ಬಾಂಬ್​ ಸ್ಫೋಟವಾಗ್ಲಿ ಅಂದಿದ್ದೇ ತಡ ಆಗೇ ಹೋಯ್ತು... ಪಾಕ್​ನಲ್ಲಿ ನಡೆದ ದಾಳಿ ಬಗ್ಗೆ ಸಂಗಕ್ಕರ್​ ಶಾಕಿಂಗ್​ ಮಾತು! Kumar Sangakkara

ಬಾಂಬ್​ ಸ್ಫೋಟವಾಗ್ಲಿ ಅಂದಿದ್ದೇ ತಡ ಆಗೇ ಹೋಯ್ತು... ಪಾಕ್​ನಲ್ಲಿ ನಡೆದ ದಾಳಿ ಬಗ್ಗೆ ಸಂಗಕ್ಕರ್​ ಶಾಕಿಂಗ್​ ಮಾತು! Kumar Sangakkara
ಬಾಂಬ್​ ಸ್ಫೋಟವಾಗ್ಲಿ ಅಂದಿದ್ದೇ ತಡ ಆಗೇ ಹೋಯ್ತು... ಪಾಕ್​ನಲ್ಲಿ ನಡೆದ ದಾಳಿ ಬಗ್ಗೆ ಸಂಗಕ್ಕರ್​ ಶಾಕಿಂಗ್​ ಮಾತು! Kumar Sangakkara
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ 2009 ರಲ್ಲಿ ಪಾಕಿಸ್ತಾನದ ಲಾಹೋರ್‌ನಲ್ಲಿ ಗುಂಡಿನ ದಾಳಿ ನಡೆಯಿತು
  • ಈ ದಾಳಿಯ ಬಗ್ಗೆ ಲಂಕಾದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಅವರಿಂದ ಅಚ್ಚರಿಯ ಮಾತು
  • ಭಯೋತ್ಪಾದಕ ದಾಳಿ ಜೀವನದ ಮೇಲಿನ ತಮ್ಮ ದೃಷ್ಟಿಕೋನವನ್ನು ಹೇಗೆ ಬದಲಿಸಿತು ಎಂಬುದನ್ನು ತಿಳಿಸಿದ ಸಂಗಕ್ಕಾರ
Kumar Sangakkara : ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ 2009 ರಲ್ಲಿ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯು ಜೀವನದ ಮೇಲಿನ ತಮ್ಮ ದೃಷ್ಟಿಕೋನವನ್ನು ಹೇಗೆ ಬದಲಿಸಿತು ಅನ್ನೋದನ್ನ ಲಂಕಾದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಇತ್ತೀಚಿನ ಪಾಡ್​ಕಾಸ್ಟ್​ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
ಪಾಕಿಸ್ತಾನದ ಕ್ರಿಕೆಟ್ ಇತಿಹಾಸವನ್ನೇ ಬದಲಿಸಿದ ಆ ದಿನದ ಆಘಾತಕಾರಿ ನೆನಪುಗಳನ್ನು ರಾಜಸ್ಥಾನ ರಾಯಲ್ಸ್​ ತಂಡದ ಹಾಲಿ ಕೋಚ್ ಇದೀಗ​ ಹಂಚಿಕೊಂಡಿದ್ದಾರೆ. ಮಾರ್ಚ್ 3, 2009 ರಂದು, ಲಾಹೋರ್‌ನ ಗಡಾಫಿ ಕ್ರೀಡಾಂಗಣಕ್ಕೆ ಹೋಗುತ್ತಿದ್ದ ಶ್ರೀಲಂಕಾ ತಂಡದ ಬಸ್ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದರು. ಈ ಘಟನೆಗೂ ಮುನ್ನ ನಡೆದ ರೋಚಕ ಕ್ಷಣಗಳನ್ನು ಸಂಗಕ್ಕಾರ ನೆನಪಿಸಿಕೊಂಡಿದ್ದಾರೆ.
