ಕಲಬುರಗಿಯಲ್ಲಿ ರಾತ್ರೋರಾತ್ರಿ ಸಿದ್ದರಾಮಯ್ಯ ಪ್ರತಿಮೆ; ಏನಿದು ‘ಸಿದ್ದು ಸರ್ಕಲ್’ ಸದ್ದು? | Siddaramaiah Statue

ಕಲಬುರಗಿಯ ಹೈಕೋರ್ಟ್ ಕ್ರಾಸ್ ಬಳಿ ಸ್ಥಾಪಿಸಿದ್ದ ಸಿದ್ದರಾಮಯ್ಯ ಪ್ರತಿಮೆ
ಕಲಬುರಗಿಯ ಹೈಕೋರ್ಟ್ ಕ್ರಾಸ್ ಬಳಿ ಸ್ಥಾಪಿಸಿದ್ದ ಸಿದ್ದರಾಮಯ್ಯ ಪ್ರತಿಮೆ
Published on: 

ಪ್ರಮುಖ ಮುಖ್ಯಾಂಶಗಳು

  • ಕಲಬುರಗಿಯ ಹೈಕೋರ್ಟ್ ಕ್ರಾಸ್ ಬಳಿ ಸಿದ್ದರಾಮಯ್ಯ ಪ್ರತಿಮೆ
  • ರಾತ್ರೋರಾತ್ರಿ ಏಳೆಂಟು ಜನರ ಗುಂಪಿನಿಂದ ಪ್ರತಿಮೆ ಪ್ರತಿಷ್ಠಾಪನೆ
  • ಯಾವುದೇ ಪೂರ್ವಾನುಮತಿ ಪಡೆದಿಲ್ಲ ಎಂದ ಅಧಿಕಾರಿಗಳು
Kalaburagi Siddaramaiah Statue: ಕಲಬುರಗಿಯಲ್ಲಿ ರಾತ್ರೋರಾತ್ರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆ ಸ್ಥಾಪಿಸಿ, ಬೆಳಗಾಗುವಷ್ಟರಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಅನುಮತಿ ಪಡೆಯದೇ ಪ್ರತಿಮೆ ಸ್ಥಾಪಿಸಲಾಗಿದೆ ಎನ್ನಲಾಗಿದ್ದು, ಘಟನೆ ಇದೀಗ ಕಲಬುರಗಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸೆಪ್ಟೆಂಬರ್ 16ರ ರಾತ್ರಿ ಏಳೆಂಟು ಜನರ ಗುಂಪೊಂದು ಹೈಕೋರ್ಟ್ ಕ್ರಾಸ್ ಬಳಿ ಸಿದ್ದರಾಮಯ್ಯ ಪ್ರತಿಮೆ ಸ್ಥಾಪಿಸಿದೆ ಎನ್ನಲಾಗಿದೆ. ಅನುಮತಿ ಪಡೆಯದೇ ಪ್ರತಿಮೆ ಇಟ್ಟಿದ್ದರಿಂದ, ವಿಷಯ ತಿಳಿದ ಪಾಲಿಕೆ ಅಧಿಕಾರಿಗಳು ಇಂದು ಮುಂಜಾನೆ ಪೊಲೀಸ್ ಭದ್ರತೆಯಲ್ಲಿ ಪ್ರತಿಮೆಯನ್ನು ತೆರವುಗೊಳಿಸಿದ್ದಾರೆ

ಇದೇ ಜಾಗಕ್ಕೆ ‘ಸಿದ್ದರಾಮಯ್ಯ ಸರ್ಕಲ್’ ಹೆಸರು?

ಇದೇ ಜಾಗದಲ್ಲಿ ಈ ಹಿಂದೆ ಸಿದ್ದರಾಮಯ್ಯ ಅವರ ಭಾವಚಿತ್ರದ ಬ್ಯಾನರ್ ಹಾಕಿ, ‘ಸಿದ್ದರಾಮಯ್ಯ ಸರ್ಕಲ್’ ಎಂದು ಕರೆಯಲಾಗುತ್ತಿತ್ತು ಎನ್ನಲಾಗಿದೆ. ಇದೀಗ ಅದೇ ಜಾಗದಲ್ಲಿ ರಾತ್ರೋರಾತ್ರಿ ಪ್ರತಿಮೆ ಸ್ಥಾಪಿಸಿ, ಕೆಲವೇ ಗಂಟೆಗಳಲ್ಲಿ ತೆರವು ಮಾಡಿರುವುದು ಸ್ಥಳೀಯರ ಗಮನ ಸೆಳೆದಿದ್ದು, ಈ ಸುದ್ದಿ ವೈರಲ್​ ಆಗಿದೆ.
ಡಿಕೆಶಿ ಕಲಬುರಗಿ ಪ್ರವಾಸದ ನಡುವೆಯೇ ಬೆಳವಣಿಗೆ
ಸೆಪ್ಟೆಂಬರ್ 17ರಂದು ಕಲ್ಯಾಣ ಕರ್ನಾಟಕ ಉತ್ಸವ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಕಲಬುರಗಿಗೆ ಭೇಟಿ ನೀಡಿದ್ದರು. ಇದೇ ವೇಳೆ ಹೈಕೋರ್ಟ್ ಕ್ರಾಸ್ ಮಾರ್ಗವೂ ಅವರ ಸಂಚಾರದ ವ್ಯಾಪ್ತಿಯಲ್ಲಿತ್ತು ಎನ್ನಲಾಗಿದೆ. ಅವರ ಭೇಟಿಯ ದಿನವೇ ಸಿದ್ದರಾಮಯ್ಯ ಪ್ರತಿಮೆ ಸ್ಥಾಪಿಸಿ, ತೆರವುಗೊಳಿಸಿರುವುದು ಇದೀಗ ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದೆ.

ಯಾರು ಸ್ಥಾಪಿಸಿದರು? ಅನುಮತಿ ಇತ್ತೇ?

ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ಯಾರು ಸ್ಥಾಪಿಸಿದರು? ಇದಕ್ಕೆ ಅನುಮತಿ ಪಡೆದಿದ್ದರೇ? ಎಂಬ ಪ್ರಶ್ನೆಗಳು ಇದೀಗ ಚರ್ಚೆಗೆ ಬಂದಿವೆ. ರಾತ್ರೋರಾತ್ರಿ ಪ್ರತಿಮೆ ಸ್ಥಾಪಿಸಿ, ಬೆಳಗ್ಗೆಯೇ ತೆರವುಗೊಳಿಸಿರುವ ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.