ಧುರಂಧರ್ 2 ಟ್ರೇಲರ್ ರೀಲೀಸ್​: ಲಿಯಾರಿಯಲ್ಲಿ ಹರಿಯಲಿದೆ ರಕ್ತದ ಹೊಳೆ; ಇನ್ನೂ ನಿಗೂಢವಾಗೆ ಉಳಿದ ಬಡೇ ಸಾಬ್​!Dhurandhar 2 Trailer

ಧುರಂಧರ್ 2 ಚಿತ್ರದ ಟ್ರೇಲರ್ ಬಿಡುಗಡೆ
ಧುರಂಧರ್ 2 ಚಿತ್ರದ ಟ್ರೇಲರ್ ಬಿಡುಗಡೆ
Published on

ಪ್ರಮುಖ ಮುಖ್ಯಾಂಶಗಳು

  • ಧುರಂಧರ್ 2 ಚಿತ್ರದ ಟ್ರೇಲರ್ ಬಿಡುಗಡೆ
  • ಲಿಯಾರಿಯ ಸಿಂಹಾಸನಕ್ಕಾಗಿ ಭಾರಿ ಹೋರಾಟ
  • ನಿಗೂಢವಾಗಿ ಉಳಿದ ಬಡೇ ಸಾಬ್​ ಪಾತ್ರ!
ಬಾಲಿವುಡ್​: ಭಾರತ ಚಿತ್ರರಂಗದ ಬಹು ನೀರಿಕ್ಷಿತಿ ಸಿನಿಮಾ ಧುರಂಧರ್​ 2 (Dhurandhar 2 Trailer) ಸಿನಿಮಾದ ಟ್ರೇಲರ್​ ಈಗ ಹೊರಬಿದ್ದಿದ್ದು ಈ ಸಿನಿಮಾ ಮಾರ್ಚ್​ 19 ಕ್ಕೆ ಬಿಡುಗಡೆಯಾಗಲಿದೆ.
ಸಿನಿಮಾ ತಂಡ ಹೇಳಿದಂತೆ ಮಾರ್ಚ್​ 7 ಬೆಳಿಗ್ಗೆ 11.01 ಕ್ಕೆ ರೀಲೀಸ್​ ಆದ ಟ್ರೇಲರ್​ ಸುಮಾರು 3.26 ಸೆಕೆಂಡ್​ ಉದ್ದವಿದ್ದು, ಹಿಂದಿ ಜೊತೆಗೆ ಕನ್ನಡ, ತಲಗು, ತಮಿಳು ಮತ್ತು ಮಳಿಯಾಳಂ ಭಾಷೆಯಲ್ಲಿ ಟ್ರೇಲರ್ ಬಿಡುಗಡೆಯಾಗಿದೆ.

ಟ್ರೇಲರ್​ನಲ್ಲಿ ಏನಿದೆ?

ಧುರಂಧರ್​ ಮೊದಲ ಭಾಗ ಎಲ್ಲಿ ಕೊನೆಯಾಗಿತ್ತೊ ಅದರ ನಂತರ ಲಿಯಾರಿಯಲ್ಲಿ ಏನಾಯಿತು ಎನ್ನುವುದು ಈ ಸಿನಿಮಾದಲ್ಲಿ ನೋಡ ಬಹುದಾಗಿದೆ. ಟ್ರೇಲರ್​ನಲ್ಲಿ ಹಮ್ಜಾ ಅಲಿ ಮಜಾರಿ (ರಣವೀರ್ ಸಿಂಗ್​) ಪಾಕಿಸ್ತಾನಕ್ಕೆ ಬರುವ ಮುನ್ನ ಏನು ಮಾಡುತ್ತಿದ್ದ ಎನ್ನುವ ದೃಶ್ಯವನ್ನು ನೋಡಬಹುದು.
ಲಿಯಾರಿ ಕಿಂಗ್​ ರೆಹಮಾನ್​ ಡಕೈತ್ (ಅಕ್ಷಯ್​ ಖನ್ನಾ) ಮರಣ ಹೊಂದಿದ್ದು, ರೆಹಮಾನ್​ ನಂತರ ಲಿಯಾರಿಯ ಸಿಂಹಾಸನಕ್ಕೆ ನಡೆಯುವ ಕಾಳಗವನ್ನು ನಾವು ನೋಡಬಹುದು. ಹಾಗೆಯೇ ಲಿಯಾರಿಯಿಂದ ಭೂಗತ ಜಗತನ್ನು ನಾಶ ಮಾಡಲು ಪಣ ತೊಟ್ಟಿರುವ ಎಸ್ಪಿ ಚೌಧರಿ ಅಸ್ಲಂ (ಸಂಜಯ್​ ದತ್ತ್) ಯಾವ ರೀತಿ ಕಾರ್ಯಾಚರಣೆ ಮಾಡಲಿದ್ದಾರೆ ಎನ್ನುವುದಕ್ಕೆ ಮಾರ್ಚ್​ 19 ರಂದು ಉತ್ತರ ದೊರೆಯಲಿದೆ.
ಅದೇ ರೀತಿ ಐಎಸ್​ಐ ಮುಖ್ಯಸ್ಥ ಮೇಜರ್​ ಇಲ್ಯಾಸ್​ ಕಶ್ಮೀರಿ ಭಾರತದ ವಿರುದ್ಧ ಏನು ಸಂಚನ್ನು ರೂಪಿಸುತ್ತಿದ್ದಾನೆ ಮತ್ತು ಅದನ್ನು ನಮ್ಮ ನಾಯಕ ಹೇಗೆ ತಡೆಯುತ್ತಾನೆ ಎನ್ನುವುದನ್ನು ಕಣ್ಣತುಂಬಿಕೊಳ್ಳಲು ಮಾರ್ಚ್​ 19 ರ ವರೆಗೆ ಕಾಯಲೇ ಬೇಕಾಗಿದೆ.

