ಚಲಿಸುತ್ತಿದ್ದ KSRTC ಬಸ್​​ ಡೋರ್​ ಏಕಾಏಕಿ ಓಪನ್; ರಪ್ಪನೆ ರಸ್ತೆಗೆ ಬಿದ್ದ ಪಿಯುಸಿ ವಿದ್ಯಾರ್ಥಿನಿ; ಎದೆ ಝಲ್​ ಎನಿಸುವ ದೃಶ್ಯ ವೈರಲ್​..KSRTC Bus Accident

Dakshina Kannada KSRTC Bus Accident
Dakshina Kannada KSRTC Bus Accident
Published on
ದಕ್ಷಿಣ ಕನ್ನಡ: ಕರ್ನಾಟಕದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಜಾಗರೂಕವಾಗಿ ಮತ್ತು ಅತಿ ವೇಗದಿಂದ ವಾಹನ ಚಲಾಯಿಸುತ್ತಿರುವ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚಾಗಿ, ಅನೇಕ ಮಂದಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎದೆ ಝಲ್​ ಎನಿಸುವ (Dakshina Kannada KSRTC Bus Accident) ಘಟನೆಯೊಂದು ಬೆಳಕಿಗೆ ಬಂದಿದೆ.
ದ್ವಿತೀಯ ಪಿಯುಸಿ ಮತ್ತು SSLC ಪರೀಕ್ಷೆ ಬರೆಯಲು ಕಾಲೇಜಿಗೆ Karnataka State Road Transport Corporation (ಕೆಎಸ್​ಆರ್​ಟಿಸಿ) ಬಸ್​ನಲ್ಲಿ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು, ಏಕಾಏಕಿ ತೆರೆದುಕೊಂಡ ಡೋರ್​ನಿಂದ ರಪ್ಪನೆ ನೆಲಕ್ಕೆ ಬಿದ್ದು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದಲ್ಲಿ ನಡೆದಿದೆ.
ಗಾಯಗೊಂಡ ವಿದ್ಯಾರ್ಥಿನಿಯರು ನ್ಯಾಯತರ್ಪು ಗ್ರಾಮದ ಕಲೈತೊಟ್ಟುವಿನ ನಾಗರಾಜ್​ ಮತ್ತು ರೂಪ ಎಂಬುವವರ ಮಕ್ಕಳು ಎನ್ನುವುದಾಗಿ ತಿಳಿದುಬಂದಿದೆ.

ಬಸ್​ನಿಂದ ರಸ್ತೆಗೆ ಬಿದ್ದ ಅಕ್ಕ-ತಂಗಿ

ಪುತ್ತೂರಿನಿಂದ ಧರ್ಮಸ್ಥಳದ ಕಡೆಗೆ ತೆರಳುತ್ತಿದ್ದ ಈ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಜನದಟ್ಟಣೆ ಭಾರಿ ಇತ್ತು. ಪರೀಕ್ಷೆಗೆ ಸಮಯವಾಗಿದ್ದ ಕಾರಣ, ಬೇಗನೆ ಹೊರಡಲು ವಿಧಿ ಇಲ್ಲದೆ ಇದೇ ಬಸ್​ಗೆ ಗೇರುಕಟ್ಟೆ ಬಳಿ ಅಕ್ಕ-ತಂಗಿ ಹತ್ತಿಕೊಂಡರು. ಬಸ್ ರಶ್​ ಇದ್ದ ಕಾರಣ ಬಾಗಿಲ ಬಳಿಯೇ ಇಬ್ಬರು ನಿಂತಿದ್ದರು.
ರೇಷ್ಮೆರಸ್ತೆ ಎಂಬಲ್ಲಿನ MRPL ಪೆಟ್ರೋಲ್​ ಪಂಪ್​ ಬಳಿ ಕೆಎಸ್​ಆರ್​ಟಿಸಿ ತಿರುವು ತೆಗೆದಯುಕೊಳ್ಳುತ್ತಿದಾಗ ​ ವೇಗವಾಗಿ ಚಲಿಸಿದೆ. ಈ ವೇಳೆ ಡೋರ್​ ಇದ್ದಕ್ಕಿಂದ್ದಂತೆ ತೆರೆದುಕೊಂಡಿದೆ. ಮೊದಲು ಅಕ್ಕ ನೆಲಕ್ಕೆ ಬಿದ್ದಳು, ಆಕೆಯನ್ನು ರಕ್ಷಿಸಲು ಹೋಗಿ ತಂಗಿಯೂ ನೆಲಕ್ಕೆ ಬಿದ್ದು ಗಾಯಗೊಂಡಿದ್ದಾಳೆ.

SSLC ಮತ್ತು PUC ಪರೀಕ್ಷೆಗೆ ಹೋಗುತ್ತಿದ್ದ ಅಕ್ಕ-ತಂಗಿ

ಅದೃಷ್ಟವಶಾತ್​ ರಸ್ತೆಯಲ್ಲಿ ಯಾವುದೇ ಗಾಡಿಗಳು ಸಂಚರಿಸದ ಕಾರಣ ಇಬ್ಬರು ಬದುಕುಳಿದ್ದಿದ್ದಾರೆ. ಸ್ಥಳದಲ್ಲೇ ಇದ್ದ ಸ್ಥಳೀಯರ ಸಹಾಯದೊಂದಿಗೆ ಬೆಳ್ತಂಗಡಿ ಮತ್ತು ಉಜಿರೆಯ ಆಸ್ಪತ್ರೆಗೆ ಇಬ್ಬರನ್ನು ದಾಖಲಿಸಲಾಗಿದೆ. ಅಕ್ಕ ಎರಡನೇ ವರ್ಷದ ಪಿಯುಸಿ ಪರೀಕ್ಷೆ ಬರೆಯಲು ಹೋಗುತ್ತಿದ್ದಳು ಮತ್ತು ತಂಗಿ ಎಸ್​​ಎಸ್​ಎಲ್​​ಸಿ ಪರೀಕ್ಷೆಗೆ ತೆರಳುತ್ತಿದ್ದಳು ಎನ್ನಲಾಗಿದೆ.

ಬಸ್​ ಸಂಖ್ಯೆ ಹೆಚ್ಚಿಸಿ

ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ನಿಂದ ವಿದ್ಯಾರ್ಥಿನಿಯರು ನೆಲಕ್ಕೆ ಬೀಳುವ ದೃಶ್ಯಾವಳಿಯು ರಸ್ತೆಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿದ್ಯಾರ್ಥಿನಿಯ ಬ್ಯಾಗ್​ ಮತ್ತು ಆಕೆ ಮಾರುದ್ದ ದೂರ ಬೀಳುವುದು. ಅಲ್ಲಿಯೇ ಇದ್ದ ಜನರು ಆಕೆಯ ಸಹಾಯಕ್ಕೆ ಧಾವಿಸುವುದು ದೃಶ್ಯದಲ್ಲಿದೆ. ಈ ವಿಡಿಯೋ ಎಕ್ಸ್​ನಲ್ಲಿ ವೈರಲ್​ ಆಗಿದ್ದು, ಬಸ್​ ಸಂಖ್ಯೆ ಹೆಚ್ಚಿಸುವಂತೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net