ನವದೆಹಲಿ: ಭಾರತದ ಆರ್ಥಿಕತೆಯಲ್ಲಿ ಇಂದು ಬಂಗಾರದ ಸಂಚಲನ ಉಂಟಾಗಿದೆ. ಕೇಂದ್ರ ಸರ್ಕಾರವು ಚಿನ್ನ ಮತ್ತು ಬೆಳ್ಳಿಯ(Gold- Silver Price Hike) ಮೇಲಿನ ಆಮದು ಸುಂಕವನ್ನು ಶೇ. 6 ರಿಂದ ಶೇ. 15ಕ್ಕೆ ಏರಿಕೆ ಮಾಡಿದ ಬೆನ್ನಲ್ಲೇ, ದೆಹಲಿ ಸೇರಿದಂತೆ ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ಬೆಲೆಗಳು ಗಗನಕ್ಕೇರಿವೆ. ಬುಧವಾರ ಒಂದೇ ದಿನ 10 ಗ್ರಾಂ ಚಿನ್ನದ ಬೆಲೆ 8,550 ರೂ. ಏರಿಕೆಯಾದರೆ, ಬೆಳ್ಳಿ ಬೆಲೆ ಕೆಜಿಗೆ ಬರೋಬ್ಬರಿ 20,500 ರೂ. ಹೆಚ್ಚಳವಾಗಿದೆ.