ಹಂಪಿ: ವಿವಿಧ ವಸ್ತು ಪ್ರದರ್ಶನಗಳಲ್ಲಿ ಅರಣ್ಯ ಇಲಾಖೆ ಈ ಬಾರಿ ವಿಭಿನ್ನವಾಗಿ ಪ್ರದರ್ಶನ ಏರ್ಪಡಿಸಿದೆ. ಕೃತಕವಾಗಿಯೇ ಅರಣ್ಯ ಮರು ಸೃಷ್ಟಿಸುವ ಮೂಲಕ ಉತ್ಸವಕ್ಕೆ ಬಂದವರಿಗೆ ಕಾಡಿನ ಜೀವ ವೈವಿಧ್ಯ ಪರಿಚಯಿಸುವ ಕೆಲಸ ಮಾಡಿತು. ಗುಡ್ಡಗಾಡು, ಬಗೆ ಬಗೆ ಮರಗಳು, ಪೊಟರೆ, ಹುಲಿ, ಚಿರತೆ, ಕರಡಿ, ನರಿ, ತೋಳ ಹಾಗೂ ಇನ್ನಿತರ ಕಾಡು ಪ್ರಾಣಿಗಳ ಪ್ರತಿಕೃತಿ ನಿರ್ಮಿಸಿದೆ.