ಆದರೆ, ನಿಜವಾದ ಚಾಂಪಿಯನ್ಗಳು ಎಂತಹ ಕಠಿಣ ಒತ್ತಡದ ನಡುವೆಯೂ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ ಎಂಬುದನ್ನು ವೈಭವ್ ಸೂರ್ಯವಂಶಿ ಈ ಪಂದ್ಯದ ಮೂಲಕ ಸಾಬೀತುಪಡಿಸಿದ್ದಾರೆ. ಫೈನಲ್ ಪಂದ್ಯ ಮುಗಿದ ಬಳಿಕ ಮಾತನಾಡಿದ ವೈಭವ್, ನನ್ನ ಮೇಲೆ ಭಾರಿ ಒತ್ತಡವಿತ್ತು ಎಂಬುದು ನಿಜ, ಆದರೆ ಈ ನಿರ್ಣಾಯಕ ಪಂದ್ಯದಲ್ಲಿ ಹೇಗಾದರೂ ಮಾಡಿ ಒಂದು ಅತ್ಯುತ್ತಮ ಇನಿಂಗ್ಸ್ ಆಡಲೇಬೇಕು ಎಂದು ನಾನು ಬಲವಾಗಿ ಸಂಕಲ್ಪ ಮಾಡಿದ್ದೆ ಎಂದು ಹೇಳುವ ಮೂಲಕ ತಮ್ಮ ಮನಸ್ಥಿತಿಯನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಈ ಹಿಂದಿನ ಪಂದ್ಯದಲ್ಲಿ ನಡೆದ ಘಟನೆಯಿಂದ ಬೇಸರಗೊಂಡಿದ್ದಾಗಿ ಮತ್ತು ಆ ಘಟನೆ ತನ್ನ ತುಂಬಾ ಕಾಡಿದ್ದಾಗಿ ವೈಭವ್ ಹೇಳಿದ್ದಾರೆ.