ಹೌದು, ಕ್ಲಬ್‌ನಲ್ಲಿ ಪಾರ್ಟಿ ಮುಗಿಸಿ ತನ್ನ ಮೂವರು ಸ್ನೇಹಿತರೊಂದಿಗೆ ಕಾರಿನಲ್ಲಿ ಹಿಂದಿರುಗುತ್ತಿದ್ದಾಗ ಕಲ್ಯಾಣ್ ಬೈನ್ಸ್ಲಾ, ಬೈಕರ್ ಸಿಯಾರ ಗಾಡಿಗೆ ಗುದ್ದಲು 2 ಕಿ.ಮೀ ಚೇಸ್ ಮಾಡಿದ್ದಾರೆ. ಆಕೆಯೊಂದಿಗೆ ಮೊದಲು ವಾಗ್ವಾದ ನಡೆದಿದ್ದು, ಆನಂತರ ಆಕೆಯ ಬೈಕ್ ಹಿಂಬಾಲಿಸಿ ಉದ್ದೇಶ ಪೂರ್ವಕವಾಗಿ ಗುದ್ದಿದ್ದಾನೆ ಎಂದು ವಿಶೇಷ ತನಿಖಾ ತಂಡ ಮಾಧ್ಯಮಗಳಿಗೆ ತಿಳಿಸಿವೆ.