ಹೌದು, ಫೈನಲ್ ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭಿಷೇಕ್ ಶರ್ಮಾ, "ನಾನು ಫೈನಲ್ನಲ್ಲಿ ಶಿವಂ ದುಬೆ ಅವರ ಬ್ಯಾಟ್ನಿಂದ ಬ್ಯಾಟಿಂಗ್ ಮಾಡಿದೆ, ಥ್ಯಾಂಕ್ ಯೂ ದುಬೆ! ಅಂದು ಬೆಳಿಗ್ಗೆ ನನಗೆ ಏನೋ ಹೊಸತನ್ನು ಪ್ರಯತ್ನಿಸಬೇಕು ಎನ್ನಿಸಿತು. ಆ ಸಮಯದಲ್ಲಿ ಶುಭಮನ್ ಗಿಲ್ ನನ್ನ ಹತ್ತಿರ ಇರಲಿಲ್ಲ, ಹಾಗಾಗಿ ನೇರವಾಗಿ ದುಬೆ ಬಳಿ ಹೋಗಿ ಅವರ ಬ್ಯಾಟ್ ಅನ್ನೇ ತೆಗೆದುಕೊಂಡೆ," ಎಂದು ನಗುತ್ತಾ ತಿಳಿಸಿದ್ದಾರೆ. ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅಭಿಷೇಕ್, ಭಾರತ ತಂಡ 96 ರನ್ಗಳ ಬೃಹತ್ ಅಂತರದ ಜಯ ದಾಖಲಿಸಲು ಭದ್ರ ಬುನಾದಿ ಹಾಕಿಕೊಟ್ಟರು.