ಐಸಿಸಿ ಕೊಟ್ಟ ಒಂದೇ ಒಂದು ಎಚ್ಚರಿಕೆಗೆ ಹೆದರಿದ ಪಾಕ್​: ವರಸೆ ಬದಲಿಸಿದ ಮೊಹ್ಸಿನ್ ನಖ್ವಿ! Pakistan Squad

ಪಾಕಿಸ್ತಾನದ ತಂಡ
ಪಾಕಿಸ್ತಾನದ ತಂಡ
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತಂಡವನ್ನು ಪ್ರಕಟಿಸಿದೆ
  • ಸಲ್ಮಾನ್ ಅಲಿ ಆಘಾ ನೇತೃತ್ವದ 15 ಸದಸ್ಯರ ತಂಡವನ್ನು ಭಾನುವಾರ ಪ್ರಕಟಿಸಲಾಯಿತು
  • ಬಾಬರ್ ಅಜಮ್ ಮತ್ತು ಸ್ಟಾರ್ ವೇಗಿ ಶಾಹೀನ್ ಶಾ ಅಫ್ರಿದಿಗೆ ಅವಕಾಶ
  • ಹ್ಯಾರಿಸ್​ ರೌಫ್ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ಕೈಬಿಟ್ಟ ಪಿಸಿಬಿ
Pakistan Squad : ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತಂಡವನ್ನು ಪ್ರಕಟಿಸಿದೆ. ಸಲ್ಮಾನ್ ಅಲಿ ಆಘಾ ನೇತೃತ್ವದ 15 ಸದಸ್ಯರ ತಂಡವನ್ನು ಭಾನುವಾರ ಪ್ರಕಟಿಸಲಾಯಿತು. ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಅಜಮ್ ಮತ್ತು ಸ್ಟಾರ್ ವೇಗಿ ಶಾಹೀನ್ ಶಾ ಅಫ್ರಿದಿಗೆ ಅವಕಾಶ ನೀಡಿದ ಪಿಸಿಬಿ, ಹ್ಯಾರಿಸ್​ ರೌಫ್ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ಕೈಬಿಟ್ಟಿದೆ.
ಆಕಿಬ್ ಜಾವೇದ್ ಮತ್ತು ಮುಖ್ಯ ತರಬೇತುದಾರ ಮೈಕ್ ಹೆಸ್ಸನ್ ನೇತೃತ್ವದ ಆಯ್ಕೆ ಸಮಿತಿಯು ಸಮತೋಲಿತ ಮತ್ತು ಆಕ್ರಮಣಕಾರಿ ತಂಡವನ್ನು ಆಯ್ಕೆ ಮಾಡಿದೆ ಎಂದು ಪಿಸಿಬಿ ತಿಳಿಸಿದೆ. ಪಾಕಿಸ್ತಾನದ ಸ್ಟಾರ್ ಆಟಗಾರರಾದ ಬಾಬರ್ ಅಜಮ್ ಮತ್ತು ಶಾಹೀನ್ ಶಾ ಅಫ್ರಿದಿ ತಂಡಕ್ಕೆ ಮರಳಿರುವುದು ಪಾಕಿಸ್ತಾನ ಅಭಿಮಾನಿಗಳಿಗೆ ಸಮಾಧಾನ ತಂದಿದೆ. 
ಮತ್ತೊಂದೆಡೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತಂಡದ ಆಯ್ಕೆಯಲ್ಲಿ ಕೆಲವು ಅನಿರೀಕ್ಷಿತ ನಿರ್ಧಾರಗಳನ್ನು ತೆಗೆದುಕೊಂಡಿದೆ. ಆಯ್ಕೆದಾರರು ಸ್ಟಾರ್ ವೇಗಿ ಹ್ಯಾರಿಸ್ ರೌಫ್ ಅವರನ್ನು ಕೈಬಿಟ್ಟಿದ್ದಾರೆ. ಫಾರ್ಮ್ ನಷ್ಟ ಮತ್ತು ಫಿಟ್ನೆಸ್ ಸಮಸ್ಯೆಗಳಿಂದಾಗಿ ಅವರನ್ನು ತಂಡದಿಂದ ಹೊರಗಿಡಲಾಗಿದೆ ಎಂದು ತೋರುತ್ತದೆ.

