'ಇದೇ ಕೊನೆ ಅವಕಾಶ, ಪುನಃ ಬರಬೇಡಿ': GBA ಚುನಾವಣೆಗೆ ಡಿಸೆಂಬರ್​ವರೆಗೆ ಕಾಲಾವಕಾಶ ಕೊಟ್ಟ ಸುಪ್ರೀಂ ಕೋರ್ಟ್​​..GBA Elections

Supreme Court extends time till December to hold GBA elections
Supreme Court extends time till December to hold GBA elections
Published on

ಪ್ರಮುಖ ಮುಖ್ಯಾಂಶಗಳು

  • GBA ಚುನಾವಣೆಗೆ ಡಿಸೆಂಬರ್​​ವರೆಗೆ ಕಾಲವಕಾಶ ನೀಡಿದ ಸುಪ್ರೀಂ ಕೋರ್ಟ್
  • SIR ಕಾರಣಕ್ಕೆ ರಾಜ್ಯ ಚುನಾವಣೆ ಆಯೋಗ ಸಹ ಕೋರ್ಟ್ ಗೆ ಮನವಿ ಮಾಡಿದೆ
  • ಇದು ಕೊನೆಯ ಅವಕಾಶ, ಪುನಃ ಬೇರೆ ಕಾರಣ ಹೇಳಿಕೊಂಡು ಬರಬೇಡಿ ಅಂದ ನ್ಯಾಯಪೀಠ
ಬೆಂಗಳೂರು: ಗ್ರೇಟರ್​ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳ ಚುನಾವಣೆಯನ್ನು ನಡೆಸಲು ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿರುವ ಸುಪ್ರೀಂ ಕೋರ್ಟ್(Supreme Court)​, ಡಿಸೆಂಬರ್​ 31ರೊಳಗೆ ಚುನಾವಣೆ ನಡೆಸಲು ಕಾಲಾವಕಾಶ ನೀಡಿದೆ.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆ, ಕರುಡು ಮತದಾರರ ಪಟ್ಟಿ ಪ್ರಕಟಣೆ, ಸಾರ್ವಜನಿಕ ಆಕ್ಷೇಪಣೆ ಸ್ವೀಕಾರ ಸೇರಿದಂತೆ ನಾನಾ ಕಾರ್ಯಗಳಲ್ಲಿ ಸಿಬ್ಬಂದಿ ಬ್ಯುಸಿ ಇರುವ ಹಿನ್ನೆಲೆ ಗ್ರೇಟರ್​ ಬೆಂಗಳೂರು ಪ್ರಾಧಿಕಾರ ಚುನಾವಣೆ(GBA elections) ನಡೆಸಲು ಕಾಲಾವಕಾಶ ಕೋರಿ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ಪುನಃ ಬರಬೇಡಿ

ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯಕಾಂತ್​ ಅವರಿದ್ದ ಪೀಠವು, ಮನವಿಯನ್ನು ಪುರಸ್ಕರಿಸಿ ಡಿಸೆಂಬರ್​​ನಲ್ಲಿ ಚುನಾವಣೆ ನಡೆಸಬೇಕು. ಡಿಸೆಂಬರ್​ನಲ್ಲಿ ಪುನಃ ಹೊಸ ಕಾರಣ ಕೇಳಿಕೊಂಡು ಬರುವಂತಿಲ್ಲ ಎಂದು ಖಡಾಖಂಡಿತವಾಗಿ ಸೂಚನೆಯನ್ನು ಕೊಟ್ಟಿದೆ.
ಜನವರಿ ವೇಳೆಗೆ ಚುನಾವಣೆ ನಡೆಸಿರುವ ಮಾಹಿತಿ ಸಲ್ಲಿಸುತ್ತೇವೆ ಎಂದು ಸರ್ಕಾರ ಹೇಳಿದೆ. ಇನ್ನು ಎಸ್​​ಐಆರ್​ ಪ್ರಕ್ರಿಯೆ ನಡೆಯುತ್ತಿರುವ ಬಗ್ಗೆ ಸರ್ಕಾರದ ಪರ ವಾದ ಮಂಡಿಸಿದ ಕಪಿಲ್​​ ಸಿಬಲ್​ ಹೇಳಿದರು.

ಆಗಸ್ಟ್​ನಲ್ಲಿ ನಡೆಯಬೇಕಿತ್ತು ಚುನಾವಣೆ

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಇಲ್ಲದಿದ್ದರೆ ಆಗಸ್ಟ್​​ 31ರೊಳಗೆ ಚುನಾವಣೆ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ಸಿಬ್ಬಂದಿ ಎಸ್​ಐಆರ್​ ಪ್ರಕ್ರಿಯೆಯಲ್ಲಿ ಇರುವ ಕಾರಣ ಕಾಲಾವಕಾಶ ವಿಸ್ತರಣೆಗೆ ಸರ್ಕಾರ ಮನವಿ ಮಾಡಿಕೊಂಡಿತ್ತು. ಅದರಂತೆ ಸರ್ಕಾರದ ಮನವಿಗೆ ಸುಪ್ರೀಂ ಕೋರ್ಟ್​ ಅಸ್ತು ಎಂದಿದ್ದು, ಜಿಬಿಎ ವ್ಯಾಪ್ತಿಯ 369 ವಾರ್ಡ್​​ಗಳ ಚುನಾವಣೆ ಇದೇ ವರ್ಷದ ಡಿಸೆಂಬರ್​ 31ರೊಳಗೆ ಪೂರ್ಣಗೊಳ್ಳಲಿದೆ.

ಕೃಷ್ಣಭೈರೇಗೌಡ ಹೇಳಿದ್ದಿಷ್ಟು

ಜಿಬಿಎ ಚುನಾವಣೆ ಗೆ ಮತ್ತೆ ಕಾಲಾವಕಾಶ ಕೇಳುವ ಯಾವ ಉದ್ದೇಶವೂ ಇಲ್ಲ. ಈಗಲೂ ಕೂಡ ಚುನಾವಣೆ ಮಾಡಲು ರಾಜಕೀಯ ವಾಗಿ ಎದುರಿಸಲು ನಾವು ತಯಾರಿದ್ದೇವೆ. ಎಸ್ ಐ ಆರ್ ಮಾಡಲು ಚುನಾವಣಾ ಆಯೋಗವೇ ಒಂದು ವಾರ ಸಮಯ ಹೆಚ್ಚುವರಿ ಕೊಟ್ಟು ಸಮಯ ಬದಲಾವಣೆ ಮಾಡಿದ್ದಾರೆ. ಎಸ್ ಐ ಆರ್ ಶ್ರದ್ದೆಯಿಂದ ಮಾಡದೇ ಇದ್ದರೇ ಸಾವಿರಾರು ಜನ ಮತ ಕಳೆದುಕೊಳ್ಳುವ ಸಾಧ್ಯತೆ ಇದೆ. ಎಸ್ ಐ ಆರ್ ಕುರಿತಾಗಿ ನಮ್ಮ ವಿವರಣೆ ಗೆ ಸುಪ್ರೀಂ ಕೋರ್ಟ್ ಒಪ್ಪಿದೆ. ಎಸ್ ಐ ಆರ್ ಪ್ರಕಾರ ಹೊಸ ಮತದಾರರ ಪಟ್ಟಿ ಬರುತ್ತೆ. ಜಿಬಿಎ ಚುನಾವಣೆ ಗೆ ನಾವು ತಯಾರು ಮಾಡಿರುವ ಪಟ್ಟಿ ಹಳೇ ಮತದಾರರ ಪಟ್ಟಿ ಆಧಾರವಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಹೇಳಿದರು. (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net