'ಮಧ್ಯರಾತ್ರಿ 1 ಗಂಟೆವರೆಗೂ ಕೆಲಸ ಮಾಡಲು ಕನ್ನಡಿಗರಿಗಿಂತ ನೆರೆ ರಾಜ್ಯದವರೇ ಬೆಸ್ಟ್​; ಉದ್ಯಮಿ ಅಭಿಜಿತ್​ ಗುಪ್ತಾ..Bengaluru entrepreneur

Bengaluru entrepreneur
Bengaluru entrepreneur
Published on

ಪ್ರಮುಖ ಮುಖ್ಯಾಂಶಗಳು

  • ಶಿಫ್ಟ್​ನಂತೆ ಕನ್ನಡಿಗರು ಕೆಲಸ ಮಾಡುತ್ತಾರೆ. ಆದರೆ, ರಾತ್ರಿ ಪಾಳಿ ಮಾಡಲು ಹಿಂದೇಟು ಹಾಕುತ್ತಾರೆ.
  • ಸ್ಥಳೀಯ ಕಾರ್ಮಿಕರು ಮತ್ತು ನೆರೆ ರಾಜ್ಯದವರ ನಡುವಿನ ವ್ಯತ್ಯಾಸ ಬಿಚ್ಚಿಟ್ಟ ಅಭಿಜಿತ್ ಗುಪ್ತಾ.
  • ಎಷ್ಟು ಗಂಟೆ ಕೆಲಸ ಮಾಡ್ಬೇಕು ಎನ್ನುವ ನೀವು, ಸಂಬಳದ ಬಗ್ಗೆನೂ ಮಾತನಾಡಿ ಎಂದು ನೆಟ್ಟಿಗರು.
Bengaluru entrepreneur:
ಕೆಲಸ ಹರಸಿ ಬೆಂಗಳೂರಿಗೆ ಬರುವ ಬಂಗಾಳ ಮತ್ತು ಉತ್ತರ ಭಾರತೀಯರು ಹಣಕ್ಕಾಗಿ ರಾತ್ರಿ ಪೂರ ಕೆಲಸ ಮಾಡಿ ಎಂದರೂ ಮಾಡಲು ರೆಡಿಯಾಗಿ ಇರುತ್ತಾರೆ. ಆದರೆ ಬೆ.ಗಳೂರಿನ ಸ್ಥಳೀಯ ನಿವಾಸಿಗಳನ್ನು ರಾತ್ರಿ ಪಾಳಯದಲ್ಲಿ ಕೆಲಸಕ್ಕೆ ಇರಿಸುವುದು ತುಂಬಾನೆ ಕಷ್ಟ ಹೀಗೆಂದು ಸಂದರ್ಶನವೊಂದರಲ್ಲಿ ಬೇಸರ ವ್ಯಕ್ತಪಡಿಸಿದ್ದು, ದಿ ಪಿಜ್ಜಾ ಬೇಕರಿ, ಪ್ಯಾರಿಸ್​ ಪಾನಿನಿ ಹಾಗೂ Smash Guys ನ ಸಹ-ಸಂಸ್ಥಾಪಕ ಅಭಿಜಿತ್ ಗುಪ್ತಾ.
Ayushwada ಎಂಬುವವರಿಗೆ ಕೊಟ್ಟ ಪಾಡಾಕಾಸ್ಟ್ ಸಂದರ್ಶನ ಕಾರ್ಯಮದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಸ್ಥಳೀಯ ನಿವಾಸಿಗಳಿಗೆ ಹೋಲಿಸಿದರೆ, ವಲಸೆ ಕಾರ್ಮಿಕರೇ ಬೆಸ್ಟ್. ಏಕೆಂದರೆ, ಅವರು ಮಧ್ಯರಾತ್ರಿ 1 ಗಂಟೆಯರೆಗೂ ಕೆಲಸ ಮಾಡಲು ಆಶಿಸುತ್ತಾರೆ. ಅವರ ಮುಖ್ಯಗುರಿ ಹಣ ಸಂಪಾದಿಸುವುದಷ್ಟೆ ಎಂದು ಹೇಳಿರುವುದು ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಅಭಿಜಿತ್ ಹೇಳಿದ್ದೇನು?

