ಬೆಂಗಳೂರಿನಲ್ಲಿ ಪರ ಭಾಷೆ ಸಿನಿಮಾಗಳದ್ದೇ ಹವಾ; 'ನಾವು ಕನ್ನಡಿಗರು ವಿಶಾಲ ಹೃದಯದವರು' ಎಂದು Naveen Sajju ಬೇಸರ

Lo Naveena
Lo Naveena
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಕನ್ನಡ ಸಿನಿಮಾಗಳಿಗೆ ಕಡಗಣನೆ
  • ಬೆರಳೆಣಿಕೆ ಥಿಯೇಟರ್​ಗಳಲ್ಲಿ ಮಾತ್ರ ಲೋ ನವೀನ ಸಿನಿಮಾ ಪ್ರದರ್ಶನ
  • ನಟ ನವೀನ್​ ಸಜ್ಜುನಿಂದ ಸೋಶಿಯಲ್​ ಮೀಡಿಯಾದಲ್ಲಿ ಬೇಸರ ವ್ಯಕ್ತ
Lo Naveena: 'ಬೆಂಗಳೂರಿನಲ್ಲಿ ಪರಭಾಷೆ ಸಿನಿಮಾದ ಹಾವಳಿಯಿಂದ 'ಲೋ ನವೀನ' ಸಿನಿಮಾ ಪ್ರದರ್ಶನಕ್ಕೆ  ಥಿಯೇಟರ್​​ ಸಿಗುತ್ತಿಲ್ಲ. ನಾವು ಕನ್ನಡಿಗರು ವಿಶಾಲ ಹೃದಯದವರು ಹಾಗಾಗಿ ಪರಭಾಷೆಯವರಿಗೆ ಥಿಯೇಟರ್​ ಬಿಟ್ಟು ಕೊಡಲೇ ಬೇಕು' ಹೀಗೆಂದು' ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದು ಗಾಯಕ ಮತ್ತು ನಟ ನವೀನ್​ ಸಜ್ಜು.
ಪವನ್ ಧನುರ್ಧಾರಿ ನಿರ್ದೇಶನದ ಲೋ ನವೀನಾ ಉಸಾರು ಕಲಾ ಸಿನಿಮಾವು ಮೇ.15ರಂದು ರಿಲೀಸ್​ ಆಗಿತ್ತು. ಸಿನಿಮಾದಲ್ಲಿ ನವೀನ್​ ಸಜ್ಜು ಅವರು ನಾಯಕನಾಗಿ ನಟಿಸಿದ್ದರೆ,  ವರ್ಷ ಗಿರಿಧರ ಎನ್ನುವವರು ನಟಿಯಾಗಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದರು. ಪ್ರಕಾಶ್​ ತುಮಿನಾಡು ಬಣ್ಣ ಹಚ್ಚಿದ್ದರು. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುವ ಹೊತ್ತಲ್ಲೇ ಬೆರಳೆಣಿಕೆ ಥಿಯೇಟರ್​ನಲ್ಲಿ ಪ್ರದರ್ಶನಕ್ಕೆ ಅವಕಾಶ ಕೊಟ್ಟಿರುವ  ಬಗ್ಗೆ ನವೀನ್​ ಸಜ್ಜು ಬೇಸರ ವ್ಯಕ್ತಪಡಿಸಿದ್ದಾರೆ.

