ಫೋನ್ನಲ್ಲಿ ಅಲರ್ಟ್ ಮೆಸೇಜ್ಗಳು ಬರಲಿವೆ ಎಂದು ಏಪ್ರಿಲ್ 29ರಂದೇ ಡಾಟ್ ಇಂಡಿಯಾ ಮಾಹಿತಿಯನ್ನು ಹಂಚಿಕೊಂಡಿತ್ತು. ನಿಮ್ಮ ಮೊಬೈಲ್ ಒಮ್ಮೆಲೆ ವೈಬ್ರೇಟ್ ಆಗಬಹುದು ಆದರೆ, ಭಯ ಪಡುವ ಅಗತ್ಯವಿಲ್ಲ ಇದು ದೇಶಾದ್ಯಂತ ತ್ವರಿತ, ಭೂ-ಉದ್ದೇಶಿತ ವಿಪತ್ತು ಎಚ್ಚರಿಕೆಗಳನ್ನು ಸಕ್ರಿಯಗೊಳಿಸಲು ಭಾರತವು ತನ್ನ ಸ್ಥಳೀಯ ಸೆಲ್ ಪ್ರಸಾರ ವ್ಯವಸ್ಥೆಯನ್ನು ಪರೀಕ್ಷಿಸುತ್ತಿದೆ. ನಿಮ್ಮ ಮೊಬೈಲ್ ಸೆಟ್ಟಿಂಗ್ಗಳಲ್ಲಿ ಪರೀಕ್ಷಾ ಚಾನಲ್ ಅನ್ನು ಸಕ್ರಿಯಗೊಳಿಸಿದ್ದರೆ, ನೀವು ಇಂಗ್ಲಿಷ್,ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷಾ ಸಂದೇಶಗಳನ್ನು ಸ್ವೀಕರಿಸಬಹುದು. ಇದು ಕೇವಲ ಪರೀಕ್ಷಾರ್ಥ ಭಾಗವಾಗಿ ನಡೆಸುತ್ತಿರುವುದು ನೆನಪಿಡಿ ಎಂದು ಟ್ವೀಟ್ ಮಾಡಿತ್ತು.