ಹನಿಮೂನ್ ಸಂಭ್ರಮದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಹನಿಮೂನ್ ಸಂಭ್ರಮದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ
ಥೈಲ್ಯಾಂಡ್‌ನ ಐಷಾರಾಮಿ ವಿಲ್ಲಾದಲ್ಲಿ ಪ್ರಕೃತಿಯ ಮಡಿಲಲ್ಲಿ ವಿರೋಶ್ ಜೋಡಿ
ಒಬ್ಬರ ಕಣ್ಣಲ್ಲಿ ಇನ್ನೊಬ್ಬರು ಕಳೆದೋಗಿರುವ ಫೋಟೊ ವೈರಲ್!
ಥೈಲ್ಯಾಂಡ್: ಕೆಲ ದಿನಗಳ ಹಿಂದೆ ಕಾಲಿವುಡ್ ನಟ ವಿಜಯ್ ದೇವರಕೊಂಡ ಮತ್ತು ನ್ಯಾಷನಲ್ ಕ್ರಶ್ ಖ್ಯಾತಿಯ ರಷ್ಮಿಕಾ ಮಂದಣ್ಣ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಸುದ್ದಿ ಎಲ್ಲರಿಗೂ ತಿಳಿದೆ ಇದೆ. ಸದ್ಯ ಈ ಜೋಡಿ ಈಗ ಹನಿಮೂನ್ (Vijay-Rashmika in Honeymoon) ಆಚರಿಸಲು ಥೈಲ್ಯಾಂಡ್ಗೆ ತೆರಳಿದ್ದು, ಅಲ್ಲಿಯ ಫೋಟೊಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ಪ್ರಕೃತಿ ಮಡಿಲಲ್ಲಿ ಸ್ಟಾರ್ ಕಪಲ್ಸ್!
ಮದುವೆಯ ನಂತರ ವಿರಶ್ ಜೋಡಿ ಥೈಲ್ಯಾಂಡ್‌ನ ಕೊಹ್ ಸಮುಯಿಯಲ್ಲಿ ತಮ್ಮ ಹನಿಮೂನ್ ಸಂಭ್ರಮಿಸಲು ತೆರಳಿದ್ದು, ಮಾಹಿತಿ ಪ್ರಕಾರ ಇವರು ಒಂದು ಐಷಾರಾಮಿ ಬಂಗಲೆಯ ಬದಲಿಗೆ ಖಾಸಗಿಯಾಗಿರುವ ಒಂದು ವಿಲ್ಲಾದಲ್ಲಿ ತಮ್ಮ ಮಧುರ ಕ್ಷಣಗಳನ್ನು ಕಳೆಯುತ್ತಿರುವುದಾಗಿ ಸುದ್ದಿಯಿದೆ.
ಈ ವಿಲ್ಲಾವು ಸುತ್ತಲೂ ಕಾಡಿನಿಂದ ಕೂಡಿದ್ದು, ಈ ನವ ವಿವಾಹಿತ ಜೋಡಿಯು ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯುತ್ತಿದ್ದು, ಇವರ ವಿಲ್ಲಾದ ಹತ್ತಿರವೇ ಸಮುದ್ರ ತೀರ ಕೂಡ ಇದೆ ಎಂದು ಹೇಳಲಾಗುತ್ತಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಫೋಟೊನಲ್ಲಿ ವಿಜಯ್ ಹಾಗೂ ರಶ್ಮಿಕಾ ಇಬ್ಬರು ತಿಳಿ ಹಳದಿ ಬಣ್ಣದ ಡ್ರೆಸ್ ಧರಿಸಿ ಬಹಳ ಅನೋನ್ಯವಾಗಿ ಕಂಡುಬಂದಿದ್ದು, ಒಬ್ಬರ ಕಣ್ಣಲ್ಲಿ ಒಬ್ಬರನ್ನು ನೋಡಿಕೊಳ್ಳುತ್ತಾ ಕಳೆದು ಹೋಗಿರುವಂತೆ ಭಾಸವಾಗುವಂತೆ ನಿಂತಿದ್ದಾರೆ.
ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಸಿನಿಮಾಗಳ ನಂತರ ವಿಜಯ್ - ರಶ್ಮಿಕಾ ಸ್ನೇಹ ಪ್ರೀತಿಯಾಗಿ ಬದಲಾಗಿದೆ ಎಂಬ ವದಂತಿ ಸಿನಿಮಾರಂಗದಲ್ಲಿ ಹರಡುತ್ತಿತ್ತು. ಈ ಎಲ್ಲಾ ವದಂತಿಗಳಿಗೆ ತೀಲಾಂಜಲಿ ಎಂಬಂತೆ ಈ ಜೋಡಿ ಫೆಬ್ರವರಿ 26 ರಂದು ರಾಜಸ್ಥಾನದ ಉದಯ್ಪುರ್ನಲ್ಲಿ ಭಾರತೀಯ ಸಂಪ್ರದಾಯದಂತೆ ಮದುವೆಯಾದರು.
ಈ ಮದುವೆಯು ಕೇವಲ ಎರಡು ಕುಟುಂಬಗಳ ಸದಸ್ಯರು ಮತ್ತು ಆತ್ಮೀಯ ಸ್ನೇಹಿತರನ್ನು ಮಾತ್ರ ಒಳಗೊಂಡಿದ್ದು, ಇತರೆ ಸ್ನೇಹಿತರು ಹಾಗೂ ಚಿತ್ರರಂಗದವರಿಗಾಗಿ ಮಾರ್ಚ್ 4 ರಂದು ಹೈದರಾಬಾದ್ನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು,(ಏಜನ್ಸೀಸ್).