LSG ಹಂಚಿಕೊಂಡ ವಿಡಿಯೋ ನೋಡಿ ವಿರಾಟ್​ ಕೊಹ್ಲಿ ಅಭಿಮಾನಿಗಳಿಗೆ ಕಾಡುತ್ತಿದೆ ಈ ಒಂದು ಪ್ರಶ್ನೆ! Virat Kohli

LSG ಹಂಚಿಕೊಂಡ ವಿಡಿಯೋ ನೋಡಿ ವಿರಾಟ್​ ಕೊಹ್ಲಿ ಅಭಿಮಾನಿಗಳಿಗೆ ಕಾಡುತ್ತಿದೆ ಈ ಒಂದು ಪ್ರಶ್ನೆ! Virat Kohli
LSG ಹಂಚಿಕೊಂಡ ವಿಡಿಯೋ ನೋಡಿ ವಿರಾಟ್​ ಕೊಹ್ಲಿ ಅಭಿಮಾನಿಗಳಿಗೆ ಕಾಡುತ್ತಿದೆ ಈ ಒಂದು ಪ್ರಶ್ನೆ! Virat Kohli
Published on

ಪ್ರಮುಖ ಮುಖ್ಯಾಂಶಗಳು

  • ಆರ್​ಸಿಬಿ ತಂಡ ಇಂದು (ಬುಧವಾರ) ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ
  • ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಈ ಪಂದ್ಯಕ್ಕೆ ಸಾಕ್ಷಿಯಾಗಲಿದೆ
  • ಮಂಗಳವಾರ ನಡೆದ ಅಭ್ಯಾಸದ ಸಮಯದಲ್ಲಿ ಕೊಹ್ಲಿ ಎಡಗಾಲಿಗೆ ಬ್ಯಾಂಡೇಜ್ ಧರಿಸಿದ್ದಾರೆ
Virat Kohli : ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡವು ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಇಲ್ಲಿಯವರೆಗೆ ನಾಲ್ಕು ಪಂದ್ಯಗಳನ್ನು ಆಡಿದ್ದು, ಮೂರರಲ್ಲಿ ಗೆಲುವು ಸಾಧಿಸಿ, ಒಂದು ಪಂದ್ಯದಲ್ಲಿ ಸೋತಿದೆ. ಇದರೊಂದಿಗೆ ಪ್ರಸ್ತುತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಆರ್​ಸಿಬಿ ತಂಡ ಇಂದು (ಬುಧವಾರ) ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಈ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಈ ಪಂದ್ಯಕ್ಕೂ ಮುನ್ನವೇ ಆರ್​ಸಿಬಿ ಒಂದು ಹಿನ್ನಡೆಯಾಗಿದೆ. ಅದೇನೆಂದರೆ, ಕೊಹ್ಲಿ ಇಂದು ಆಡುವುದು ಅನುಮಾನವಾಗಿದೆ.
ಹೌದು, ಎಲ್​ಎಸ್​ಜಿ ಫ್ರಾಂಚೈಸಿ ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ ಕೊಹ್ಲಿ, ತಮ್ಮ ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡು ಕಾಣಿಸಿಕೊಂಡಿದ್ದಾರೆ. ಮಂಗಳವಾರ ನಡೆದ ಅಭ್ಯಾಸದ ಸಮಯದಲ್ಲಿ ಕೊಹ್ಲಿ ಎಡಗಾಲಿಗೆ ಬ್ಯಾಂಡೇಜ್ ಧರಿಸಿರುವುದು ಕಂಡುಬಂದಿದೆ. ಅಭ್ಯಾಸದ ನಂತರ, ಕೊಹ್ಲಿ ಅವರು ಎಲ್​ಎಸ್​ಜಿ ನಾಯಕ ರಿಷಭ್ ಪಂತ್ ಮತ್ತು ಸಹಾಯಕ ಸಿಬ್ಬಂದಿಗಳಲ್ಲಿ ಒಬ್ಬರಾದ ಕೇನ್ ವಿಲಿಯಮ್ಸನ್ ಅವರನ್ನು ಅಪ್ಪಿಕೊಂಡರು. ಇದರ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದವರಿಗೆ ಇಂದು ಕೊಹ್ಲಿ ಆಡುತ್ತಾರಾ? ಇಲ್ಲವಾ? ಎಂಬ ಪ್ರಶ್ನೆ ಕಾಡುತ್ತಿದೆ. ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ, ಇಂದಿನ ಪಂದ್ಯ ಆರಂಭವಾಗುವವೆಗೂ ಕಾಯಬೇಕಾಗುತ್ತದೆ.
ಅಂದಹಾಗೆ, ವಿರಾಟ್ ಕೊಹ್ಲಿ ಅವರು ಪಾದದ ಗಾಯದಿಂದ ಬಳಲುತ್ತಿದ್ದಾರೆ. ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಕೇವಲ ಬ್ಯಾಟಿಂಗ್ ಮಾತ್ರ ಮಾಡಿದರು. ಬಳಿಕ ಫೀಲ್ಡಿಂಗ್‌ಗೆ ಬರಲಿಲ್ಲ. ಕೊಹ್ಲಿ ಇನ್ನೂ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ತೋರುತ್ತದೆ. ಈ ಸರಣಿಯಲ್ಲಿ ಲಖನೌ ವಿರುದ್ಧದ ಪಂದ್ಯವನ್ನು ಆಡುವುದು ಅನುಮಾನವಾಗಿದೆ. ಆದರೆ, ಕೊಹ್ಲಿ ವಿಷಯದಲ್ಲಿ ಆರ್‌ಸಿಬಿ ಯಾವುದೇ ಅಪಾಯವನ್ನು ತೆಗೆದುಕೊಳ್ಳುವುದಿಲ್ಲ ಎಂದು ವಿಶ್ಲೇಷಕರು ಹೇಳುತ್ತಾರೆ. ಒಂದು ವೇಳೆ ಕೊಹ್ಲಿ ಆಡಲು ಬಯಸಿದರೆ, ಅವರನ್ನು ಇಂಪ್ಯಾಕ್ಟ್​ ಆಟಗಾರನಾಗಿ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.
ಐಪಿಎಲ್ 2026ರಲ್ಲಿ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿರುವ ವಿರಾಟ್, 59.66 ಸರಾಸರಿ ಮತ್ತು 162.72 ಸ್ಟ್ರೈಕ್ ರೇಟ್​ನಲ್ಲಿ 179 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳು ಸೇರಿವೆ. ಅವರ ಅತ್ಯುತ್ತಮ ಸ್ಕೋರ್ ಔಟಾಗದೆ 69 ರನ್, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net