ಈ ಹಿಂದೆ ಟೀಮ್ ಇಂಡಿಯಾ ಮಹಿಳಾ ತಂಡ ಏಕದಿನ ವಿಶ್ವಕಪ್ನಲ್ಲಿ ಗೆಲುವು ಸಾಧಿಸಿತು. ಇದಕ್ಕೆ ಮುಖ್ಯ ಕಾರಣ ಜೆಮಿಮಾ ರೋಡ್ರಿಗಸ್. ಏಕೆಂದರೆ, ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿ, ಭಾರತ ಫೈನಲ್ಗೇರಲು ನೆರವಾದರು. ಅಂದು ಜೆಮಿಮಾ ಅವರು ಏಕಾಂಗಿ ಹೋರಾಟ ನಡೆಸಿದರು. ಈ ಒಂದು ಇನ್ನಿಂಗ್ಸ್ನಿಂದ ರಾತ್ರೋರಾತ್ರಿ ಜೆಮಿಮಾ ಸ್ಟಾರ್ ಆಗಿಬಿಟ್ಟರು. ಅಂದು ತಮ್ಮ ಇನ್ನಿಂಗ್ಸ್ ಬಗ್ಗೆ ಮಾತನಾಡಿದ್ದ ಜೆಮಿಮಾ, ನನ್ನ ಶತಕಕ್ಕೆ ಯೇಸುವಿನ ಆಶೀರ್ವಾದವೇ ಕಾರಣ ಎಂದಿದ್ದರು. ಅಂದು ಕೂಡ ಜೆಮಿಮಾ, ಸಿಕ್ಕಾಪಟ್ಟೆ ಟ್ರೋಲ್ಗೆ ಗುರಿಯಾಗಿದ್ದರು. ಅದೇ ಹೇಳಿಕೆಯನ್ನು ಉಲ್ಲೇಖಿಸಿ, ಇಂದು ಡಬ್ಲ್ಯುಪಿಎಲ್ ಫೈನಲ್ನಲ್ಲಿ ಆರ್ಸಿಬಿ ವಿರುದ್ಧ ಸೋತಿದ್ದಕ್ಕೆ ಮತ್ತೆ ಜೆಮಿಮಾರನ್ನು ಟ್ರೋಲ್ ಮಾಡಲಾಗುತ್ತಿದೆ. ಯೇಸು, ಜೆಮಿಮಾರ ಕೈಹಿಡಿಯಲಿಲ್ಲ ಆದರೆ, ತಿರುಪತಿ ತಿಮ್ಮಪ್ಪ ಸ್ಮೃತಿಯ ಕೈಹಿಡಿದು, ಗೆಲುವು ತಂದು ಕೊಟ್ಟ ಎಂದು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.