ಹೊಸ ನಿಯಮದಪ್ರಕಾರ, ಹಸಿ-ಒಣ ಮತ್ತು ಸ್ಯಾನಿಟರಿ ಕಸವನ್ನು ಪ್ರತ್ಯೇಕವಾಗಿ ವಿಂಗಡನೆ ಮಾಡದೆ ಟ್ರಕ್ ಗಳಿಗೆ ಕೊಟ್ಟರೆ, ಮೊದಲ ಬಾರಿಗೆ 1,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಅದೇ ತಪ್ಪು ಮತ್ತೆ ಮಾಡಿದರೆ ದಂಡದ ಮೊತ್ತವನ್ನು 2,000 ರೂಪಾಯಿಗೆ ಏರಿಸಲಾಗುವುದು. ಮನೆಗಳು ಮಾತ್ರವಲ್ಲದೆ, ವಾಣಿಜ್ಯ ಸಂಸ್ಥೆ, ಕಾರ್ಖಾನೆ, ವೈದ್ಯಕೀಯ ಆಸ್ಪತ್ರೆಗಳು ಮಳಿಗೆ ಹೋಟೆಲ್ಗಳಿಗೂ ಈ ನಿಯಮ ಅನ್ವಯವಾಗಲಿದೆ ಎಂದು ಹೇಳಲಾಗಿದೆ.