ಕೇವಲ 18 ವರ್ಷ ವಯಸ್ಸಿನ ಆರ್ಯವೀರ್, ಇನ್ನಿಂಗ್ಸ್ ಆರಂಭಿಸಿ 14 ಎಸೆತಗಳಲ್ಲಿ 4 ಬೌಂಡರಿಗಳ ಸಮೇತ 22 ರನ್ ಗಳಿಸಿದರು. ಅವರು ಬಾರಿಸಿದ ಆ ಶಾಟ್, 2011ರ ಏಕದಿನ ವಿಶ್ವಕಪ್‌ನಲ್ಲಿ ಐರ್ಲೆಂಡ್ ವಿರುದ್ಧ ಸೆಹ್ವಾಗ್ ಬಾರಿಸಿದ್ದ ಬ್ಯಾಕ್-ಫೂಟ್ ಪಂಚ್ ಅನ್ನು ಹೋಲುತ್ತಿತ್ತು. ದೆಹಲಿ ಪ್ರೀಮಿಯರ್ ಲೀಗ್ (DPL) ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಇಬ್ಬರ ಬ್ಯಾಟಿಂಗ್ ದೃಶ್ಯಗಳನ್ನು ಹಂಚಿಕೊಂಡಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಆಟಗಾರ ಯುವರಾಜ್ ಸಿಂಗ್ ಇದನ್ನು 'ಫೋಟೋಕಾಟ್' ಎಂದು ಬಣ್ಣಿಸಿದ್ದಾರೆ. ಈ ಪಂದ್ಯದಲ್ಲಿ ವೆಸ್ಟ್ ದೆಹಲಿ ಲಯನ್ಸ್ ತಂಡವು ಆರು ವಿಕೆಟ್‌ಗಳ ಗೆಲುವು ಸಾಧಿಸಿತು.