ರೆಸ್ಟೋರೆಂಟ್ ಬಿಲ್ ಪ್ರಕಾರ, ಒಂದು ತುಪ್ಪದ ಈರುಳ್ಳಿ ದೋಸೆಗೆ 104 ರೂ., ತುಪ್ಪದ ಪೊಂಗಲ್ಗೆ 85 ರೂ. ಮತ್ತು ಫಿಲ್ಟರ್ ಕಾಫಿಗೆ 28 ರೂ. ವಿಧಿಸಲಾಗಿದೆ. ಜಿಎಸ್ಟಿ ಸೇರಿ ಈ ಎಲ್ಲಾ ಪದಾರ್ಥಗಳ ಒಟ್ಟು ಮೊತ್ತ 230 ರೂ. ಆಗಿತ್ತು. ಆದರೆ ಇದೇ ಆಹಾರವನ್ನು ಸ್ವಿಗ್ಗಿ ಆ್ಯಪ್ನಲ್ಲಿ ನೋಡಿದಾಗ ಬೆಲೆ ಸಂಪೂರ್ಣ ಭಿನ್ನವಾಗಿತ್ತು. ಅಲ್ಲಿ ಈರುಳ್ಳಿ ದೋಸೆ ಬೆಲೆ 149 ರೂ., ಪೊಂಗಲ್ ಬೆಲೆ 115 ರೂ. ಹಾಗೂ ವಿಶೇಷ ಫಿಲ್ಟರ್ ಕಾಫಿ ಬೆಲೆ 120 ರೂ. ಇತ್ತು. ಯಾವುದೇ ರಿಯಾಯಿತಿ ಅಥವಾ ಕೂಪನ್ಗಳನ್ನು ಅನ್ವಯಿಸುವ ಮುನ್ನವೇ ಒಟ್ಟು ಮೊತ್ತ 436 ರೂ. ತಲುಪಿತ್ತು. ರೆಸ್ಟೋರೆಂಟ್ ಬಿಲ್ ಹಾಗೂ ಸ್ವಿಗ್ಗಿ ಬಿಲ್ ನಡುವೆ ಬರೋಬ್ಬರಿ 206 ರೂ. ವ್ಯತ್ಯಾಸವಿತ್ತು.