ಅಪರೂಪದ ಹಾಗೂ ಮಾರಕ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಆಸೆಯನ್ನು ಈಡೇರಿಸುವ ನಿಟ್ಟಿನಲ್ಲಿ, ಮೇಕ್ ಆ ವಿಶ್ ಫೌಂಡೇಶನ್ ಕೆಲಸ ಮಾಡುತ್ತಿದೆ, ಅದರಂತೆ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿ ಶ್ರದ್ಧಾಗೆ ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ರೊಂದಿಗೆ ಮಾತನಾಡುವ ಆಸೆ ಇತ್ತಂತೆ. ಈ ಹಿನ್ನೆಲೆ ಸಂಸ್ಥೆ ನಟನೊಂದಿಗೆ ಸಂಪರ್ಕಿಸಿ, ಪುಟ್ಟ ಬಾಲಕಿಯ ಇಚ್ಛೆಯನ್ನು ಈಡೇರಿಸುವ ಕೆಲಸ ಮಾಡಿದೆ.