ಕಾಲಿಗೆ ಕಟ್ಟುವ ಕಪ್ಪು ದಾರ ಶುಭವೋ ಅಥವಾ ಅಪಶಕುನವೋ; ಯಾರು, ಯಾವ ದಿನ ಕಟ್ಟಿಕೊಳ್ಳುವುದು ಆರೋಗ್ಯಕ್ಕೆ ಹಿತ?..Black Thread Benefits

 Black Thread Benefits
Black Thread Benefits
Published on

ಪ್ರಮುಖ ಮುಖ್ಯಾಂಶಗಳು

  • ಕಪ್ಪು ದಾರವು ಶನಿ ಮತ್ತು ರಾಹುನಂತಹ ಕೆಟ್ಟ ಗ್ರಹಗಳ ಪರಿಣಾಮ ಬೀರದಂತೆ ತಡೆಹಿಡಿಯುತ್ತದೆ.
  • ನಕರಾತ್ಮಕ ಶಕ್ತಿ ಮತ್ತು ದೃಷ್ಟಿ ದೋಷ ದೂರ ಮಾಡಿಕೊಳ್ಳಲು ಸಹಕಾರಿ
  • ಯಾವ ರಾಶಿಯವರು ಕಪ್ಪು ದಾರ ಕಟ್ಟುವ ಮುನ್ನ ಎಚ್ಚರಿಕೆ ವಹಿಸಬೇಕು ಗೊತ್ತಾ?
Black Thread Benefits: ಈ ಹಿಂದೆ ಹಿರಿಯರು ಯಾರ ಕೆಟ್ಟ ದೃಷ್ಟಿಯು ಬೀಳದಂತೆ ಇರಲು ಕಾಲಿಗೆ ಕಪ್ಪು ದಾರ. ಕೆಂದುಟಿಯ ಪಕ್ಕದಲ್ಲಿ ಕಪ್ಪು ಬೊಟ್ಟು ಇಡುವ ಮೂಲಕ ತಮ್ಮ ಆರೋಗ್ಯವನ್ನು ಕಾಯ್ದು ಕೊಳ್ಳುತ್ತಿದ್ದರು, ಇನ್ನು ಪೋಷಕರು ತಮ್ಮ ಮಕ್ಕಳ ಕೈಗೆ ಮತ್ತು ಹಣೆಗೆ, ಪಾದದ ಕೆಳಗೆ ಕಪ್ಪು ಬೊಟ್ಟು ಇಟ್ಟು, ಕಾಲಿಗೆ ದಾರ ಕಟ್ಟುತ್ತಿದ್ದರು. ಈಗಲು ಇದು ವಾಡಿಕೆಯಲ್ಲಿದೆ. ಆದರೆ, ಇಂದಿನ ದಿನದಲ್ಲಿ ಯುವಜನತೆ ಫ್ಯಾಷನ್​ ಬಳಸಿಕೊಳ್ಳುತ್ತಿದ್ದಾರೆ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ದುಷ್ಟ ಶಕ್ತಿಗಳಿಂದ ನಮ್ಮನ್ನು ರಕ್ಷಿಸುತ್ತದೆ ಎನ್ನುವ ನಂಬಿಕೆ ಇದೆ.

ಕಪ್ಪು ದಾರ ಕಾಲಿಗೆ ಅಥವಾ ಕೈಗೆ ಕಟ್ಟೋದು ಯಾಕೆ?

ಹೌದು, ಅನೇಕರು ಕಪ್ಪು ದಾರವನ್ನು ಕಟ್ಟುತ್ತಾರೆ. ಇದು ದುಷ್ಟ ಕಣ್ಣಿನ ಶಕ್ತಿಯು ಬೇರೆಯವರ ಮೇಲೆ ಬೀರುವ ಪರಿಣಾಮವನ್ನು ತಡೆಗಟ್ಟುತ್ತದೆ ಎನ್ನುವ ನಂಬಿಕೆಯಾಗಿದೆ. ಇನ್ನು ಕೆಲವರ ಜಾತಕದಲ್ಲಿ ಶನಿ ಅಥವಾ ರಾಹುವಿನ ಪ್ರಭಾವ ಹೆಚ್ಚಾಗಿದ್ದರೆ ಅಂತವರು ಕಪ್ಪು ದಾರ ಕಟ್ಟಿಕೊಳ್ಳುವುದರಿಂದ ಸ್ವಲ್ಪ ಪರಿಹಾರ ಸಿಗುವುದು ಎಂದು ನಂಬಲಾಗಿದೆ. ಮಣಿಕಟ್ಟಿಗೆ ಅಥವಾ ಕಾಲಿಗೆ ಕಪ್ಪು ದಾರ ಕಟ್ಟುವುದರಿಂದ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ನಂಬಲಾಗಿದೆ. ಅಂದರೆ, ಕಪ್ಪು ದಾರವು ರಕ್ತಪರಿಚಲನೆಗೆ ಸಹಕಾರಿ ಎನ್ನಲಾಗಿದೆ.