ಕರ್ನಾಟಕದ ಸ್ಥಳೀಯ ನಿವಾಸಿಗಳು ರೆಸ್ಟೋರೆಂಟ್​ ಕೆಲಸದ ಅವಧಿಗೆ ತಕ್ಕಂತೆ ಕಾರ್ಯ ನಿವರ್ಹಿಸಲು ಇಚ್ಚಿಸೋದಿಲ್ಲ. ಆದರೆ, ಈಶಾನ್ಯ ಭಾರತದ ನಿವಾಸಿಗಳು ತಮ್ಮ ಊರಿಗೆ ಪ್ರಯಾಣಿಸುವ ಮೊದಲು ಬೆಂಗಳೂರಿನಲ್ಲಿ ಹೆಚ್ಚು ಹಣ ಗಳಿಕೆ ಮಾಡಬೇಕು ಎನ್ನುವ ಧ್ಯೇಯ ಹೊಂದಿರುತ್ತಾರೆ. ಕರ್ನಾಟಕದ ನಿವಾಸಿಗಳು ರಾತ್ರಿ ಹೊತ್ತಲ್ಲಿ ರೆಸ್ಟೋರೆಂಟ್​ನಲ್ಲಿ ಕೆಲಸ ಮಾಡಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಬೆಂಗಳೂರಿನಲ್ಲಿ ರೆಸ್ಟೋರೆಂಟ್, ದಾಬಾ, ಹೋಟೆಲ್​ಗಲ್ಲಿ ರಾತ್ರಿ ಪಾಳಿ ಕೆಲಸ ಮಾಡಲು ಈಶಾನ್ಯ ಭಾಗದವರೇ ಸೂಕ್ತ,. ಸ್ಥಳೀಯರನ್ನು ಹುಡುಕುವುದು ಕಷ್ಟ ಎಂದು ಹೇಳಿದ್ದಾರೆ.
ನಮ್ಮ ರೆಸ್ಟೋರೆಂಟ್​ನಲ್ಲಿ ಸಾಕಷ್ಟು ಕನ್ನಡಿಗರು ಕೆಲಸ ಮಾಡುತ್ತಾರೆ. ಅವರ ಶಿಫ್ಟ್​ನಲ್ಲಿ ಹೆಚ್ಚು ಶ್ರಮಿಸಿ ಕೆಲಸ ಮಾಡಿ. ನೂರರಷ್ಟು ಎಫರ್ಟ್​ ಹಾಕುತ್ತಾರೆ,. ಆದರೆ, ರಾತ್ರಿ ಹೊತ್ತಿನ ಕೆಲಸಕ್ಕೆ ನಾವು ನೆರೆ ರಾಜ್ಯದವರನ್ನೇ ಆರಿಸಿಕೊಳ್ಳಬೇಕು ಎಂದು ಹೇಳಿದರು.

ಯಾರು ಏನಂದ್ರು?

ರಾಹುಲ್​ ಪೂಜಾರಿ ಎಂಬುವವರು ಪೋಸ್ಟ್​ಗೆ ಕಾಮೆಂಟ್ ಮಾಡಿದ್ದು, ನಾರಾಯಣ ಮೂರ್ತಿ ಸೇರಿದಂತೆ ಹಲವಾರು ಉದ್ಯಮಿಗಳು ತಮ್ಮ ಕಾರ್ಮಿಕರು ಹತ್ತಕ್ಕಿಂತ ಹೆಚ್ಚು ಹೊತ್ತು ಕೆಲಸ ಮಾಡಲಿ ಎಂದು ಬಯಸುತ್ತಾರೆ. ಆದರೆ, ಇವ್ರು ವೇತನ ಪಾವತಿ ಮಾಡುವ ಬಗ್ಗೆ ಮೌನಬವಹಿಸಿಬಿಡುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
ಮತ್ತೊಬ್ಬರು ಕಾಮೆಂಟ್ ಮಾಡಿದ್ದು ಸ್ಥಳೀಯ ಕಾರ್ಮಿಕರು ಹೆಚ್ಚು ಸಂಬಳ ಕೇಳೋದು ಮಾಮೂಲಿ. ಆದರೆ ನೆರೆ ರಾಜ್ಯದವರು ನಿಮ್ಮ ಯಾವುದೇ ಹೇರಿಕೆಗಳಿಗೆ ತುಟಿಕ್​ ಪಿಟಿಕ್​ ಎನ್ನದೆ ಕೊಟ್ಟಷ್ಟು ತೆಗೆದುಕೊಂಡು ಸುಮ್ಮನಾಗುತ್ತಾರೆ. ಹೀಗಾಗಿ ನಿಮಗೆ ಇಂತವರೇ ಸರಿ ಎನ್ನುತ್ತೀರಿ ಎಂದು ಕಿಡಿಕಾರಿದ್ದಾರೆ, (ಏಜೆನ್ಸೀಸ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net