'ಆಕೆ ಬೈಕ್​​​​ ನಿಲ್ಲಿಸಿಲ್ಲ, ಟಾರ್ಗೆಟ್ ಮಾಡಿ ಡಿಕ್ಕಿ ಹೊಡೆದ'; ಗುರುಗ್ರಾಮ್ Hit-And-Run ಪ್ರಕರಣದ ಹೊಸ ವೀಡಿಯೊ ವೈರಲ್!

Rider Posts New Gurugram Hit-And-Run Clip
Rider Posts New Gurugram Hit-And-Run Clip
Published on: 

ಪ್ರಮುಖ ಮುಖ್ಯಾಂಶಗಳು

  • ಗುರುಗ್ರಾಮ್​ನಲ್ಲಿ ಹಿಟ್​ ಅಂಡ್​ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಡಿಯೋ ವೈರಲ್​​ ಗುರುಗ್ರಾಮ್​
  • ನಿಜಕ್ಕೂ ಮಹಿಳೆಯರಿಗೆ ಸುರಕ್ಷಿತ ತಾಣವಾಗಿದೆಯೇ ಎಂದು ಪ್ರಶ್ನೆ ಮಾಡಿದ ಮತ್ತೊಬ್ಬ ರೈಡರ್
  • ಕಾರಿನಲ್ಲಿದ್ದ ವ್ಯಕ್ತಿಯ ಮಾತು ಕೇಳದಿದ್ದಕ್ಕೆ ಡಿಕ್ಕಿ ಹೊಡೆದಿದ್ದಾಗಿ ವಿಡಿಯೋ ಹಂಚಿಕೊಂಡ ಮತ್ತೊಬ್ಬ ರೈಡರ್
ಚಂಡೀಗಢ: ಹರಿಯಾಣದ ಗುರುಗ್ರಾಮ್‌ನ ಗಾಲ್ಫ್​​ ಕೋರ್ಸ್​ ರಸ್ತೆಯಲ್ಲಿ ನಡೆದಿದ್ದ ಬೆಚ್ಚಿಬೀಳಿಸುವ ರೋಡ್​ರೇಜ್​ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​ ಸಿಕ್ಕಿದೆ. ಮಹಿಳಾ​ ರೈಡರ್ ಸಿಯಾ ಬೈಕ್​ ಕಾರಿನಲ್ಲಿ ಚೇಸ್ ಮಾಡಿ, ಭೀಕರವಾಗಿ ಡಿಕ್ಕಿ ಹೊಡೆದ ಹಿಟ್-ಅಂಡ್-ರೇನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ವೀಡಿಯೊವೊಂದು ಹೊರಬಿದ್ದಿದೆ. ಸಂತ್ರಸ್ತೆಯ ಹಿಂದೆ ಬೈಕ್‌ನಲ್ಲಿ ಬರುತ್ತಿದ್ದ ಅವರ ಪರಿಚಿತರೊಬ್ಬರು ಈ ದೃಶ್ಯಾವಳಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಸೋಶಿಯಲ್​ ಮಿಡಿಯಾದಲ್ಲಿ ವೈರಲ್ ಆದ ವಿಡಿಯೋಗಳ ಪ್ರಕಾರ ಸಿಯಾ ತನ್ನ ಅಪ್ರಿಲಿಯಾ ಆರ್‌ಎಸ್ 457 (Aprilia RS 457) ಸ್ಪೋರ್ಟ್ಸ್ ಬೈಕ್‌ನಲ್ಲಿ ಇತರ ಸವಾರರೊಂದಿಗೆ ತೆರಳುತ್ತಿದ್ದಾಗ ಬಿಳಿ ಬಣ್ಣದ ಸೆಡಾನ್ ಕಾರು ಆಕೆಯನ್ನು ಹಿಂಬಾಲಿಸಿದೆ. ಕಾರಿನಲ್ಲಿದ್ದ ಆರೋಪಿ ಕಲ್ಯಾಣ್ ಬೈನ್ಸ್ಲಾ ಹಿಟ್​ ಅಂಡ್​ ರನ್​​​ ಮಾಡಿದ್ದಾನೆ. ಆತ ಡಿಕ್ಕಿ ಹೊಡೆದರಭಸಕ್ಕೆ ಸಿಯಾ ಬೈಕ್‌ನಿಂದ ರಸ್ತೆಗೆ ಉರುಳಿರುವುದು ಕಂಡುಬಂದಿದೆ.

ಹೊಸ ವಿಡಿಯೋದಲ್ಲಿ ಏನಿದೆ?