ಕಪ್ಪು ದಾರ ಕಟ್ಟಿಕೊಳ್ಳೋದು ಹೇಗೆ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಪ್ಪು ದಾರವನ್ನು ಕೆಲವು ನಿಯಮಗಳ ಅನುಸಾರ ಕಟ್ಟಿಕೊಳ್ಳೋದು ಸರಿಯಾದ ವಿಧಾನ ಎಂದು ಹೇಳಲಾಗುತ್ತದೆ. ಅದರಂತೆ ಕಪ್ಪು ದಾರವನ್ನು ಶ್ರೇಷ್ಠದಿನವಾದ ಶನಿವಾರ ಕಟ್ಟುಕೊಳ್ಳುವುದು ಒಳ್ಳೆಯದು ಎನ್ನಲಾಗುತ್ತದೆ. ಇದರ ಜೊತೆಗೆ ಮಂಗಳವಾರ ಅಥವಾ ಅಮವಾಸ್ಯೆ ದಿನ ಧರಿಸಬಹಹುದು ಎನ್ನಲಾಗಿದೆ.
ದಾರವನ್ನು ಕೈಗೆ ಅಥವಾ ಕಾಲಿಗೆ ಕಟ್ಟಿಕೊಳ್ಳುವ ಮೊದಲು ಗಂಗಾ ಜಲದಿಂದ ಅದನ್ನು ಶುದ್ಧೀಕರಿಸಬೇಕು. ಆ ನಂತರ ದಾರವನ್ನು ಕಟ್ಟಿಕೊಳ್ಳುವಾಗ "ಓಂ ಶಂ ಶನೈಶ್ಚರಾಯ ನಮಃ" ಅಥವಾ "ಓಂ ನಮಃ ಶಿವಾಯ" ಮಂತ್ರವನ್ನು ಜಪಿಸನೇಕು. ದಾರಕ್ಕೆ ಒಟ್ಟು 7 ಗಂಟುಗಳನ್ನು ಹಾಕುವುದು ಶುಭಪ್ರದ ಎಂದು ನಂಬಲಾಗಿದೆ.

ಎಲ್ಲರಿಗೂ ಕಪ್ಪು ದಾರ ಕಟ್ಟಿಕೊಳ್ಳುವ ಅಗತ್ಯವಿಲ್ಲ

. ಜಾತಕದಲ್ಲಿ ಚಂದ್ರ, ಶುಕ್ರ ಮತ್ತು ಗುರು ಗ್ರಹಗಳು ಪ್ರಬಲವಾಗಿರುವ ಜನರು ಕಪ್ಪು ದಾರವನ್ನು ಕಟ್ಟಿಕೊಳ್ಳಲೇ ಬೇಕು ಎನ್ನುವ ಅಗತ್ಯವಿಲ್ಲ, ಅದರಲ್ಲೂ ಮೇಷ ಮತ್ತು ವೃಶ್ಚಿಕ ರಾಶಿಯವರು ಮಂಗಳನ ಪ್ರಭಾವ ಹೆಚ್ಚು ನಿಮ್ಮ ಮೇಲಿರುವ ಕಾರಣ ನಿಮಗೆ ಕಪ್ಪು ದಾರ ಕಟ್ಟಿಕೊಳ್ಳುವ ಅಗತ್ಯವಿಲ್ಲ ಎನ್ನುತ್ತಾರೆ ಜ್ಯೋತಿಷಿಗಳು.
ಯಾರು ಯಾವ ಕೈ ಅಥವಾ ಕಾಲಿಗೆ ಕಪ್ಪು ದಾರ ಕಟ್ಟಿಕೊಳ್ಳಬೇಕು
ಮಹಿಳೆಯರು ಅಥವಾ ಗಂಡಸರು ಕಪ್ಪು ದಾರ ಎಲ್ಲಿ ಕಟ್ಟಿಕೊಳ್ಳಬೇಕು ಎನ್ನುವ ಒದ್ದಾಟದಲ್ಲಿ ಇರುತ್ತಾರೆ., ಆದರೆ, ಮಹಿಳೆಯರು ಸಾಮಾನ್ಯವಾಗಿ ಎಡಗೈ ಅಥವಾ ಎಡಗಾಲಿಗೆ ಕಪ್ಪು ದಾರ ಧರಿಸುತ್ತಾರೆ. ಇನ್ನು ಪುರುಷರು ಬಲಗೈಗೆ ಅಥವಾ ಬಲಗಾಲಿಗೆ ಕಟ್ಟುವುದು ಶುಭ ಎಂದು ಪರಿಗಣಿಸಲಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net