ಮಹೇಂದ್ರ ಸಿಂಗ್ ಧೋನಿ ಮೇಲಿನ ಅಭಿಮಾನಕ್ಕೆ ಸಾಕ್ಷಿಯಾಗಿ ಇದೀಗ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದೇನೆಂದರೆ, ಮದುವೆಗೂ ಮೊದಲೇ ಯುವಕನೊಬ್ಬ ತನ್ನ ಭಾವಿ ಪತ್ನಿಗೆ ಒಂದು ಷರತ್ತು ಹಾಕಿ, ಬಾಂಡ್ ಪೇಪರ್ ಸಹ ಬರೆಸಿದ್ದಾರೆ. ಷರತ್ತು ಏನೆಂದರೆ, ಮಹೇಂದ್ರ ಸಿಂಗ್ ಧೋನಿ ಅವರ ಪ್ರತಿ ಪಂದ್ಯಗಳನ್ನು ವೀಕ್ಷಿಸಲು ಅನುಮತಿ ನೀಡಬೇಕೆಂಬುದು. ಯಾವುದೇ ಪ್ರಶ್ನೆಗಳನ್ನು ಕೇಳಬಾರದು ಎಂದು ಭಾವಿ ಪತ್ನಿಯಿಂದ ವರ ಬಾಂಡ್ ಬರೆಸಿಕೊಂಡಿದ್ದಾನೆ.