ಐಸಿಸಿ ಎಚ್ಚರಿಕೆಗೆ ಬಗ್ಗಿದ ಪಾಕ್​

ಟಿ20 ವಿಶ್ವಕಪ್ ಟೂರ್ನಿಯಿಂದ ಬಾಂಗ್ಲಾದೇಶ ತಂಡವನ್ನು ಐಸಿಸಿ ಹೊರಗಿಟ್ಟಿದೆ. ಆದಾಗ್ಯೂ, ಪಾಕಿಸ್ತಾನ ತಂಡವು ಕೂಡ ಬಾಂಗ್ಲಾದೇಶ ತಂಡದ ಹೆಜ್ಜೆಗಳನ್ನು ಅನುಸರಿಸಲಿದೆ ಮತ್ತು  ಟಿ20 ವಿಶ್ವಕಪ್ ಟೂರ್ನಿಯಿಂದ ಹಿಂದೆ ಸರಿಯಲು ಸಿದ್ಧತೆ ನಡೆಸುತ್ತಿದೆ ಎಂಬ ವರದಿಗಳಿದ್ದವು. ಅಲ್ಲದೆ, ಬಾಂಗ್ಲಾದೇಶ ತಂಡದ ಬಗ್ಗೆ ಐಸಿಸಿ ಅನ್ಯಾಯವಾಗಿ ವರ್ತಿಸಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ನಖ್ವಿ ಹೇಳಿಕೆ ನೀಡಿದ್ದಾರೆ. ಇದಿಷ್ಟೇ ಅಲ್ಲದೆ, ಟಿ20 ವಿಶ್ವಕಪ್​ನಿಂದ ಪಾಕಿಸ್ತಾನ ತಂಡವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಪಾಕಿಸ್ತಾನ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ನಖ್ವಿ ಪ್ರತಿಕ್ರಿಯಿಸಿದ್ದಾರೆ.
 ನಖ್ವಿ ಅವರ ಹೇಳಿಕೆಯನ್ನು ಐಸಿಸಿ ಗಂಭೀರವಾಗಿ ಪರಿಗಣಿಸಿದ್ದು,  ಟಿ20 ವಿಶ್ವಕಪ್ ನಿಂದ ಪಾಕಿಸ್ತಾನ ತಂಡ ಹಿಂದೆ ಸರಿದರೆ, ಆ ದೇಶದ ಕ್ರಿಕೆಟ್ ಮಂಡಳಿಯ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಲು ಐಸಿಸಿ ಸಿದ್ಧವಾಗಿದೆ ಎಂಬ ವರದಿಗಳಿದ್ದವು. ಇದರಿಂದ ಎಚ್ಚೆತ್ತುಕೊಂಡಿರುವ ಪಾಕ್​, ಮೆಗಾ ಟೂರ್ನಮೆಂಟ್ ಗಾಗಿ ತನ್ನ ತಂಡವನ್ನು ಪ್ರಕಟಿಸಿದೆ, (ಏಜೆನ್ಸೀಸ್​). 

ಪಾಕಿಸ್ತಾನ ತಂಡ 

ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಬಾಬರ್ ಅಜಮ್, ಫಹೀಮ್ ಅಶ್ರಫ್, ಫಖರ್ ಜಮಾನ್, ಖವಾಜಾ ಮೊಹಮ್ಮದ್ ನಫಾಯಿ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ಸಲ್ಮಾನ್ ಮಿರ್ಜಾ, ನಸೀಮ್ ಷಾ, ಸಾಹಿಬ್ಜಾದಾ ಫರ್ಹಾನ್ (ವಿಕೆಟ್ ಕೀಪರ್), ಸೈಮ್ ಖಾನ್ ಅಯೂಬ್ರಿ, ಶಹೀನ್ ಅಯೂಬ್ದಿ (ವಿಕೆಟ್ ಕೀಪರ್), ಉಸ್ಮಾನ್ ತಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net