ಕೌಟುಂಬಿಕ ಕಲಹ: ಬಳ್ಳಾರಿಯಲ್ಲಿ ರಾಜಿ ಪಂಚಾಯತಿಗೆ ಬಂದಿದ್ದ ಪತ್ನಿ, ಮಾವನನ್ನು ಭೀಕರವಾಗಿ ಕೊಲೆಗೈದ ಪತಿ | brutally murders

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಬಳ್ಳಾರಿ: ಕೌಟುಂಬಿಕ ಕಲಹ ಹಿನ್ನೆಲೆ ಪತಿಯೊಬ್ಬ ರಾಜಿ ಪಂಚಾಯತಿಗೆ ಬಂದಿದ್ದ ತನ್ನ ಪತ್ನಿ ಮತ್ತು ಮಾವನನ್ನು ಭೀಕರವಾಗಿ ಕೊಲೆ(brutally murders) ಮಾಡಿರುವ ಘಟನೆ ಮಂಗಳವಾರ(ಜು. 07) ಬಳ್ಳಾರಿ ಜಿಲ್ಲೆಯ ಗುಗ್ಗರ ಹಟ್ಟಿಯಲ್ಲಿ ನಡೆದಿದೆ.
ನಾಗಲಕ್ಷ್ಮೀ(24) ಮತ್ತು ಆಕೆಯ ತಂದೆ ಶ್ರೀನಿವಾಸ (48) ಕೊಲೆಯಾದವರು. ಆರೋಪಿ ತೇಜಾ ಕೊಲೆ ಮಾಡಿದ ಆರೋಪಿ. ಕೆಲವು ವರ್ಷಗಳ ಹಿಂದೆ ದಂಪತಿಯ ಮದುವೆ ನಡೆದಿತ್ತು ಎನ್ನಲಾಗಿದೆ. ಧೋಬಿ ಕೆಲಸ ಮಾಡ್ತಿದ್ದ ಆರೋಪಿ ತೇಜಾ, ಇತ್ತೀಚೆಗೆ ಅನುಮಾನದಿಂದ ನಿತ್ಯ ತನ್ನ ಪತ್ನಿ ಜೊತೆ ಜಗಳವಾಡುತ್ತಿದ್ದ ಎನ್ನಲಾಗಿದೆ.
ಜಗಳದಿಂದ ಬೇಸತ್ತಿದ್ದ ನಾಗಲಕ್ಷ್ಮಿ ತವರು ಮನೆಗೆ ಹೋಗಿದ್ದಳು. ಬಳಿಕ ತಂದೆ ಮತ್ತು ಆಕೆ ರಾಜೀ ಪಂಚಾಯತಿ ಮಾಡಲು ಬಂದಿದ್ದಾರೆ. ಈ ವೇಳೆ ಆರೋಪಿ ತೇಜಾ ಮತ್ತು ಆತನ ತಂದೆ ಗುರುಶಂಕರ ಪತ್ನಿ ಮತ್ತು ಆಕೆಯ ತಂದೆ ಮೇಲೆ ದಾಳಿ ನಡೆಸಿ ಚಾಕುವಿನಿಂದ ಇರಿದು ಕೊಂದಿದ್ದಾರೆ.
ಸ್ಥಳಕ್ಕೆ ಬಳ್ಳಾರಿ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧ ತೇಜಾ ಮತ್ತು ಆತನ ತಂದೆ ಗುರುಶಂಕರನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net