ನಾವು ಟೆಸ್ಟ್ ಪಂದ್ಯದ ಮೂರನೇ ದಿನ ಹೋಟೆಲ್‌ನಿಂದ ಕ್ರೀಡಾಂಗಣಕ್ಕೆ ಹೋಗುತ್ತಿದ್ದೆವು. ಈ ವೇಳೆ ಬಸ್​ನ ಮುಂಭಾಗದಲ್ಲಿ ಕುಳಿತಿದ್ದ ವೇಗದ ಬೌಲರ್ ಒಬ್ಬರು ತಮಾಷೆಯಾಗಿ, 'ಈ ಫ್ಲಾಟ್ ಪಿಚ್‌ನಲ್ಲಿ ನನ್ನ ಬೆನ್ನು ಮುರಿಯುತ್ತದೆ. ಎಲ್ಲಿಯಾದರೂ ಬಾಂಬ್ ಸ್ಫೋಟಗೊಂಡಿದ್ದರೆ, ನಾವು ಮನೆಗೆ ಹೋಗಬಹುದಿತ್ತು' ಎಂದು ಹೇಳಿದರು. ಅವರು ಆ ರೀತಿ ಹೇಳಿದ ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲೇ ನಮ್ಮ ಮೇಲೆ ಭೀಕರ ದಾಳಿ ನಡೆಯಿತು" ಎಂದು ಸಂಗಕ್ಕಾರ ಹೇಳಿದ್ದಾರೆ.
ಈ ದಾಳಿಯಲ್ಲಿ ಸಂಗಕ್ಕಾರ, ಅಜಂತಾ ಮೆಂಡಿಸ್ ಮತ್ತು ತಿಲನ್ ಸಮರವೀರ ಸೇರಿದಂತೆ ಸುಮಾರು ಆರು ಶ್ರೀಲಂಕಾ ಆಟಗಾರರು ಗಾಯಗೊಂಡರು. ಎಂಟು ಜನರನ್ನು ಬಲಿ ತೆಗೆದುಕೊಂಡ ಮತ್ತು ಸುಮಾರು ಇಪ್ಪತ್ತು ಜನರನ್ನು ಗಾಯಗೊಳಿಸಿದ ಈ ದುರಂತ ಘಟನೆಯ ಗಾಯದ ಗುರುತುಗಳು ನಮ್ಮ ದೇಹದ ಮೇಲೆ ಇನ್ನೂ ಇವೆ ಎಂದು ಸಂಗಕ್ಕಾರ ಸಂದರ್ಶನದಲ್ಲಿ ಹೇಳಿದ್ದಾರೆ.
ಆ ಭೀಕರ ದಾಳಿಯಲ್ಲಿ ಸಂಗಕ್ಕಾರ ಅವರ ದೇಹದ ಬಲಭಾಗಕ್ಕೆ ಸಣ್ಣಪುಟ್ಟ ಗಾಯಗಳಾಗಿ ಶ್ರ್ಯಾಪ್ನಲ್ (ಶೆಲ್ ಚೂರುಗಳು) ಸಿಲುಕಿದ್ದವು. ದೈಹಿಕವಾಗಿ ಗಾಯಗೊಂಡಿದ್ದರೂ, ಅವರು ಮಾನಸಿಕವಾಗಿ ಕುಗ್ಗಲಿಲ್ಲ. ಬದಲಿಗೆ, ಆ ಕೇವಲ ಎರಡು ನಿಮಿಷಗಳ ಘಟನೆಯು ಅವರಿಗೆ ಬದುಕಿನ ಬಗ್ಗೆ ಹೊಸ ದೃಷ್ಟಿಕೋನವನ್ನು ನೀಡಿತು. ಅಂದು ಶ್ರೀಲಂಕಾದಲ್ಲಿ ನಡೆಯುತ್ತಿದ್ದ ಭೀಕರ ಅಂತರ್ಯುದ್ಧದ ನಡುವೆ, ಈ ಘಟನೆ ಅವರಿಗೆ ತಾನು ಅನುಭವಿಸುತ್ತಿರುವ ಜೀವನದ ಬಗ್ಗೆ ಆಳವಾದ ಕೃತಜ್ಞತಾ ಭಾವನೆಯನ್ನು ಮೂಡಿಸಿತು.
