ಜೂ. 6 ಕ್ಕೆ CJP ಧರಣಿ: ಇಷ್ಟು ದಿನ ಸುಮ್ಮನಿದ್ದದ್ದು ಸಾಕು, ಭಾರತವನ್ನು ನೇಪಾಳ ಮಾಡೋಣ; ಕಾಕ್ರೋಚ್ ಜನತಾ ಪಾರ್ಟಿ ಬೆಂಬಲಿಗನ ವಿಡಿಯೋ ವೈರಲ್! Cockroach Janata Party
ಭಾರತವನ್ನು ನೇಪಾಳ ಮಾಡುತ್ತೇವೆ, ದೊಣ್ಣೆ ಪೆಪ್ಪರ್ ಸ್ಪ್ರೇ ತೆಗೆದುಕೊಂಡು ಬನ್ನಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜೂನ್ 6 ಕ್ಕೆ ಕಾಕ್ರೋಚ್ ಜನತಾ ಪಾರ್ಟಿತಿಂದ ಧರಣಿ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ಧರಣಿ
ಪ್ರತಿಭಟನೆಗೆ ಮುನ್ನ CJP ಕಾರ್ಯಕರ್ತನ ವಿಡಿಯೋ ವೈರಲ್
ಭಾರತವನ್ನು ನೇಪಾಳ ಮಾಡುತ್ತೇವೆ, ದೊಣ್ಣೆ ಪೆಪ್ಪರ್ ಸ್ಪ್ರೇ ತೆಗೆದುಕೊಂಡು ಬನ್ನಿ
ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
ನವದೆಹಲಿ: ಸೋಷಿಯಲ್ ಮೀಡಿಯಾ ಟ್ರೆಡಿಂಗ್ ಟಾಪಿಕ್ ಆಗಿರುವ ಕಾಕ್ರೋಚ್ ಜನತಾ ಪಾರ್ಟಿ (Cockroach Janata Party) ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವನ್ನು ವಿರೋಧಿಸಿ ಶನಿವಾರ (ಜೂನ್.6) ಜಂತರ್ ಮಂತರ್ನಲ್ಲಿ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕೋರಿ ಧರಳಿ ನಡೆಸಲು ಮುಂದಾಗಿದೆ.
ಈ ಧರಣಿಗೆ ಕಾಕ್ರೋಚ್ ಜನತಾ ಪಾರ್ಟಿಯ ಸ್ಥಾಪಕ ಅಭಿಜೀತ್ ದಿಪ್ಕೆ ಕೂಡ ಆಗಮಿಸಲಿದ್ದು, ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ಕಾಕ್ರೋಚ್ ಪಕ್ಷದ ಬೆಂಬಲಿಗನೆಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ನಾವು ಭಾರತವನ್ನು ನೇಪಾಳವನ್ನಾಗಿ ಪರಿವರ್ತಿಸುತ್ತೆವೆಂದು ಹಂಚಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದೆ.
ಅಮಿತ್ ಕುಮಾರ್ ಸಿಂಧಿ ಎಂಬ ಎಕ್ಸ್ (ಟ್ವಿಟರ್) ಖಾತೆಯಿಂದ ಹಂಚಿಕೆಯಾಗಿರುವ ವಿಡಿಯೋನಲ್ಲಿ, ಜೂನ್ 6 ರಂದು ನಾವು ಧರಣಿ ನಡೆಸಲಿದ್ದವೆ. ಈ ಪ್ರತಿಭಟನೆಗೆ ಅಭಿಜೀತ್ ದಿಪ್ಕೆ ಬರುತ್ತಿದ್ದಾರೆ. ಅವರನ್ನು ವಿಮಾನನಿಲ್ದಾಣದಲ್ಲಿಯೇ ತಡೆಯುವ ಯೋಜನೆ ನಡೆಯುತ್ತಿದೆ.
ಹೀಗಾಗಿ ಪ್ರತಿಭಟನೆಗೆ ಬರುವ ಜನ ಕೈಯಲ್ಲಿ ದೊಣ್ಣೆ ಮತ್ತು ಪೆಪ್ಪರ್ ಸ್ಪ್ರೇಯನ್ನು ತೆಗೆದುಕೊಂಡು ಬನ್ನಿ, ನಾವು ಭಾರತದವನ್ನು ನೇಪಾಳವನ್ನಾಗಿ ಪರಿವರ್ತಿಸಬೇಕು, ನಾವು ವಿಮಾನ ನಿಲ್ದಾಣವನ್ನು ಧ್ವಂಸಗೊಳಿಸಬೇಕೆಂದು ಹೇಳಿದ್ದಾರೆ.
ಕಾಕ್ರೋಚ್ ಜನತಾ ಪಕ್ಷಕ್ಕೆ ವಕ್ತಾರರ ನೇಮಕ
ಬುಧವಾರ (ಜೂ.3) ಈ ಪಾರ್ಟಿ ಮೂವರು ಪ್ರಮುಖ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳನ್ನು (Influencers) ತನ್ನ ಅಧಿಕೃತ ವಕ್ತಾರರನ್ನಾಗಿ ಘೋಷಿಸಿದೆ. ಈ ವಿಷಯವನ್ನು ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ತಿಳಿಸಿದ್ದಾರೆ.
ತನಿಖಾ ಪರ್ತಕರ್ತ ಸೌರವ್ ದಾಸ್, ಲೇಖಕ ವಿಜೇತಾ ದಹಿಯಾ ಹಾಗೂ ಐಐಟಿ ಕಾನ್ಪುರ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನ ಹಳೆಯ ವಿದ್ಯಾರ್ಥಿ ಅಶುತೋಷ್ ರಂಕಾ ಅವರನ್ನು ಕಾಕ್ರೋಚ್ ಜನತಾ ಪಾರ್ಟಿಯ ವಕ್ತಾರರಾಗಿ ನೇಮಿಸಲಾಗಿದೆ, (ಏಜನ್ಸೀಸ್).