ಕಾವ್ಯಾ ಮಾರನ್‌ಗೆ ಚೆಕ್​ಮೇಟ್​ ಇಟ್ಟ ಅನನ್ಯಾ ಬಿರ್ಲಾ: ಇನ್ಮುಂದೆ ನಂದೇ ಹವಾ ಎಂದ ಆರ್​ಸಿಬಿ ಸುಂದರಿ! Ananya Birla

ಕಾವ್ಯಾ ಮಾರನ್‌ಗೆ ಚೆಕ್​ಮೇಟ್​ ಇಟ್ಟ ಅನನ್ಯಾ ಬಿರ್ಲಾ: ಇನ್ಮುಂದೆ ನಂದೇ ಹವಾ ಎಂದ ಆರ್​ಸಿಬಿ ಸುಂದರಿ! Ananya Birla
ಕಾವ್ಯಾ ಮಾರನ್‌ಗೆ ಚೆಕ್​ಮೇಟ್​ ಇಟ್ಟ ಅನನ್ಯಾ ಬಿರ್ಲಾ: ಇನ್ಮುಂದೆ ನಂದೇ ಹವಾ ಎಂದ ಆರ್​ಸಿಬಿ ಸುಂದರಿ! Ananya Birla
Published on

ಪ್ರಮುಖ ಮುಖ್ಯಾಂಶಗಳು

  • ಕಾವ್ಯಾ ಮಾರನ್ ಅವರ ಐಪಿಎಲ್ ಕ್ರೇಜ್ ಬಗ್ಗೆ ಮಾತನಾಡುವ ಅಗತ್ಯವಿಲ್ಲ
  • ಎಸ್​ಆರ್​ಎಚ್​ ತಂಡದ ಒಡತಿ ಕಾವ್ಯಾ ಮಾರನ್ ತಮ್ಮ ಹಾವಾಭಾವಳಿಂದಲೂ ಖ್ಯಾತಿ ಪಡೆದಿದ್ದಾರೆ
  • ಕಾವ್ಯಾ ಮಾರನ್​ಗೆ ಪೈಪೋಟಿ ನೀಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮದೇ ಮಹಿಳಾ ಐಕಾನ್​ ಪರಿಚಯಿಸಿದೆ
  • ಕ್ರೀಡಾಭಿಮಾನಿಗಳ ಕಣ್ಣು ಅನನ್ಯಾ ಮೇಲೆ ಬಿದ್ದಿದ್ದು ಕಾವ್ಯಾ ಮಾರನ್​ ಸೈಡ್​ಲೈನ್​ ಆಗುತ್ತಿದ್ದಾರೆ
Ananya Birla : ಕಾವ್ಯಾ ಮಾರನ್ ಅವರ ಐಪಿಎಲ್ ಕ್ರೇಜ್ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಒಡತಿಯಾದ ಕಾವ್ಯಾ ಮಾರನ್, ತಮ್ಮ ತಂಡ ಆಡುವ ಪ್ರತಿಯೊಂದು ಪಂದ್ಯಕ್ಕೂ ಹಾಜರಾಗುತ್ತಾರೆ ಮತ್ತು ಆಟಗಾರರು ಹಾಗೂ ಅಭಿಮಾನಿಗಳನ್ನು ಹುರಿದುಂಬಿಸುತ್ತಾರೆ. ಎಸ್‌ಆರ್‌ಎಚ್ ತಂಡ ಗೆದ್ದರೂ ಅಥವಾ ಸೋತರೂ, ಕಾವ್ಯಾ ಮಾರನ್ ಅವರ ಹಾವಭಾವಗಳು ಮಾತ್ರ ಯಾವಾಗಲೂ ಹೈಲೈಟ್​ ಆಗುತ್ತಿರುತ್ತವೆ.
ಅಂತಹ, ಕಾವ್ಯಾ ಮಾರನ್​ಗೆ ಪೈಪೋಟಿ ನೀಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ತಮ್ಮದೇ ಆದ ಕಾವ್ಯ ಮಾರನ್ ಅವರನ್ನು ಪರಿಚಯಿಸಿದ್ದು, ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ವಿಷಯವಾಗಿದೆ. ಅಷ್ಟಕ್ಕೂ ಆರ್​ಸಿಬಿಯ ಕಾವ್ಯಾ ಮಾರನ್ ಯಾರು ಎಂದು ನೀವು ಆಶ್ಚರ್ಯ ಪಡುತ್ತಿರಬಹುದು. ಆಕೆ, ಬೇರೆ ಯಾರೂ ಅಲ್ಲ ಅನನ್ಯಾ ಬಿರ್ಲಾ.
