ಧುರಂಧರ್ 2 ನೋಡಿ ಫಿದಾ ಆದ ಡಿವೈನ್​ ಸ್ಟಾರ್​: ಇದು ಬರಿ ಸಿನಿಮಾವಲ್ಲ; ಸ್ಪಷ್ಟ ಸಂದೇಶ ಎಂದ ರಿಷಬ್ ಶೆಟ್ಟಿ! Rishab Shetty on Dhurandhar 2

ಇದು ಕೇವಲ ಸಿನಿಮಾವಲ್ಲ; ಬದಲಿಗೆ ಸ್ಪಷ್ಟ ಸಂದೇಶ ಎಂದ ರಿಷಬ್​ ಶೆಟ್ಟಿ
ಇದು ಕೇವಲ ಸಿನಿಮಾವಲ್ಲ; ಬದಲಿಗೆ ಸ್ಪಷ್ಟ ಸಂದೇಶ ಎಂದ ರಿಷಬ್​ ಶೆಟ್ಟಿ
Published on

ಪ್ರಮುಖ ಮುಖ್ಯಾಂಶಗಳು

  • ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ಧುರಂಧರ್ 2
  • ಮುದಲ ಮೂರು ದಿನದಲ್ಲಿ 350 ಕೋಟಿ ಗಳಿಕೆ
  • ಇದು ಕೇವಲ ಸಿನಿಮಾವಲ್ಲ; ಬದಲಿಗೆ ಸ್ಪಷ್ಟ ಸಂದೇಶ ಎಂದ ರಿಷಬ್​ ಶೆಟ್ಟಿ
  • ಪ್ರತಿ ಸನ್ನಿವೇಶ ಯುದ್ಧದಲ್ಲಿ ಬಾರಿಸುವ ಮೃದಂಗದಂತಿದೆ: ಡಿವೈನ್​ ಸ್ಟಾರ್​
ಬಾಲಿವುಡ್​: ಗುರುವಾರ (ಮಾಚ್​ 19) ರಂದು ತೆರೆಕಂಡು ಭಾರತದಾದ್ಯಂತ ಸಂಚಲನ ಸೃಷ್ಟಿಸಿರುವ ಸಿನಿಮಾ ಎಂದರೆ ಅದು ಧುರಂಧರ್​ 2: ದಿ ರಿವೆಂಜ್​. ಬಿಡುಗಡೆಯಾ ಕೇವಲ ಮೂರೇ ದಿನದಲ್ಲಿ ಈ ಸಿನಿಮಾ ಸುಮಾರು 350 ಕೋಟಿಗೂ ಹೆಚ್ಚಿನ ಕಲೆಕ್ಷನ್​ ಮಾಡಿದ್ದು, ಇದರ ಓಟ ಹೀಗೆ ನಡೆದರೆ 2,000 ಕೋಟಿ ಕ್ಲಬ್​ನ್ನು ಈ ಸಿನಿಮಾ ಸುಲಭವಾಗಿ ತಲುಪಲಿದೆ ಎಂದು ಹೇಳಲಾಗುತ್ತಿದೆ.
ಈ ಸಿನಿಮಾದ ಮೊದಲ ಭಾಗ ಬಿಡುಗಡೆಯಾದ ದಿನದಿಂದ ಈ ಚಿತ್ರದ ಪರ-ವಿರೋಧ ಚರ್ಚೆ ನಡೆಯುತ್ತಿದ್ದು, ಈಗ ಈ ಸಿನಿಮಾದ ಎರಡನೇ ಭಾಗ ತೆರೆಕಂಡ ಮೇಲೆ ಈ ಸಿನಿಮಾವನ್ನು ಪ್ರೀತಿಸುವ ಹಾಗೂ ದ್ವೇಷಿಸುವವರ ಸಂಖ್ಯೆ ಸಮಾನವಾಗಿ ಬೆಳೆದಿದೆ ಎಂದರೆ ಸುಳ್ಳಲ್ಲ.

ಇದು ಕೇವಲ ಸಿನಿಮಾವಲ್ಲ; ಇದೊಂದು ಸಂದೇಶ!

