Cauvery Water Dispute; CWMA ಆದೇಶ ಪಾಲಿಸುವಂತೆ ಕರ್ನಾಟಕಕ್ಕೆ ಸುಪ್ರೀಂ ನಿರ್ದೇಶನ, ವಿಚಾರಣೆ ಮುಂದೂಡಿಕೆ

Cauvery Water Dispute Supreme Court:
Cauvery Water Dispute Supreme Court:
Published on

ಪ್ರಮುಖ ಮುಖ್ಯಾಂಶಗಳು

  • ಕಾವೇರಿ ನೀರು ಹಂಚಿಕೆ ವಿಚಾರ CWMA ಆದೇಶ ಪಾಲಿಸುವಂತೆ ಸುಪ್ರೀಂ ನಿರ್ದೇಶನ
  • ಮುಂದಿನ ಸೋಮವಾರಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್​
  • ತಮಿಳುನಾಡಿಗೆ ನೀರು ಬಿಡುವಂತೆ CWMA ಆದೇಶ ನೀಡಿದೆ, ಕರ್ನಾಟಕ ಈ ಆದೇಶವನ್ನು ಪಾಲನೆ ಮಾಡುತ್ತಿಲ್ಲ ಎಂದು ಅರ್ಜಿ

ನವದೆಹಲಿ:

ಕಾವೇರಿ ನದಿ ನೀರು ಹರಿಸುವ ವಿಚಾರವಾಗಿ ತಮಿಳು ನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​,

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA)

ಆದೇಶ ಪಾಲನೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನಕೊಟ್ಟಿದೆ. ಜೊತೆಗೆ ವಿಚಾರಣೆಯನ್ನು ಒಂದು ವಾರಕ್ಕೆ ಮುಂದೂಡಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA)

ಕೊಟ್ಟಿರುವ ಸೂಚನೆಯನ್ನು ಕರ್ನಾಟಕ ಸರ್ಕಾರ ಪಾಲಿಸುತ್ತಿಲ್ಲ. ಬಾಕಿ ಉಳಿಸಿಕೊಂಡಿರುವ ನೀರನ್ನು ಬಿಡುಗಡೆ ಮಾಡುತ್ತಿಲ್ಲ. ಇದರಿಂದ ಕೃಷಿಗೂ ನೀರಿಲ್ಲದಂತಾಗಿದೆ ಎಂದು ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಕೆ ಮಾಡಿತ್ತು.

ಅರ್ಜಿ ವಿಚಾರಣೆ ಮುಂದೂಡಿಕೆ

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶವನ್ನು ಪಾಲಿಸುವಂತೆ ನಿರ್ದೇಶಿಸಿ,

ಮುಂದಿನ ಸೋಮವಾರಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.

ವಾದ-ವಿವಾದ

ತಮಿಳುನಾಡಿಗೆ ನೀರು ಬಿಡುವಂತೆ CWMA ಆದೇಶ ನೀಡಿದ್ದರೂ, ಕರ್ನಾಟಕ ಸರ್ಕಾರ ಆ ಆದೇಶವನ್ನು ಪಾಲಿಸುತ್ತಿಲ್ಲ ರಾಜ್ಯದಲ್ಲಿ ಕೃಷಿ ಕಾರ್ಯಗಳಿಗೆ ನೀರು ಬಳಸಿಕೊಳ್ಳಲಾಗುತ್ತಿದ್ದು, ನಮಗೆ ಈಗ ಕೃಷಿಗೆ ನೀರು ಇಲ್ಲದಂತಾಗಿದೆ ಎಂದು ತಮಿಳುನಾಡು ಪರ ವಕೀಲರು ಆತಂಕ ವ್ಯಕ್ತಪಡಿಸಿದ್ದಾರೆ.

ನಮಗೆ ನೀರು ಬಿಡಲು ಸಾಧ್ಯವಿಲ್ಲ.

ಮುಂಗಾರು ಮಳೆಯು ಅನಿಶ್ಚಿತತೆಯಿಂದ ಕೂಡಿದೆ. ಈಗ ನೀರು ಹರಿಸಿದರರೆ ಭವಿಷ್ಯದಲ್ಲಿ ನೀರಿಗೆ ಸಮಸ್ಯೆ ಉಂಟಾಗುತ್ತದೆ. ಜಲಾಶಯಗಳು ಭರ್ತಿಯಾಗಲಿ

ಎಂಬ ನಿಲುವನ್ನು ಕರ್ನಾಟಕ ಕಾಯ್ದುಕೊಂಡಿದ್ದು, ಈ ಕುರಿತ ಕಾನೂನು ಸಮರ ಮುಂದುವರಿದಿದೆ.

ಆಗಸ್ಟ್​ 12ರಂದು ಅರ್ಜಿ ವಿಚಾರಣೆ ನಡೆಸಬೇಕಿತ್ತು. ಆದರೆ ಪೀಠದ ನೇತೃತ್ವವಹಿಸಿದ್ದ ನ್ಯಾಯಮೂರ್ತಿ ವಿಕ್ರಮ್​ನಾಥ್​ ಅವರು ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆ, ಆ ವಿಚಾರಣೆಯನ್ನು ಆಗಸ್ಟ್​ 17ಕ್ಕೆ ಮುಂದೂಡಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net