ನಂತರ, ಗುರಿ ಬೆನ್ನತ್ತಿದ ಕಿವೀಸ್ ತಂಡ, ಫಿನ್ ಅಲೆನ್ (ಔಟಾಗದೆ 100 ರನ್, 33 ಎಸೆತ, 10 ಬೌಂಡರಿ, 8 ಸಿಕ್ಸರ್) ಅಜೇಯ ಶತಕದ ನೆರವಿನಿಂದ 12.5 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 170 ರನ್ಗಳ ಗುರಿಯನ್ನು ತಲುಪಿತು. ಟಿಮ್ ಸೀಫರ್ಟ್ (58 ರನ್, 33 ಎಸೆತ, 7 ಬೌಂಡರಿ, 2 ಸಿಕ್ಸರ್) ಅರ್ಧಶತಕ ಗಳಿಸಿದರು. ಕಿವೀಸ್ ಕಳೆದುಕೊಂಡ ಏಕೈಕ ವಿಕೆಟ್ ಅನ್ನು ಕಾಗಿಸೊ ರಬಾಡ ಅವರು ಪಡೆದರು. ಹರಿಣಗಳ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಕಿವೀಸ್ ಫೈನಲ್ಗೆ ಲಗ್ಗೆ ಇಟ್ಟಿತು.