ದೇವರೇ ಹೀಗಾಗೋದು ಬೇಡ... ಮುಂದಿನ ಪಂದ್ಯ ಏನಾದ್ರೂ ರದ್ದಾದ್ರೆ ಭಾರತದ ಸೆಮೀಸ್​ ಆಸೆಗೆ ತಣ್ಣೀರು ಗ್ಯಾರಂಟಿ! Team India

ಮುಂದಿನ ಪಂದ್ಯ ಏನಾದ್ರೂ ರದ್ದಾದ್ರೆ ಭಾರತದ ಸೆಮೀಸ್​ ಆಸೆಗೆ ತಣ್ಣೀರು ಗ್ಯಾರಂಟಿ! Team India
ಮುಂದಿನ ಪಂದ್ಯ ಏನಾದ್ರೂ ರದ್ದಾದ್ರೆ ಭಾರತದ ಸೆಮೀಸ್​ ಆಸೆಗೆ ತಣ್ಣೀರು ಗ್ಯಾರಂಟಿ! Team India
Published on

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯು ಕ್ರೀಡಾಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ
  • ಸದ್ಯಕ್ಕೆ ನಡೆಯುತ್ತಿರುವ ಸೂಪರ್ 8 ಪಂದ್ಯಗಳು ಭರಪೂರ ಮನರಂಜನೆ ನೀಡುತ್ತಿದೆ
  • ಇನ್ನೂ ಒಂದು ಹೆಜ್ಜೆ ಯಶಸ್ವಿಯಾದರೆ ಟೀಮ್ ಇಂಡಿಯಾದ ಸೆಮಿಫೈನಲ್ ಪ್ರವೇಶ ಖಚಿತವಾಗಲಿದೆ
Team India : ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯು ಕ್ರೀಡಾಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಸದ್ಯಕ್ಕೆ ಸೂಪರ್ 8 ಪಂದ್ಯಗಳು ನಡೆಯುತ್ತಿದ್ದು, ಪ್ರತಿಯೊಂದು ಪಂದ್ಯವೂ ಭರಪೂರ ಮನರಂಜನೆ ನೀಡುತ್ತಿದೆ.
ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳು ಈಗಾಗಲೇ ಸೆಮಿಫೈನಲ್ ತಲುಪಿದ್ದು, ಆತಿಥೇಯ ಭಾರತ, ತನ್ನ ಸೆಮಿಫೈನಲ್ ಸ್ಥಾನವನ್ನು ಇನ್ನೂ ಖಚಿತಪಡಿಸಿಕೊಂಡಿಲ್ಲ. ಇತ್ತೀಚೆಗೆ, ಜಿಂಬಾಬ್ವೆ ವಿರುದ್ಧ ಭಾರಿ ಗೆಲುವು ದಾಖಲಿಸಿ ಸೆಮಿಫೈನಲ್‌ ಆಸೆಯನ್ನು ಇನ್ನೂ ಜೀವಂತವಾಗಿ ಇರಿಸಿಕೊಂಡಿದೆ. ಇನ್ನೂ ಒಂದು ಹೆಜ್ಜೆ ಯಶಸ್ವಿಯಾದರೆ, ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸುವುದು ಖಚಿತವಾಗಲಿದೆ.
ಹೌದು, ಮಾರ್ಚ್ 1 ರಂದು ಭಾರತ, ವೆಸ್ಟ್ ಇಂಡೀಸ್ ತಂಡದ ವಿರುದ್ಧ ಕೊನೆಯ ಸೂಪರ್​ 8 ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ, ನೇರವಾಗಿ ಸೆಮಿಫೈನಲ್ ತಲುಪುತ್ತದೆ. ಅಂದಹಾಗೆ, ಈ ಪಂದ್ಯವು ಭಾನುವಾರ ಕೊಲ್ಕತ್ತದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ತವರಿನಲ್ಲಿ ನಡೆಯುತ್ತಿರುವುದರಿಂದ ಭಾರತಕ್ಕೆ ವರದಾನವಾಗಲಿದೆ. ಆದಾಗ್ಯೂ, ವೆಸ್ಟ್ ಇಂಡೀಸ್ ತಂಡವನ್ನು ಕಡೆಗಣಿಸುವಂತಿಲ್ಲ. ಏಕೆಂದರೆ, ವಿಂಡೀಸ್​ ಬ್ಯಾಟ್ಸ್‌ಮನ್‌ಗಳು ಗಾಯಗೊಂಡ ಸಿಂಹದಂತೆ ಆಡುತ್ತಿದ್ದಾರೆ. ಹೀಗಾಗಿ, ಭಾರತದ ಪಾಲಿಗೆ ಮುಂದಿನ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.
ಅಂದುಕೊಂಡಂತೆ ಪಂದ್ಯ ನಡೆದರೆ ಸರಿ. ಒಂದು ವೇಳೆ ಈ ಪಂದ್ಯಕ್ಕೆ ಮಳೆ ಸೇರಿದಂತೆ ಏನಾದರೂ ಅಡ್ಡಿಯಾದರೆ ಮುಂದೆ ಏನಾಗಬಹುದು ಎಂಬ ಪ್ರಶ್ನೆಯು ಕೂಡ ಮೂಡುತ್ತದೆ. ಇದಕ್ಕೆ ಉತ್ತರ ತಿಳಿಯಲು ಬಯಸುವುದಾದರೆ ಮುಂದಎ ಓದಿ.
ವೆಸ್ಟ್ ಇಂಡೀಸ್ ಮತ್ತು ಭಾರತ ನಡುವಿನ ಪಂದ್ಯದ ಸಮಯದಲ್ಲಿ ಮಳೆ ಬಂದು ಪಂದ್ಯ ಸಂಪೂರ್ಣವಾಗಿ ರದ್ದಾದರೆ, ವೆಸ್ಟ್ ಇಂಡೀಸ್ ಸೆಮಿಫೈನಲ್‌ಗೆ ಹೋಗುತ್ತದೆ. ಇತರ ಕಾರಣಗಳಿಂದ ಪಂದ್ಯ ರದ್ದಾದರು ಕೂಡ ವೆಸ್ಟ್ ಇಂಡೀಸ್‌ಗೆ ಅನುಕೂಲವಿದೆ. ಇದಕ್ಕೆ ಕಾರಣ ವಿಂಡೀಸ್​ ತಂಡದ ನೆಟ್​ ರನ್​ ರೇಟ್​. ಕೆರಿಬಿಯನ್​ ಪಡೆಯ ರನ್​ ರೇಟ್​ ಪಾಸಿಟಿವ್​ ಇದೆ. ಅದೇ ರೀತಿ ಟೀಮ್ ಇಂಡಿಯಾದ ರನ್​ ರೇಟ್​ ಮೈನಸ್​ ಇದೆ. ಹೀಗಾಗಿ, ಭಾರತ ಮುಂದಿನ ಪಂದ್ಯವನ್ನು ಗೆಲ್ಲಲೇಬೇಕಿದೆ.
ಹೀಗಾಗಿ, ಟೀಮ್​ ಇಂಡಿಯಾದ ಅಭಿಮಾನಿಗಳು ಮುಂದಿನ ಪಂದ್ಯದಲ್ಲಿ ಯಾವುದೇ ಕಾರಣಕ್ಕೂ ಮಳೆ ಬಾರದಿರಲಿ ಎಂದು ದೇವರ ಬಳಿ ಪ್ರಾರ್ಥಿಸುತ್ತಿದ್ದಾರೆ. (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net