ಕ ಪುರುಷನೊಂದಿಗೆ ಏರು ಧ್ವನಿಯಲ್ಲಿ ಮಾತನಾಡುತ್ತಾ, ಜಗಳವಾಡುತ್ತಿರುವುದನ್ನು ವಿಡಿಯೋನಲ್ಲಿ ನೋಡ ಬಹುದಾಗಿದೆ.
ನಂತರ ತಾಳ್ಮೆ ಕಳೆದುಕೊಂಡ ಯುವತಿ, ಪುರಷನಿಗೆ ಕಪಾಳಮೋಕ್ಷ ಮಾಡಿದ್ದು, ಕೂಡಲೇ ಆಕೆಯನ್ನು ಉಳಿದ ಪ್ರಯಾಣಿಕರು ಎಳೆದು ಬೇರೆಡೆ ಕರೆದೊಯ್ದಿದ್ದಾರೆ. ಈ ಘಟನೆ ನಡೆಯಲು ನಿಖರವಾದ ಕಾರಣ ಏನೆಂದು ಇಲ್ಲಿವರೆಗೆ ತಿಳಿದು ಬಂದಿಲ್ಲ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ. ಅದೇ ಆ ಹುಡುಗಿಯ ಜಾಗದಲ್ಲಿ ಒಬ್ಬ ಯುವಕ ಈ ಕೆಲಸವನ್ನು ಮಾಡಿದ್ದರೆ ಜನ ಸುಮ್ಮನಿರುತ್ತಿದ್ದರೆ ಎಂದು ಒಬ್ಬ ಬಳಕೆದಾರ ಪ್ರಶ್ನಿಸಿದ್ದಾರೆ.
ಈ ದೆಹಲಿ ಮೆಟ್ರೋ ಎನ್ನುವುದು WWF ಅಖಾಡವಾಗಿ ಬದಲಾಗಿ ಹೋಗಿದೆ. ದಿನಾ ಯಾರಾದರೂ ಒಬ್ಬರು ಜಗಳವಾಡುತ್ತಲೇ ಇರುತ್ತಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಈ ರೀತಿ ಹಿಂಸಾತ್ಮಕ ಕೃತ್ಯ ಮಾಡಿದ ಆ ಯುವತಿ ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಮತ್ತೊಬ್ಬರು ಆಗ್ರಹಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net