ಆದರೆ, ನಿನ್ನೆ 4ರಿಂದ ಒಂದೇ ಸಮನೇ ಸುರಿಯಲು ಶುರುವಿಟ್ಟುಕೊಂಡ ಮಳೆರಾಯ ರಾತ್ರಿ 10ರವರೆಗೂ ಧೋ ಎಂದು ಸುರಿಯುತ್ತಲೇ ಇದ್ದ. ಬೆಂಗಳೂರಿನ ರಿಚ್ಮಂಡ್ ಸರ್ಕಲ್, ಎಂಜಿ ರಸ್ತೆ, ಮೆಜೆಸ್ಟಿಕ್ ಸುತ್ತಮುತ್ತಲಿನ ರಸ್ತೆಗಳು ಜಲಾವೃತಗೊಂಡಿದ್ದವು. ಇದ್ರಿಂದಾಗಿ ಡೌನ್ನಲ್ಲಿರುವ ಬುಕ್ ವರ್ಮ್ ಮಳಿಗೆಗೂ ನೀರು ನುಗ್ಗಿದ ನೆಲದಡಿ ಶೆಲ್ಫ್ಗಳಲ್ಲಿದ್ದ ಪುಸ್ತಕಗಳು ಒದ್ದೆಯಾಗಿವೆ. ಒಟ್ಟಾರೆಯಾಗಿ ನಾಲ್ಕು ಸಾವಿರದಿಂದ ಐದು ಸಾವಿರ ಪುಸ್ತಕ ನೀರು ಪಾಲಾಗಿದ್ದು ಮಳಿಗೆಗೆ ಲಕ್ಷಕ್ಕೂ ಹೆಚ್ಚು ಹಣ ನಷ್ಟವಾಗಿದೆ ಎಂದು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಮಾಹಿತಿ ಹಂಚಿಕೊಂಡಿದೆ.