APK ಫೈಲ್ ಓಪನ್​​​​ ಮಾಡಿ​ ಲಕ್ಷ ಲಕ್ಷ ಹಣ ಕಳೆದುಕೊಂಡ ಅರಣ್ಯಾಧಿಕಾರಿ; ಸೈಬರ್​​ ವಂಚನೆಯಿಂದ ಎಚ್ಚರವಾಗಿರಲು ಹೀಗೆ ಮಾಡಿ..Bengaluru Cyber Crime

Bengaluru Officer Downloads  APK File Loses Rs 10 Lakh
Bengaluru Officer Downloads APK File Loses Rs 10 Lakh
Published on

ಪ್ರಮುಖ ಮುಖ್ಯಾಂಶಗಳು

  • ವಾಟ್ಸಪ್ ನಲ್ಲಿ ಮದುವೆ ಕಾರ್ಡ್ ಬಂತು ಎಂದು ಓಪನ್ ಮಾಡಿದ್ರೆ ಹುಷಾರ್.
  • ಎಪಿಕೆ ಫೈಲ್‌ ತೆರೆದು 9, ಲಕ್ಷ, 96 ಸಾವಿರ ರೂ. ಹಣ ಕಳೆದುಕೊಂಡ ಅರಣ್ಯ ಅಧಿಕಾರಿ.
  • ಬೆಂಗಳೂರಿನ ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆ ರಣ್ಯ ಅಧಿಕಾರಿಯಿಂದ ದೂರು.
Bengaluru Officer Downloads APK File Loses Rs 10 Lakh: ವಾಟ್ಸಾಪ್​ಗೆ ಬಂದಿದ್ದ ಮದುವೆ ಇನ್ವಿಟೇಶನ್​ ಕಾರ್ಡ್​ ಮೇಲೆ ಕ್ಲಿಕ್​ ಮಾಡಿದ್ದೇ ತಡ, ಮೊಬೈಲ್​ ಹ್ಯಾಕ್​ ಆಗಿ ಮಗಳ ಮದುವೆಗೆ ಕೂಡಿಟ್ಟಿದ್ದ ಲಕ್ಷ, ಲಕ್ಷ ಹಣವನ್ನು ಅರಣ್ಯಾಧಿಕಾರಿಯೊಬ್ಬರು ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಇಂತಹ ಸಣ್ಣ ತಪ್ಪುಗಳಿಂದ ಪಾರಾಗೋದು ಹೇಗೆ ಎನ್ನುವುದರ ಬಗ್ಗೆ ಮಾಹಿತಿ ಈ ಲೇಖನದಲ್ಲಿ ಇದೆ.

ಮಗಳ ಮದುವೆಗೆಂದು ಇಟ್ಟಿದ್ದ ಹಣ ಲೂಟಿ

ಜುಲೈ 13ರಂದು ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವ ರಮೇಶ್​ ಬಾಬು ಅವರಿಗೆ ವಾಟ್ಸಾಪ್​ನಲ್ಲಿ ಮ್ಯಾರೇಜ್ ಇನ್ವೀಟೇಷನ್ ಮೆಸೇಜ್​ ಬಂದಿತ್ತು. ಮಾರನೇ ದಿನ ಅಂದರೆ, ಜು.14ರಂದು ಸ್ನೇಹಿತರು ಕಳಿಸಿದ್ದಾರೆಂದು ಎಪಿಕೆ ಫೈಲ್​ ಮೇಲೆ ಕ್ಲಿಕ್​ ಮಾಡಿದ್ದಾರೆ. ಹಾಗೆ ಮಾಡಿ 30 ನಿಮಿಷಕ್ಕೆ ಅಕೌಂಟ್​​ನಲ್ಲಿದ್ದ ಸುಮಾರು 9, ಲಕ್ಷ, 96 ಸಾವಿರ ಹಣ ಕಟ್ ಆಗಿತ್ತು.ಅದರ ಮೆಸೇಜ್​ ಕೂಡ ಬಂದಿದೆ. ಆದರೆ ಈ ಬಗ್ಗೆ ತಕ್ಷಣ ಗಮನ ಕೊಡದ ಅವರು, ಸಮಯ ಸಿಕ್ಕಾಗ ಮೆಸೇಜ್​ ಓದಲು ಶುರು ಮಾಡಿದಾಗ ಈ ಹಣ ವರ್ಗಾವಣೆಯಾಗಿರುವ ಶಾಕಿಂಗ್​ ವಿಚಾರವನ್ನು ಅರಿತುಕೊಂಡಿದ್ದಾರೆ. ಇದು ಮಗಳ ಮದುವೆಗಾಗಿ ಕೂಡಿಡಲಾಗಿತ್ತು..ಆದರೆ ಒಂದೇ ಒಂದು ಕ್ಲಿಕ್​ನಿಂದಾಗಿ ಹಣ ಕಳ್ಳತನವಾಗಿದೆ ಎಂದು ಹೇಳಲಾಗಿದೆ.
ರಮೇಶ್​ ಬಾಬು ಅವರಿಗೆ ಮಾತ್ರವಲ್ಲದೇ ಅವರ ಸ್ನೇಹಿತರು ಸೇರಿ ಹತ್ತು ಜನಕ್ಕೆ ಇದೇ APK ಫೈಲ್​ ಮೆಸೇಜ್​ ಬಂದಿದೆ. ಈ ಬಗ್ಗೆ ಕೂಡಲೇ ಅವರು 1930 ಸೈಬರ್​​ ಹೆಲ್ಪ್​​ಲೈನ್​​ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇಷ್ಟೇ ಅಲ್ಲದೆ ತಮ್ಮ ಬ್ಯಾಂಕ್​​​​ ನವರಿಗೂ ಮಾಹಿತಿ ನೀಡಿದ್ದಾರೆ. ಆ ಬಳಿಕ ಬೆಂಗಳೂರು ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸೈಬರ್​ ವಂಚಕರ ಬ್ಯಾಂಕ್​ ಅಕೌಂಟ್​ ಫ್ರೀಜ್​ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ,.

ವಂಚನೆಯಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು?

ಗೂಗಲ್​ ಪ್ಲೇಸ್ಟೋರ್​​ನಲ್ಲಿ ಸಿಗದ ಆ್ಯಪ್‌ಗಳನ್ನು ಇನ್​​ಸ್ಟಾಲ್​ ಮಾಡಲು ಎಪಿಕೆ ಫೈಲ್​ ಬಳಕೆ ಮಾಡಲಾಗುತ್ತದೆ. ಆದರೆ ಇತ್ತೀಚೆಗೆ ವಂಚಕರು ಇದನ್ನು ಸೈಬರ್​​​ ವಂಚನೆಗೆ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಒತ್ತಡದ ಮಧ್ಯೆ ಕೆಲವರು ಅದನ್ನು ಕ್ಲಿಕ್​ ಮಾಡಿ ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದು ಉಂಟು. ಹೀಗಾಗಿ ಇನ್ಮುಂದ ಇಂತಹ ಫೈಲ್​ ಕ್ಲಿಕ್ ಮಾಡುವ ಮುನ್ನ ಕೆಲವೊಂದು ನಿಯಮವನ್ನು ಪಾಲಿಸಿ.
  • ವಾಟ್ಸಾಪ್​ ಸೇರಿದಂತೆ ಯಾವುದೇ ಮೆಸೇಜಿಂಗ್​ ಆ್ಯಪ್‌ಗಳ ಮೂಲಕ ಬರುವ ಎಪಿಕೆ ಞಐಳ್​ ಮೇಲೆ ಕ್ಲಿಕ್​ ಮಾಡಲು ಹೋಗಲೇ ಬೇಡಿ. ಅದನ್ನು ಅಲ್ಲಿಂದಲ್ಲೇ ಡಿಲೀಟ್ ಮಾಡಿಬಿಡಿ
  • ಅಧಿಕೃತ ಅಪ್ಲಿಕೇಶನ್ ಮಾತ್ರ ಇರಲಿ
ನಿಮ್ಮ ಮೊಬೈಲ್​ನಲ್ಲಿ ಇನ್​ಸ್ಟಾಲ್​ ಮಾಡಿಕೊಳ್ಳಬೇಕಾದ ಆ್ಯಪ್‌ಗಳನ್ನು ಕೇವಲ ಗೂಗಲ್​ ಪ್ಲೇಸ್ಟೋರ್​ನಿಂದ ಮಾತ್ರ ಡೌನ್ಲೋಡ್​ ಮಾಡಿ, ಅಧಿಕೃತವಾಗಿಲ್ಲದ ಯಾವುದೇ ಅಪ್ಲಿಕೇಶನ್​ಗಳು ನಿಮ್ಮ ಮೊಬೈಲ್​​ನಲ್ಲಿ ಇನ್​ಸ್ಟಾಲ್​ ಆಗೋದು ಬೇಡ.
  • ಸೆಟ್ಟಿಂಗ್ಸ್​ ಹೀಗಿರಲಿ
ನಿಮ್ಮ ಮೊಬೈಲ್​​ನಲ್ಲಿ ಇನ್​ಸ್ಟಾಲ್​ ಅನೌನ್​​ ಅಪ್ಲಿಕೇಶನ್​​ ಎನ್ನುವ ಆಯ್ಕೆಯನ್ನು ಆಫ್​ ಮಾಡಿ ಸೇಪ್​​​ ಆಗಿಡಿ.
  • ಅಕಸ್ಮಾತ್​ ಸೈಬರ್​ ವಂಚನೆಗ ಒಳಗಾಗಿದ್ದರೆ ಹೀಗೆ ಮಾಡಿ
  • ತಕ್ಷಣವೇ ನಿಮ್ಮ ಮೊಬೈಲ್​ ಫೋನ್​ ಅನ್ನು ಸ್ವಿಚ್​ ಆಫ್​ ಮಾಡಿ
  • ನಿಮ್ಮ ಬ್ಯಾಂಕ್​ಗೆ ಕರೆ ಮಾಡಿ ಅಕೌಂಟ್​ ಬ್ಲಾಕ್​ ಮಾಡಲು ಮಾಹಿತಿ ನೀಡಿ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net