ಈಗ ಈ ಸಿನಿಮಾ ಬಗ್ಗೆ ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ (Rishab Shetty on Dhurandhar 2) ತಮ್ಮ ಸಾಮಾಜಿಕ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದ ಮೊದಲ ದೃಶ್ಯವೇ ನಿಮ್ಮನ್ನು ಹೇಗೆ ಸೆಳೆಯುತ್ತದೆ ಎಂದರೆ ಸಿನಿಮಾ ಮುಗಿದ ಮೇಲು ಈ ಸಿನಿಮಾದ ಪ್ರಭಾವ ನಿಮ್ಮ ಮೇಲಿರುತ್ತದೆ. ಈ ಸಿನಿಮಾದ ಪ್ರತಿ ಸನ್ನಿವೇಶವು ಯುದ್ಧದಲ್ಲಿ ಮೊಳಗುವ ಮೃದಂಗದಂತಿದೆ.
ಇದು ಕೇವಲ ಒಂದು ಸಿನಿಮಾವಲ್ಲ; ಇದೊಂದು ಸ್ಪಷ್ಟ ಸಂದೇಶವಾಗಿದೆ. ಈ ಸಿನಿಮಾದ ಕಥೆ ಹೇಳುವಿಕೆ ಪ್ರತಿ ಸನ್ನಿವೇಶದ ವಿವರಣೆ ನನಗೆ ತುಂಬಾ ಇಷ್ಟವಾಗಿದೆ. ಪ್ರತಿಯೊಬ್ಬ ಕಲಾವಿದರು ಸಹ ತಮ್ಮ ಪಾತ್ರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಎಂದು ಹೋಗಳಿರುವ ರಿಷಬ್​ ಶೆಟ್ಟಿ ನಿರ್ದೇಶಕ ಆದಿತ್ಯ ಧರ್​, ಆರ್​. ಮಾಧವನ್, ರಣವೀರ್​ ಸಿಂಗ್​, ರಾಕೇಶ್​ ಬೇಡಿ, ಅರ್ಜುನ್​ ರಾಂಪಾಲ್​, ಸಾರಾ ಅರ್ಜುನ್​ ಮತ್ತು ಸಂಜಯ್​ ದತ್ ಅವರನ್ನು ಟ್ಯಾಗ್​ ಮಾಡಿ ಬರೆದಿದ್ದಾರೆ.

ಕಾಂತಾರ ಮತ್ತು ರಣವೀರ್​ ಸಂಬಂಧ!

ಬಾಲಿವುಡ್​ ನಟ ರಣವೀರ್​ ಸಿಂಗ್​, ರಿಷಬ್​ ಶೆಟ್ಟಿ ಅಭಿನಯದ ಕಾಂತಾರಾ ಸಿನಿಮಾದಲ್ಲಿ ತೋರಿಸಲಾಗಿದ್ದ ದೈವದ ಪಾತ್ರವನ್ನು ಮಿಮಿಕ್ರಿ ಮಾಡಿ ವಿವಾದಕ್ಕೆ ಸಿಲುಕಿ ಕೊಂಡಿದ್ದರು.
ನವೆಂಬರ್​ 30, 2025 ರಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ರಣವೀರ್​ ಸಿಂಗ್ ಮಾಡಿದ್ದ ದೈವದ ಮಿಮಿಕ್ರಿ ವಿವಾದದ ಕೇಂದ್ರಬಿಂದುವಾಗಿತ್ತು. ಈ ಕುರಿತು ರಣವೀರ್​ ಮೇಲೆ ಎಫ್​ಐಆರ್​ ಕೂಡ ದಾಖಲಾಗಿತ್ತು.
ಈ ಘಟನೆಗೆ ಅಂದು ಪ್ರತಿಕ್ರಿಯಿಸಿದ್ದ ರಿಷಬ್​, ರಣವೀರ್​ ಸಿಂಗ್​ ವರ್ತನೆ ನನಗೆ ಬೇಸರ ತರಿಸಿದೆ. ದೈವ ನಮ್ಮ ನಂಬಿಕೆ ಮತ್ತು ಆಚರಣೆಯ ಭಾಗ, ಅದನ್ನು ಎಲ್ಲೆಂದರಲ್ಲಿ ಪ್ರದರ್ಶಿಸುವುದು ಮತ್ತು ಅಪಹಾಸ್ಯ ಮಾಡದ ಕುರಿತು ನಾನು ಎಲ್ಲರಲ್ಲಿ ಕೇಳಿಕೊಳ್ಳುತ್ತೇನೆ ಎಂದು ನಟ-ನಿರ್ದೇಶಕ ರಿಷಬ್​ ಶೆಟ್ಟಿ ಹೇಳಿದ್ದರು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net