ಬಡೇ ಸಾಬ್​ ಯಾರು?

ಧುರಂಧರ್​ 2 ಸಿನಿಮಾದಲ್ಲಿ ಬಡೇ ಸಾಬ್​ ಎಂಬ ಪಾತ್ರ ಭಾರಿ ಚರ್ಚೆಗೆ ಗ್ರಾಸವಾಗಿತ್ತು, ಆದರೆ ಈ ಪಾತ್ರದ ಬಗ್ಗೆ ಟ್ರೇಲರ್​ನಲ್ಲಿ ಯಾವುದೇ ಉತ್ತರ ದೊರೆತಿಲ್ಲ. ಬಹುಶಃ ಈ ಪಾತ್ರವನ್ನು ನೇರವಾಗಿ ಸಿನಿಮಾದಲ್ಲಿಯೇ ತೋರಿಸಬಹುದು ಎನ್ನುವುದು ಸಿನಿಮಾ ವಿಶ್ಲೇಷಕರ ವಾದವಾಗಿದೆ.
ಇನ್ನೂ ಈ ಬಡೇ ಸಾಬ್​ ಪಾತ್ರ ಯಾರನ್ನು ಪ್ರೇರೆಪಣೆ ಪಡೆದು ನಿರ್ಮಿಸಲಾಗಿದೆ ಎನ್ನುವುದಕ್ಕೂ ಯಾವುದೇ ಸ್ಪಷ್ಟ ಉತ್ತರ ಲಭ್ಯವಾಗಿಲ್ಲ. ಕೆಲವೊಬ್ಬರು ಇದು ಭೂಗತ ದೊರೆ ದಾವೂದ್ ಇಬ್ರಾಹಿಂನನ್ನು ಪ್ರೇರಣೆಯಾಗಿ ತೆಗೆದುಕೊಂಡ ಪಾತ್ರ ಎಂದರೆ ಇನ್ನೂ ಕೆಲವರು ಇದು ಪಾಕಿಸ್ತಾನದ ಮಾಜಿ ಪ್ರಧಾನಿ ಪರವೇಜ್​ ಮುಷರಫ್​ ಅವರದ್ದು ಎಂದು ಹೇಳುತ್ತಿದ್ದಾರೆ. ಆದರೆ ಈ ಎಲ್ಲಾ ಅಂತೆ ಕಂತೆಗಳಿಗೆ ಮಾರ್ಚ್​ 19 ರಂದೇ ಉತ್ತರ ದೊರೆಯಲಿದೆ.

ಧುರಂಧರ್ ಬಗ್ಗೆ

ಧುರಂಧರ್​ ಇದೊಂದು ಸ್ಪೈ-ತ್ರಿಲ್ಲರ್​ ಸಿನಿಮಾವಾಗಿದ್ದು, ಪಾಕಿಸ್ತಾನದಲ್ಲಿ ಭಾರತೀಯ ಗೂಢಚರ ಹೇಗೆ ಕೆಲಸ ಮಾಡುತ್ತಾನೆ ಎನ್ನುವುದೇ ಈ ಸಿನಿಮಾದ ಕಥಾ ವಸ್ತುವಾಗಿದೆ. ಈ ಸಿನಿಮಾದ ಮೊದಲ ಭಾಗವು 2025 ರ ಡಿಸೆಂಬರ್​ನಲ್ಲಿ ತೆರೆಕಂಡು ಸುಮಾರು 1,000 ಕೋಟಿ ಕಲೆಕ್ಷನ್​ ಮಾಡಿತ್ತು.
ಈ ಸಿನಿಮಾದಲ್ಲಿ ರಣವೀರ್ ಸಿಂಗ್​, ಅಕ್ಷನ್​ ಖನ್ನಾ, ಆರ್​.ಮಾಧವನ್​, ಅರ್ಜುನ್​ ರಾಂಪಾಲ್​, ಸಂಜಯ್​ ದತ್ತ್, ಸಾರಾ ಅರ್ಜುನ್​ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಉರಿ ಖ್ಯಾತಿಯ ಆದಿತ್ಯ ಧರ್​ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net