ರಣವೀರ್ ನಟನೆಯ ಆದಿತ್ಯ ಧರ್ ನಿರ್ದೇಶನದ ಸಿನಿಮಾ ಧುರಂಧರ್ 2
ಬಾಲಿವುಡ್: ರಣವೀರ್ ಸಿಂಗ್ ಅಭಿನಯದ ಹಾಗೂ ಆದಿತ್ಯ ಧರ್ ನಿರ್ದೇಶನದ ಬಹು ನೀರಿಕ್ಷಿತ ಧುರಂಧರ್ 2 (Dhurandhar 2) ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾಗಲಿದ್ದು, ಈ ಚಿತ್ರದ ಟ್ರೇಲರ್ ನಾಳೆ (ಮಾ.7) ಕ್ಕೆ ಬಿಡುಗಡೆಯಾಗಲಿದೆ.
ಈ ಸಿನಿಮಾದ ಟ್ರೇಲರ್ ಹೋಳಿ ದಿನ ಬಿಡುಗಡೆಯಾಗಲಿದೆ ಎಂಬ ವದಂತಿ ಹಬ್ಬಿತ್ತು, ಆದರೆ ಈ ಕುರಿತು ಸಿನಿಮಾದ ತಂಡ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಈಗ ಸಿನಿಮಾದ ಟ್ರೇಲರ್ ಬಗ್ಗೆ ರಣವೀರ್ ಸಿಂಗ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಟ್ರೇಲರ್ ಮಾರ್ಚ್ 7 ಕ್ಕೆ ಬೆಳಿಗ್ಗೆ 11.01 ನಿಮಿಷಕ್ಕೆ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.
ಹೊಸ ಪೋಸ್ಟರ್ ಬಿಡುಗಡೆ
ಟ್ರೇಲರ್ ಬಗ್ಗೆ ಮಾಹಿತಿ ಹಂಚಿಕೊಳ್ಳಲು ನೂತನ ಪೋಸ್ಟರ್ನ್ನು ಬಳಸಲಾಗಿದ್ದು, ಈ ಪೋಸ್ಟರ್ನಲ್ಲಿ ಸಿನಿಮಾದ ಮುಖ್ಯ ಪಾತ್ರವಾದ ಹಮಜಾ ಅಲಿ ಮಜಾರಿ (ರಣವೀರ್ ಸಿಂಗ್) ಪಿಸ್ತೂಲನ್ನು ಹಿಡಿದು ನಿಂತಿರುವುದನ್ನು ನೋಡಬಹುದಾಗಿದೆ. ಈ ಟ್ರೇಲರ್ ಮಾರ್ಚ್ 7 ರಂದು ಹಿಂದಿ, ತೆಲಗು, ಮಳಿಯಾಳಂ, ಕನ್ನಡ ಹಾಗೂ ತಮಿಳು ಭಾಷಡಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಭಿಮಾನಿಗಳು ಏನಂತಾರೆ
ಸಿನಿಮಾನದ ಟ್ರೇಲರ್ ಯಾವಾಗ ಮತ್ತು ಎಷ್ಟು ಗಂಟೆಗೆ ಬಿಡುಗಡೆಯಾಗಲಿದೆ ಎಂದು ತಿಳಿದ ಕೂಡಲೇ ಸಿನಿ ಪ್ರೇಕ್ಷಕರ ಖುಷಿಯ ಪಾರವೇ ಇಲ್ಲವೆಂಬತ್ತಾಗಿದೆ. ಒಬ್ಬ ಅಭಿಮಾನಿ 2,000 ಕೋಟಿ ಲೋಡಿಂಗ್ ಎಂದು ಬರೆದರೆ, ಬಾಲಿವುಡ್ನ ಎಲ್ಲಾ ದಾಖಲೆಗಳು ಧೂಳಿಪಟವಾಗಲಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಮತ್ತೊಬ್ಬರು ನಾಳೆ ಯೂಟ್ಯೂಬ್ ಕ್ರಾಶ್ ಆಗೋದು ಟ್ಯಾರಂಟಿ ಎಂದು ಭವಿಷ್ಯ ನುಡಿದಿದ್ದಾರೆ.
ಧುರಂಧರ್ ಇದೊಂದು ಸ್ಪೈ-ತ್ರಿಲ್ಲರ್ ಸಿನಿಮಾವಾಗಿದ್ದು, ಪಾಕಿಸ್ತಾನದಲ್ಲಿ ಭಾರತೀಯ ಗೂಢಚರ ಹೇಗೆ ಕೆಲಸ ಮಾಡುತ್ತಾನೆ ಎನ್ನುವುದೇ ಈ ಸಿನಿಮಾದ ಕಥಾ ವಸ್ತುವಾಗಿದೆ. ಈ ಸಿನಿಮಾದ ಮೊದಲ ಭಾಗವು 2025 ರ ಡಿಸೆಂಬರ್ನಲ್ಲಿ ತೆರೆಕಂಡು ಸುಮಾರು 1,000 ಕೋಟಿ ಕಲೆಕ್ಷನ್ ಮಾಡಿತ್ತು.
ಈ ಸಿನಿಮಾದಲ್ಲಿ ರಣವೀರ್ ಸಿಂಗ್, ಅಕ್ಷನ್ ಖನ್ನಾ, ಆರ್.ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್ತ್, ಸಾರಾ ಅರ್ಜುನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಉರಿ ಖ್ಯಾತಿಯ ಆದಿತ್ಯ ಧರ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ,(ಏಜನ್ಸೀಸ್).