ದಾಳಿಯ ಕೆಲವು ವಾರಗಳ ನಂತರ ಕೊಲೊಂಬೊದಲ್ಲಿ ವಾಹನ ಚಲಾಯಿಸುವಾಗ ಒಬ್ಬ ಸೈನಿಕ ಅವರನ್ನು ತಡೆದು ಕುಶಲೋಪರಿ ವಿಚಾರಿಸಿದ್ದರು. ಆ ಸೈನಿಕರು ಕ್ರಿಕೆಟಿಗರ ಮೇಲಿನ ದಾಳಿಯ ಬಗ್ಗೆ ಆಘಾತ ವ್ಯಕ್ತಪಡಿಸಿದಾಗ, ಸಂಗಕ್ಕಾರ ಅವರಿಗೆ ಒಂದು ಸತ್ಯದ ದರ್ಶನವಾಯಿತು. ದೇಶದ ಸೈನಿಕರು ಪ್ರತಿದಿನ ಇಂತಹ ಪ್ರಾಣಾಪಾಯದ ಸ್ಥಿತಿಯನ್ನು ಎದುರಿಸುತ್ತಿರುತ್ತಾರೆ, ಆದರೆ ತಾವು ಕೇವಲ ಎರಡು ನಿಮಿಷಗಳ ಕಾಲ ಅನುಭವಿಸಿದ ಕಷ್ಟಕ್ಕೆ ಇಡೀ ಜಗತ್ತಿನ ಗಮನ ಸೆಳೆದಿದ್ದನ್ನು ಕಂಡು ಅವರು ಒಂದು ಕ್ಷಣ ಮೌನವಾದರು.
ಸಂಗಕ್ಕಾರ ಅವರು ಆ ಸೈನಿಕನ ಮಾತುಗಳಿಂದ ಪ್ರಭಾವಿತರಾದರು. ನಾವು ಕೇವಲ ಒಂದು ಆಟವನ್ನು ಆಡುತ್ತೇವೆ ಮತ್ತು ಅದಕ್ಕೆ ಉತ್ತಮ ಸಂಭಾವನೆ ಪಡೆಯುತ್ತೇವೆ. ಆದರೆ, ದೇಶದ ಜನತೆ ಮತ್ತು ಸೈನಿಕರು ಕಳೆದ 20 ರಿಂದ 26 ವರ್ಷಗಳಿಂದ ಅನುಭವಿಸುತ್ತಿರುವ ನೋವನ್ನು ನಾವು ಕೇವಲ ಎರಡು ನಿಮಿಷಗಳಲ್ಲಿ ಅನುಭವಿಸಿ, ತಕ್ಷಣವೇ 'ಹೀರೋ'ಗಳಾಗಿ ಬಿಡುತ್ತೇವೆ" ಎಂದು ಹೇಳುವ ಮೂಲಕ, ನಿಜವಾದ ಶೌರ್ಯ ಯಾರದ್ದು ಮತ್ತು ಕ್ರಿಕೆಟ್ ಕೇವಲ ಒಂದು ಆಟ ಮಾತ್ರ ಎಂಬ ವಾಸ್ತವವನ್ನು ಸಂಗಕ್ಕಾರ ಮನವರಿಕೆ ಮಾಡಿಕೊಟ್ಟರು.
ಸಂಗಕ್ಕಾರ ಅವರು ಆಡಿದ ಈ ಮಾತುಗಳು ನಿಜಕ್ಕೂ ನಮ್ಮನ್ನು ಚಿಂತನೆಗೆ ದೂಡುತ್ತವೆ. ಕ್ರಿಕೆಟ್​ ಆಡುವವರನ್ನು ಅಥವಾ ಸಿನಿಮಾ ಕಲಾವಿದರನ್ನು ಹೀರೋ ಆಗಿ ಮೆರೆಸುವ ನಮ್ಮ ಜನ, ನಿಜವಾಗಿಯೂ ಶತ್ರುಗಳ ಗುಂಡಿಗೆ ಅಂಜದೆ, ಹಗಲು-ರಾತ್ರಿ ನಮ್ಮ ದೇಶವನ್ನು ಕಾಯುತ್ತಿರುವ ನಮ್ಮ ವೀರ ಯೋಧರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ ಎಂಬ ಕಟು ವಾಸ್ತವವನ್ನು ಸಂಗಕ್ಕಾರ ಅವರ ಮಾತುಗಳು ತೆರೆದಿಟ್ಟಿವೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net