ಸಂತ್ರಸ್ತೆ ರೈಡರ್ ಹಿಂಬದಿಯಿಂದ ಬರುತ್ತಿದ್ದ youknowabhishek_Abhishek Sharma ಎಂಬ ಇನ್​ಸ್ಟಾಗ್ರಾಮ್​ ಖಾತೆ ಹೊಂದಿರುವ ವ್ಯಕ್ತಿ ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆತ ಆಕೆಗೆ ಏನನ್ನೋ ಹೇಳುತ್ತಾ.. ನಿರಂತರವಾಗಿ ಚೇಸ್​ ಮಾಡುತ್ತಿದೆ. ಆಕೆ ನಿಲ್ಲಿಸಲೇ ಇಲ್ಲ. ಕೊನೆಗೆ ತುಂಬಾ ಕೆಟ್ಟದಾಗಿ ಆಕೆಯ ಗಾಡಿಗೆ ಡಿಕ್ಕಿ ಹೊಡೆದಿದ್ದಾನೆ. ನಿಜವಾಗಲೂ ಗುರುಗ್ರಾಮ್​ ಮಹಿಳೆಯರಿಗೆ ಸುರಕ್ಷಿತ ಸ್ಥಳವಾಗಿದ್ಯಾ ಎನ್ನುವ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಗುರುಗ್ರಾಮ್ ಈಗ ಹೆಣ್ಣುಮಕ್ಕಳಿಗೆ ಸುರಕ್ಷಿತವಾಗಿದೆ ಎಂದು ನನಗೆನಿಸುವುದಿಲ್ಲ. ಈ ಕ್ಲಿಪ್‌ನಲ್ಲಿ ನೀವು ನೋಡುವಂತೆ ಆ ವ್ಯಕ್ತಿ ಉದ್ದೇಶಪೂರ್ವಕವಾಗಿಯೇ ಆಕೆಗೆ ಡಿಕ್ಕಿ ಹೊಡೆದಿದ್ದಾನೆ. ಹರಿಯಾಣ ಪೊಲೀಸರು ಇಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಸಿಯಾ (rebelwheels_sia_) ತನ್ನನ್ನು ದಾಟಿ ಹೋದಾಗ ಒಂದು ಕಾರು ಆಕೆಯನ್ನು ಹಿಂಬಾಲಿಸುತ್ತಿರುವುದನ್ನು ಮತ್ತು ತುಂಬಾ ಹತ್ತಿರದಿಂದ ಟಾರ್ಗೆಟ್ ಮಾಡಿದ್ದು ಗಮನಕ್ಕೆ ಬಂತು. ಆ ಕಾರು ಮತ್ತು ಬೈಕ್ ಮಧ್ಯೆ ಹೋಗಿ ನೋಡಿದಾಗ, ಕಾರಿನಲ್ಲಿದ್ದ ಮೂವರು ವ್ಯಕ್ತಿಗಳು ಮದ್ಯಪಾನ ಮಾಡಿದ್ದರು. ಕಿಟಕಿಗಳು ಕಪ್ಪಾಗಿದ್ದವು ಎಂದಿದ್ದಾರೆ. ಸೆಂಟ್ರಲ್ ಪ್ಲಾಜಾ ಬಳಿ ರಸ್ತೆ ತಿರುವು ಪಡೆಯುತ್ತಿದ್ದಂತೆ ಕಾರು ವೇಗವಾಗಿ ಬಂದು ಸಿಯಾ ಅವರ ಬೈಕಿಗೆ ಡಿಕ್ಕಿ ಹೊಡೆದು ಎಸ್ಕೇಪ್​ ಆದರು ಎಂದು Abhishek Sharma ಹೇಳಿಕೊಂಡಿದ್ದಾರೆ.

ಬೆಂಬಲಕ್ಕೆ ಧನ್ಯವಾದ ಎಂದ ಮಹಿಳಾ ಬೈಕರ್

ಘಟನೆ ವೈರಲ್​ ಆಗುತ್ತಲೇ ಹಲವರು ಪ್ರಕರಣದ ಬಗ್ಗೆ ನಾನಾ ವಿಚಾರವನ್ನು ಮುಂದಿಡುತ್ತಿದ್ದಾರೆ, ಆ ಬೆನ್ನಲ್ಲೇಸಂತ್ರಸ್ತೆ ಮಹಿಳಾ ಬೈಕರ್ ಸಿಯಾ ಅವರು ಸಹ ಹೊಸ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಬೆಂಬಲವಾಗಿ ನಿಂತ ಜನರಿಗೆ ಧನ್ಯವಾದ ತಿಳಿಸಿರುವ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಕೀಲರೊಂದಿಗೆ ತೆರಳಿ ಇಂದು ಸಂಜೆಯೊಳಗೆ ಎಫ್‌ಐಆರ್ ದಾಖಲಿಸುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು, (ಏಜೆನ್ಸೀಸ್).