ತಂದೆ ಕಳೆದುಕೊಂಡ ದುಃಖದಲ್ಲಿ ರಿಂಕು ಸಿಂಗ್​: ಜೂನ್​ನಲ್ಲಿ ನಡೆಯಬೇಕಿದ್ದ ಮದುವೆ ಒಂದು ವರ್ಷ ಮುಂದಕ್ಕೆ! Rinku Singh

ತಂದೆ ಕಳೆದುಕೊಂಡ ದುಃಖದಲ್ಲಿ ರಿಂಕು ಸಿಂಗ್​! Rinku Singh
ತಂದೆ ಕಳೆದುಕೊಂಡ ದುಃಖದಲ್ಲಿ ರಿಂಕು ಸಿಂಗ್​! Rinku Singh
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ರಿಂಕು ಸಿಂಗ್ ಮನೆಯಲ್ಲಿ ಮಹಾ ದುರಂತವೊಂದು ಸಂಭವಿಸಿದೆ
  • ರಿಂಕು ಜೀವನದ ಪ್ರಯಾಣದಲ್ಲಿ ಆಧಾರಸ್ತಂಭವಾಗಿದ್ದ ಅವರ ತಂದೆ ನಿಧನರಾಗಿದ್ದಾರೆ
  • ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ರಿಂಕು ತಂದೆ ಖಾನ್‌ಚಂದ್ರ ಸಿಂಗ್​ ಇಂದು ನಿಧನ
Rinku Singh : ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ರಿಂಕು ಸಿಂಗ್ ಮನೆಯಲ್ಲಿ ಮಹಾ ದುರಂತವೊಂದು ಸಂಭವಿಸಿದೆ. ರಿಂಕು ಜೀವನದ ಪ್ರಯಾಣದಲ್ಲಿ ಆಧಾರಸ್ತಂಭವಾಗಿದ್ದ ಅವರ ತಂದೆ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ರಿಂಕು ತಂದೆ ಖಾನ್‌ಚಂದ್ರ ಸಿಂಗ್​ ಇಂದು ಬೆಳಿಗ್ಗೆ ಗ್ರೇಟರ್ ನೋಯ್ಡಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ಕೇಳಿ, ರಿಂಕು ಸಿಂಗ್ ಮತ್ತೊಮ್ಮೆ ಟೀಮ್ ಇಂಡಿಯಾವನ್ನು ತೊರೆದು ತಮ್ಮ ಊರಿಗೆ ತೆರಳಿದ್ದಾರೆ. ಕ್ರಿಕೆಟಿಗರು ಮತ್ತು ರಾಜಕೀಯ ಮುಖಂಡರು ರಿಂಕು ತಂದೆಯ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ಖಾನ್‌ಚಂದ್ರ ಸಿಂಗ್​ ಲಿವರ್ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ನಾಲ್ಕನೇ ಹಂತದಲ್ಲಿದ್ದರಿಂದ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತ್ತು. ಹೀಗಾಗಿ, ವೈದ್ಯರು ಕಳೆದ ಒಂದು ತಿಂಗಳಿನಿಂದ ತುರ್ತು ವಾರ್ಡ್‌ನಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಅತ್ತ ಟಿ20 ವಿಶ್ವಕಪ್ ನಡೆಯುತ್ತಿದ್ದರಿಂದ ರಿಂಕು ಸಿಂಗ್ ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದರು. ಅವರ ತಂದೆಯ ಯೋಗಕ್ಷೇಮವನ್ನು ಕುಟುಂಬ ಸದಸ್ಯರು ನೋಡಿಕೊಳ್ಳುತ್ತಿದ್ದರು. ಇದರ ನಡುವೆ, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ನಂತರ, ತಂದೆಯ ಆರೋಗ್ಯ ಹದಗೆಟ್ಟ ಹಿನ್ನೆಲೆ ರಿಂಕು ಸಿಂಗ್ ಉತ್ತರ ಪ್ರದೇಶಕ್ಕೆ ಧಾವಿಸಿದ್ದರು.
ತಮ್ಮ ತಂದೆಯ ಆರೋಗ್ಯವನ್ನು ವಿಚಾರಿಸಿಕೊಳ್ಳುತ್ತಾ ಒಂದು ದಿನ ಆಸ್ಪತ್ರೆಯಲ್ಲೇ ಕಳೆದರು. ಅದಾದ ನಂತರ, ರಿಂಕು ಸಿಂಗ್ ಮತ್ತೆ ತಂಡವನ್ನು ಸೇರಿಕೊಂಡರು. ನಿನ್ನೆ ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್​ ಇಂಡಿಯಾ ಫೀಲ್ಡಿಂಗ್​ ಮಾಡುವಾಗ ರಿಂಕು ಮೈದಾನಕ್ಕೆ ಇಳಿದಿದ್ದರು. ಇದರ ಬೆನ್ನಲ್ಲೇ ಅಂದರೆ, ಇಂದು ಬೆಳಗ್ಗೆ ರಿಂಕು ತಂದೆ ಚಿಕಿತ್ಸೆ ಫಲಿಸದೇ ನಿಧನರಾದರು. ಹೀಗಾಗಿ, ರಿಂಕು ಸಿಂಗ್ ಆತುರದಿಂದ ತಮ್ಮ ಊರಿಗೆ ಮರಳಿದರು. ತಂದೆಯ ನಿಧನದ ಹಿನ್ನೆಲೆಯಲ್ಲಿ, ಕುಟುಂಬದಲ್ಲಿ ದುಃಖದ ಕರಿನೆರಳು ಆವರಿಸಿದೆ.

