ಸ್ವಾತಂತ್ರ್ಯ ದಿನಾಚರಣೆ ಕೇವಲ ಧ್ವಜಾರೋಹಣಕ್ಕೆ ಸೀಮಿತವಾಗಬಾರದು. ಒಳ್ಳೆಯ ಶಿಕ್ಷಣ ಪಡೆಯುವುದು, ಪರಿಸರ ಕಾಳಜಿ, ಕಾನೂನು ಪಾಲನೆ, ವೈವಿಧ್ಯತೆಯನ್ನು ಗೌರವಿಸುವುದು ಮತ್ತು ಸಮಾಜದ ಒಳಿತಿಗಾಗಿ ಕೆಲಸ ಮಾಡುವ ಮೂಲಕ ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಸರ್ವಧರ್ಮ ಸಮನ್ವಯ ರಾಷ್ಟ್ರದಲ್ಲಿ ಸಂವಿಧಾನಎದ ಆಶಯದಂತೆ ಸಮಾನರಾಗಿ ಬಾಳಬೇಕು. ಸ್ವಾತಂತ್ರ್ಯ ನಮಗೆ ಸಿಕ್ಕ ಹಕ್ಕು ಮಾತ್ರವಲ್ಲ, ಅದನ್ನು ಗೌರವಿಸಿ ದೇಶದ ಭವಿಷ್ಯವನ್ನು ಉಜ್ವಲಗೊಳಿಸುವ ಜವಾಬ್ದಾರಿಯೂ ಹೌದು, (ಏಜನ್ಸೀಸ್).