ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 226 ರನ್ ಗಳಿಸಿತು. ಎಸ್ಆರ್ಎಚ್ ಪರ ಪರ ಹೆನ್ರಿಚ್ ಕ್ಲಾಸೆನ್ (52 ರನ್, 35 ಎಸೆತ, 4 ಬೌಂಡರಿಗಳು, 1 ಸಿಕ್ಸರ್) ಅರ್ಧಶತಕ ಗಳಿಸಿದರು. ಅಭಿಷೇಕ್ ಶರ್ಮಾ (48 ರನ್, 21 ಎಸೆತ, 4 ಬೌಂಡರಿ, 4 ಸಿಕ್ಸರ್), ಟ್ರಾವಿಸ್ ಹೆಡ್ (46 ರನ್, 21 ಎಸೆತ, 6 ಬೌಂಡರಿ, 3 ಸಿಕ್ಸರ್) ಮತ್ತು ನಿತೀಶ್ ಕುಮಾರ್ ರೆಡ್ಡಿ (39 ರನ್, 24 ಎಸೆತ, 4 ಬೌಂಡರಿ, 1 ಸಿಕ್ಸರ್) ಮಿಂಚಿದರು. ಕೆಕೆಆರ್ ಬೌಲರ್ಗಳಲ್ಲಿ ಬ್ಲೆಸ್ಸಿಂಗ್ ಮುಜರಬಾನಿ ನಾಲ್ಕು ವಿಕೆಟ್ ಪಡೆದರೆ, ವೈಭವ್ ಅರೋರಾ ಎರಡು ವಿಕೆಟ್ ಪಡೆದರು. ಕಾರ್ತಿಕ್ ತ್ಯಾಗಿ ಮತ್ತು ಅನುಕುಲ್ ರಾಯ್ ತಲಾ ಒಂದು ವಿಕೆಟ್ ಪಡೆದರು.