ವಿವಾಹ ಮುಂದೂಡಿಕೆ

ಇನ್ನು ತಂದೆ ಖಾನ್​ಚಂದ್ರ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ, ರಿಂಕು ಸಿಂಗ್ ಅವರ ವಿವಾಹವೂ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ. ರಿಂಕು ಸಿಂಗ್, ಕುಟುಂಬದ ಸಂಪ್ರದಾಯದ ಪ್ರಕಾರ, ಯಾರಾದರೂ ಸತ್ತರೆ, ಒಂದು ವರ್ಷದವರೆಗೆ ಮನೆಯಲ್ಲಿ ಯಾವುದೇ ಶುಭ ಕಾರ್ಯಕ್ರಮಗಳು ನಡೆಯುವುದಿಲ್ಲ. ಇದರೊಂದಿಗೆ, ರಿಂಕು ಸಿಂಗ್ ಮತ್ತು ಸಂಸದೆ ಪ್ರಿಯಾ ಸರೋಜ್ ಅವರ ವಿವಾಹ ಮುಂದಿನ ವರ್ಷ ನಡೆಯುವ ಸಾಧ್ಯತೆಗಳಿವೆ.
ವಾಸ್ತವವಾಗಿ, ರಿಂಕು ಅವರು 2026, ಜೂನ್ ತಿಂಗಳಲ್ಲಿ ವಿವಾಹವಾಗಬೇಕಿತ್ತು. ಈ ಮಧ್ಯೆ, ರಿಂಕು ಸಿಂಗ್ ಅವರ ತಂದೆ ನಿಧನರಾಗಿದ್ದು, ವಿವಾಹವು ಒಂದು ವರ್ಷ ಮುಂದೂಡಲ್ಪಡುವ ಸಾಧ್ಯತೆಗಳಿವೆ. ಅಂದಹಾಗೆ, ರಿಂಕು ಸಿಂಗ್ ಮತ್ತು ಸಂಸದೆ ಪ್ರಿಯಾ ಸರೋಜ್ ಅವರದ್ದು ಲವ್​ ಮ್ಯಾರೇಜ್​. 2025, ಜೂನ್ 8 ರಂದು ನಿಶ್ಚಿತಾರ್ಥ ಮಾಡಿಕೊಂಡರು. ಆದಾಗ್ಯೂ, ಮದುವೆ ಹತ್ತಿರ ಇರುವಾಗಲೇ ಈ ದೊಡ್ಡ ದುರಂತ ಸಂಭವಿಸಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net