ಬಿರ್ಲಾ ಗ್ರೂಪ್ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ಅವರ ಹಿರಿಯ ಮಗಳೇ ಅನನ್ಯಾ ಬಿರ್ಲಾ. ಐಪಿಎಲ್ 19ನೇ ಸೀಸನ್ ಪ್ರಾರಂಭವಾಗುವ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲೀಕತ್ವವು ಬದಲಾಯಿತು. ಐಪಿಎಲ್‌ನ ಉದ್ಘಾಟನಾ ಋತುವಿನಿಂದ ತಂಡವನ್ನು ನಡೆಸುತ್ತಿರುವ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್‌ಎಸ್), ಇತ್ತೀಚೆಗೆ ಆರ್‌ಸಿಬಿಯನ್ನು 16,706 ಕೋಟಿ ರೂ.ಗೆ ಮಾರಾಟ ಮಾಡಿತು.
ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ, ಬೋಲ್ಟ್ ವೆಂಚರ್ಸ್ ಮತ್ತು ಇನ್ವೆಸ್ಟ್​ಮೆಂಟ್​ ಗ್ರೂಪ್ ಒಕ್ಕೂಟವು ಆರ್‌ಸಿಬಿಯನ್ನು ಸ್ವಾಧೀನಪಡಿಸಿಕೊಂಡಿವೆ. ಬಿರ್ಲಾ ಅವರ ಮಗ, 28 ವರ್ಷದ ಆರ್ಯಮಾನ್ ಬಿರ್ಲಾ, ಆರ್‌ಸಿಬಿಯ ಹೊಸ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ, ಅನನ್ಯಾ ಬಿರ್ಲಾ ಮತ್ತು ಆರ್ಯಮಾನ್ ಬಿರ್ಲಾ ಶನಿವಾರ (ಮಾರ್ಚ್​ 28) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ-ಎಸ್‌ಆರ್‌ಎಚ್​ ನಡುವಿನ ಉದ್ಘಾಟನಾ ಪಂದ್ಯವನ್ನು ವೀಕ್ಷಿಸಿದರು.
ಆರ್‌ಸಿಬಿ ಜೆರ್ಸಿ ಧರಿಸಿದ್ದ ಅನನ್ಯಾ ಬಿರ್ಲಾ, ತಮ್ಮ ಕೈಯಿಂದ ಆರ್‌ಸಿಬಿ ಧ್ವಜವನ್ನು ಬೀಸುವ ಮೂಲಕ ಅಭಿಮಾನಿಗಳನ್ನು ರೋಮಾಂಚನಗೊಳಿಸಿದರು. ಅವರ ಸನ್ನೆಗಳು ಹಾಗೂ ಹಾವಾಭಾವಗಳು ಎಲ್ಲರನ್ನೂ ಆಕರ್ಷಿಸಿದವು. ಕಾವ್ಯಾ ಮಾರನ್ ಅವರು ಒಂದು ಬದಿಯಲ್ಲಿ ತಮ್ಮ ಎಸ್‌ಆರ್‌ಎಚ್ ತಂಡವನ್ನು ಹುರಿದುಂಬಿಸಿದರೆ, ಇನ್ನೊಂದು ಬದಿಯಲ್ಲಿ ಅನನ್ಯಾ ಬಿರ್ಲಾ ಅವರು ಆರ್‌ಸಿಬಿ ಧ್ವಜವನ್ನು ಬೀಸುತ್ತಿರುವುದು ಕಂಡುಬಂದಿತು.
