ಚಿಪಗಿ ಭಾಗದಲ್ಲಿ ರೊಚ್ಚಿಗೆದ್ದ ಜನ! People

ಜನರ (People) ಆರೋಗ್ಯ ಹಾಳು ಮಾಡುತ್ತಿರುವ ಧೂಳು
ಜನರ (People) ಆರೋಗ್ಯ ಹಾಳು ಮಾಡುತ್ತಿರುವ ಧೂಳು
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಹೆದ್ದಾರಿ 766 ಇ ಕಾಮಗಾರಿ ವಿಳಂಬ
  • ಮೇ 12ರಂದು ಬೃಹತ್ ಪ್ರತಿಭಟನೆಗೆ ಸಿದ್ಧತೆ
  • ಜನರ ಆರೋಗ್ಯ ಹಾಳು ಮಾಡುತ್ತಿರುವ ಧೂಳು
ಶಿರಸಿ: ಸಾಗರಮಾಲಾ ಯೋಜನೆ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ 766 ಇ ಗುತ್ತಿಗೆದಾರರ ವೈಫಲ್ಯತೆಯಿಂದ ವಿಳಂಬವಾಗಿದೆ.
ಮಳೆಗಾಲಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವುದರಿಂದ ಅಷ್ಟರೊಳಗಾಗಿ ಈ ರಸ್ತೆ ಪೂರ್ಣಗೊಳಿಸುವ ಸಾಧ್ಯತೆ ಕಾಣುತ್ತಿಲ್ಲ.
ಶಾಲಾ ಕಾಲೇಜುಗಳು ಶೀಘ್ರವಾಗಿ ಆರಂಭವಾಗಲಿದ್ದು, ರಸ್ತೆ ಸರಿ ಇಲ್ಲದೇ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಬೇಕಾಗಲಿದೆ.
ಈ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿ ವೇಗವಾಗಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಮೇ 12ರಂದು ಶಾಲಾಮಕ್ಕಳನ್ನೂ ಒಳಗೊಂಡಂತೆ ನಗರದ ಚಿಪಗಿಯಲ್ಲಿ (People) ಬೃಹತ್ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ವಿವಿಧ ಸಂಘಟನೆಗಳ ಪರವಾಗಿ ಆಟೋ ಚಾಲಕ, ಮಾಲೀಕರ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅವೈಜ್ಞಾನಿಕವಾಗಿ ರಸ್ತೆ ಅಗೆದುಹಾಕಿರುವುದರಿಂದಾಗಿ ಕಳೆದ 1 ವರ್ಷದಿಂದ ಈ ರಸ್ತೆಯ ಅಕ್ಕಪಕ್ಕದ ಮನೆಗಳ ನಿವಾಸಿಗಳು ಧೂಳಿನಿಂದಾಗಿ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.
ಇಲ್ಲಿಯ ದಮನಬೈಲ್ ಶಾಲೆಯ ಒಳಗೂ ಧೂಳು ಆವರಿಸಿಕೊಂಡಿದೆ. ಇದುವರೆಗೂ ಶಾಲೆ ಎದುರಿನಲ್ಲಿ ತಾಡ್ಪಲ್ ಕಟ್ಟಿಕೊಂಡು ತರಗತಿ ನಡೆಸಲಾಗಿತ್ತು.
ಆದರೆ, ಈ ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರರು ಅತ್ಯಂತ ನಿಧಾನವಾಗಿ ನಡೆಸುತ್ತಿರುವುದರಿಂದಾಗಿ ಸಮಸ್ಯೆ ಮತ್ತೆ ಹಾಗೇ ಮುಂದುವರಿದಿದೆ.
ಇಸಳೂರು, ಬಿಸಲಕೊಪ್ಪ ಸೇರಿದಂತೆ ವಿವಿಧೆಡೆ ರಸ್ತೆಯಲ್ಲಿ ಮಣ್ಣು ತೆಗೆದಿರುವುದರಿಂದಾಗಿ ಮಳೆಗಾಲದಲ್ಲಿ ಈ ಮಾರ್ಗದಲ್ಲಿ ವಾಹನ ಸಂಚಾರ ಸಾಧ್ಯವೇ ಇಲ್ಲ ಎಂಬಂಥ ಸ್ಥಿತಿ ನಿರ್ಮಾಣವಾಗಲಿದೆ.
ಹೀಗಾದರೆ ಬಸ್ ಗಳು ಬದಲಿ ಮಾರ್ಗದಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಉಂಟಾಗಲಿದೆ. ಶಿರಸಿಯಿಂದ ಬಿಸಲಕೊಪ್ಪ ವರೆಗಿನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ದೊಡ್ಡ ಸಮಸ್ಯೆ ಎದುರಾಗಲಿದೆ.
ಹೀಗಾಗಿ, ಮಳೆಗಾಲ ಆರಂಭವಾಗುವುದಕ್ಕೂ ಪೂರ್ವದಲ್ಲಿ ಗರಿಷ್ಠ ವೇಗದಲ್ಲಿ ಕಾಮಗಾರಿ ನಡೆಸಬೇಕು. ಮುಖ್ಯವಾಗಿ ಮಳೆಗಾಲದಲ್ಲಿ ಉಂಟಾಗಬಹುದಾದ ಸಮಸ್ಯೆಯನ್ನಾದರೂ ತಪ್ಪಿಸುವ ಬಗ್ಗೆ ಯತ್ನಿಸಬೇಕು ಎಂದು ಆಗ್ರಹಿಸಿದರು.
ಅಬ್ದುಲ್ ಬಶೀರ, ಮಹೇಶ ನಾಯ್ಕ, ಸಿಂಜಾವ್ ಪೊನಾರ್ಂಡಿಸ್, ಬಾಷಾ ಗೌಡಳ್ಳಿ, ನಜೀರ ಅಹಮದ್, ಮಹೇಶ ಶೆಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net