ವಾಕಿಂಗ್ ಜೋನ್‌ನಲ್ಲಿ ನಾಯಿ ಮೂತ್ರ ವಿಸರ್ಜನೆ: ಮಾಲೀಕನ ಮೇಲೆ ಹಿರಿಯರ ಹಲ್ಲೆ; ಪೊಲೀಸರಿಂದ ದೂರು ದಾಖಲು | Pet Dog

ವಾಕಿಂಗ್​ ಏರಿಯಾನಲ್ಲಿ ಮೂರ್ತ ವಿಸರ್ಜಿಸಿದ ನಾಯಿ
ವಾಕಿಂಗ್​ ಏರಿಯಾನಲ್ಲಿ ಮೂರ್ತ ವಿಸರ್ಜಿಸಿದ ನಾಯಿ
Published on

ಪ್ರಮುಖ ಮುಖ್ಯಾಂಶಗಳು

  • ಸಾಕು ನಾಯಿ ಸಂಬಂಧ ಮಾರಾಮಾರಿ
  • ಬೆಂಗಳೂರಿನ ವರ್ತೂರಿನ ಬ್ರಿಗೇಡ್ ಯುಟೋಪಿಯಾ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಘಟನೆ
  • ವಾಕಿಂಗ್​ ಏರಿಯಾನಲ್ಲಿ ಮೂರ್ತ ವಿಸರ್ಜಿಸಿದ ನಾಯಿ
  • ನಾಯಿ ಮಾಲೀಕನನ್ನು ಥಳಿಸಿದ ಹಿರಿಯ ನಾಗರಿಕರು
ಬೆಂಗಳೂರು: ಸಾಕು ನಾಯಿ (Pet Dog) ಸಂಬಂಧ ಪ್ರಾರಂಭವಾದ ಭಿನ್ನಾಭಿಪ್ರಾಯ, ಹಿಂಸಾತ್ಮಕ ಜಗಳಕ್ಕೆ ಕಾರಣವಾದ ಘಟನೆ ಬೆಂಗಳೂರಿನ ವರ್ತೂರಿನಲ್ಲಿ ವರದಿಯಾಗಿದೆ.

ನೋ ಎಂಟ್ರಿ ಜೋನ್​ಗೆ ಪ್ರವೇಶಿಸಿದ ನಾಯಿ

ಬ್ರಿಗೇಡ್ ಯುಟೋಪಿಯಾ ಅಪಾರ್ಟ್‌ಮೆಂಟ್​ ನಿವಾಸಿ ತರುಣ್ ಅರೋರಾ, ಹಿರಿಯ ನಾಗರಿಕರಿಗೆ ಮೀಸಲಿರುವ ವ್ಯಾಯಾಮ ಹಾಗೂ ನಡಿಗೆ ಪ್ರದೇಶಕ್ಕೆ ತಮ್ಮ ಸಾಕು ನಾಯಿಯನ್ನು ಕರೆದೊಯ್ಯಿದ್ದಾರೆ. ನಾಯಿಯನ್ನು ಇಲ್ಲಿಗೆ ಏಕೆ ಕರೆದುಕೊಂಡು ಬಂದಿದ್ದಿರಾ ಎಂದು ಹಿರಿಯರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಅಷ್ಟರಲ್ಲಿ ನಾಯಿ ಅಲ್ಲೇ ಮೂರ್ತ ವಿಸರ್ಜನೆ ಮಾಡಿದ್ದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ.
ಕೈ-ಕೈ ಮಿಲಾಯಿಸಿದ ನಿವಾಸಿಗಳು
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ ತರುಣ್ ಅರೋರಾ ತನ್ನ ನಾಯಿಯೊಂದಿಗೆ ನಿಂತಿದ್ದು ಅಲ್ಲಿದ್ದ ಹಿರಿಯರು ಬಯ್ಯುತ್ತಿರುವಂತೆ ಕಾಣುತ್ತಿದೆ. ನಾಯಿ ಮೂರ್ತ ವಿಸರ್ಜನೆ ಮಾಡಿದ ನಂತರ, ವೃದ್ಧನೊಬ್ಬ ಅರೋರಾ ಅವರ ಫೋನ್​ನ್ನು ಕಿತ್ತು ಎಸೆದಿದ್ದಾರೆ. ನಂತರ ಸುಮಾರು 7 ರಿಂದ 8 ಜನ ತರುಣ್​ ಮೇಲೆ ಹಲ್ಲೆ ನಡೆಸಿರುವುದು ಕಂಡುಬಂದಿದೆ.

ಪರಸ್ಪರ ದೂರು ದಾಖಲು

ಘಟನೆ ಬಳಿಕ ವರ್ತೂರು ಪೊಲೀಸ್ ಠಾಣೆಯಲ್ಲಿ ತರುಣ್ ಅರೋರಾ ದೂರನ್ನು ದಾಖಲಿಸಿದ್ದಾರೆ. ಆದರೆ ಈ ಘಟನೆ ಸಮಯದಲ್ಲಿ ಉಪಸ್ಥಿತರಿದ್ದ ಮಹಿಳೆಯೊಬ್ಬಳು, ಅವನ ನಾಯಿ ಮೂರ್ತ ವಿಸರ್ಜನೆ ಮಾಡಿದಾಗ ನಾನು ಆಕ್ಷೇಪ ವ್ಯಕ್ತ ಪಡಿಸಿದಾಗ ತರುಣ್​, ನಿನ್ನ ಮಕ್ಕಳು ವಿದೇಶದಲ್ಲಿದ್ದಾರೆ ನೀನು ಒಬ್ಬಳೆ ಇರುತ್ತಿಯಾ, ನಿನಗೆ ಹೇಗೆ ಬುದ್ದಿ ಕಲಿಸಬೇಕೆಂದು ನನಗೆ ತಿಳಿದಿದೆ ಎಂದು ಜೀವ ಬೆದರಿಕೆ ಹಾಕಿರುವ ಆರೋಪದಲ್ಲಿ ತರುಣ್​ ವಿರುದ್ಧ ಸಹ ದೂರು ದಾಖಲಾಗಿದೆ.

ಪೊಲೀಸ್​ರಿಂದ ಮುಂದುವರೆದ ತನಿಖೆ

ಪೊಲೀಸ್​ ಅಧಿಕಾರಿಗಳು ಎರಡೂ ಪಕ್ಷದವರ ದೂರನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದು, ಸಿಸಿಟಿವಿ ವೀಕ್ಷಣೆ ಮತ್ತು ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಅಪಾರ್ಟ್‌ಮೆಂಟ್‌ಗಳಲ್ಲಿ ಈ ರೀತಿಯ ಘಟನೆಗಳು ನಿರಂತರವಾಗಿ ವರದಿಯಾಗುತ್ತಿದ್ದು, ತಲಮಾರಿನ ಅಂತರವೇ ಇದಕ್ಕೆ ಕಾರಣ ಎನ್ನುವುದು ಪೊಲೀಸರ ವಾದವಾಗಿದೆ. ಈ ಪ್ರಕರಣದ ಸಂಬಂಧ ಯಾರನ್ನು ಇಲ್ಲಿವರೆಗೆ ಬಂಧಿಸಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net