ಇದನ್ನು ನೋಡಿದ ಅಭಿಮಾನಿಗಳು ಕಾವ್ಯ ಮಾರನ್ ಅವರಂತೆಯೇ ಅನನ್ಯಾ ಬಿರ್ಲಾ ಕೂಡ ಈ ಋತುವಿನಲ್ಲಿ ಆರ್‌ಸಿಬಿ ಆಡುವ ಎಲ್ಲಾ ಪಂದ್ಯಗಳಿಗೆ ಹಾಜರಾಗಬೇಕೆಂದು ಬಯಸಿದ್ದಾರೆ. ಆರ್​ಸಿಬಿ ಅಭಿಮಾನಿಗಳ ಈ ಆಸೆಯನ್ನು ಅನನ್ಯಾ ಈಡೇರಿಸುತ್ತಾರಾ ಎಂದು ಕಾದು ನೋಡಬೇಕಿದೆ. ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಅನನ್ಯಾ ನಿನ್ನೆ ಪಂದ್ಯವನ್ನು ವೀಕ್ಷಿಸಿದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಸದ್ಯ ಅನನ್ಯಾರದ್ದೇ ಸುದ್ದಿ
ಸದ್ಯಕ್ಕೆ ಎಲ್ಲೆಡೆ ಅನನ್ಯಾರ ಹೆಸರೇ ಓಡಾಡುತ್ತಿದೆ. ಇದೀಗ ಕ್ರೀಡಾಭಿಮಾನಿಗಳ ಕಣ್ಣು ಅನನ್ಯಾ ಮೇಲೆ ಬಿದ್ದಿದ್ದು, ಕಾವ್ಯಾ ಮಾರನ್​ ಸೈಡ್​ಲೈನ್​ ಆಗುತ್ತಿದ್ದಾರೆ. ಸಾಮಾಜಿಕ ಜಾಲತಾಣ ಓಪನ್​ ಮಾಡಿದರೆ ಸಾಕು ಅನನ್ಯಾ ಅವರಿಗೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳು ಸಾಕಷ್ಟು ಹರಿದಾಡುತ್ತಿವೆ. ಮುಂದೆ ಆರ್​ಸಿಬಿ ತಂಡದ ಐಕಾನ್​ ಆಗುವ ಎಲ್ಲ ಸಾಧ್ಯತೆ ಇದೆ. ಆರ್​ಸಿಬಿ, ಅತ್ಯಧಿಕ ಅಭಿಮಾನಿಗಳನ್ನು ಹೊಂದಿರುವ ಐಪಿಎಲ್​ ಫ್ರಾಂಚೈಸಿ ಅನ್ನೋದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಅನನ್ಯಾ ಖ್ಯಾತಿ ಇನ್ನಷ್ಟು ಹೆಚ್ಚಾಗಲಿದೆ. ಇದಕ್ಕೆ ಸಾಕ್ಷಿ ಎಂಬಂತೆ ಈಗಾಗಲೇ ಅನನ್ಯಾ ಬಿರ್ಲಾ ಅವರ ಇನ್​ಸ್ಟಾಗ್ರಾಂ ಫಾಲೋವರ್ಸ್​ ಸಂಖ್ಯೆ ಕೂಡ ಹೆಚ್ಚಾಗಿದೆ. ಪ್ರಸ್ತುತ ಕಾವ್ಯಾ ಮಾರನ್​​ಗಿಂತ ಅನನ್ಯ ಹೆಸರು ಹೆಚ್ಚು ಕೇಳಿಬರುತ್ತಿದ್ದು, ಕಾವ್ಯಾ ಖ್ಯಾತಿಗೆ ಅನನ್ಯಾ ಚೆಕ್​ಮೇಟ್​ ಇಟ್ಟಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಅಂದಹಾಗೆ, 1994 ರಲ್ಲಿ ಮುಂಬೈನಲ್ಲಿ ಜನಿಸಿದ ಅನನ್ಯಾ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದರು. ಅವರು ಪ್ರಸ್ತುತ ಆದಿತ್ಯ ಬಿರ್ಲಾ ಗ್ರೂಪ್‌ನಲ್ಲಿ ಹಲವಾರು ಪ್ರಮುಖ ವ್ಯವಹಾರ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಈ ಋತುವಿನಲ್ಲಿ ಆರ್‌ಸಿಬಿ ಆಡುವ ಉಳಿದ ಪಂದ್ಯಗಳಿಗೆ ಅನನ್ಯಾ ಹಾಜರಾಗುತ್ತಾರೋ ಇಲ್ಲವೋ ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net