ನವೀನ್​ ಸಜ್ಜು ಬೇಸರ

'ಒಂದು ಕತೆಯನ್ನು ಸಿನಿಮಾ ಮಾಡಿ, ಅದಕ್ಕೆ ಪ್ರೊಡ್ಯುಸರ್​ನ ಹುಡುಕಿ, ಅದನ್ನ ಬೆಳ್ಳಿ ತೆರೆಗೆ ತಂದು, ಪ್ರೇಕ್ಷಕರು ನೆಚ್ಚಿಕೊಳ್ಳುವಂತೆ ಮಾಡುವುದು ಸುಲಭದ ದಾರಿಯಲ್ಲ ಎನ್ನುವುದು ಸಿನಿಮಾ ಮಾಡುವವರಿಗೆ ಅದರಲ್ಲೂ ಹೊಸ ಸಿನಿಮಾ ತಂಡ ಅಂದರೆ, ಹೊಸದಾಗಿ ಸಿನಿಮಾ ಮಾಡುವವರಿಗೆ ಅರ್ಥವಾಗುತ್ತದೆ' ಎಂದು ನವೀನ್​ ಸಜ್ಜು ಹೇಳಿದರು.
ಮುಂದುವರೆದು, 'ಸಿನಿಮಾವನ್ನು ಸೂಪರ್​ ಹಿಟ್​ ಮಾಡೋದು ಸಾಮಾನ್ಯ ವಿಚಾರವಲ್ಲ. 'ಲೋ ನವೀನ' ಸಿನಿಮಾ ರಿಲೀಸ್​ ಆಗಿ 21ನೇ ದಿನ ಇದು. ಜನರು ಸಿನಿಮಾ ನೆಚ್ಚಿಕೊಂಡಿದ್ದಾರೆ.  ಬೆಂಗಳೂರಿನಲ್ಲಿ ಶೋ ಇಲ್ಲ ಯಾಕೆ ಎಂತೆಲ್ಲ. ಸಾಕಷ್ಟು ಜನರು ಸಂದೇಶ ಕಳುಹಿಸುತ್ತಿದ್ದೀರಾ. ಆದರೆ, ಏನೂ ಮಾಡೋಕೆ ಆಗೋಲ್ಲ. ಯಾಕಂದ್ರೆ ಈಗ ಆಗಲೇ ಎರಡು ಪರಭಾಷೆ ಸಿನಿಮಾ ಥಿಯೇಟರ್​ಗೆ ಲಗ್ಗೆ ಇಟ್ಟಿದೆ. ಮೂರನೇಯದು ತೆಲುಗು ಸಿನಿಮಾ ಬಂದಿದೆ. ಅದು ಯಾವುದು ಎಂದು ನಿಮ್ಗೆ ಗೊತ್ತೇ ಇದೆ' ಎಂದು ಹೇಳಿದರು.
'ನಾವು ಕರ್ನಾಟಕದವರು ಕನ್ನಡಿಗರು ವಿಶಾಲ ಹೃದಯದವರು. ಹೀಗಾಗಿ ನಮ್ಮ ಸಿನಿಮಾ ಬಿಟ್ಟು ಬೇರೆಯವರ ಸಿನಿಮಾಗಳಿಗೆ ಅವಕಾಶ ಕೊಡ್ತಿದ್ದೇವೆ. ನಮ್ಗೆ ಥಿಯೇಟರ್ ಖಾಲಿ ಮಾಡಿಸಿದವರಿಗೆ ಧನ್ಯವಾದ. ಕರ್ನಾಟಕದಲ್ಲಿ ನಮಗೆ ಎಲ್ಲಿ ಜಾಗ ಕೊಡ್ತಾರೆ ಅಲ್ಲಿ ಮಾತ್ರ ನಮ್ಮ ಸಿನಿಮಾ ಪ್ರದರ್ಶನವಾಗ್ತಿದೆ. ಇದೊಂದೆ ಸಿನಿಮಾವಲ್ಲ ಪರಭಾಷೆ ಸಿನಿಮಾ ಬಂದಾಗ ನಮ್ಮ ಕನ್ನಡ ಸಿನಿಮಾ ಪ್ರದರ್ಶನಗೊಳ್ಳಲ್ಲ.  ಬೇರೆ ಊರುಗಳಲ್ಲಿ ಲೋ ನವೀನ ಸಿನಿಮಾ ಉತ್ತರ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಎಂಜಾಯ್​ ಮಾಡಿ ನಮ್ಮ ಕೈ ಹಿಡಿದ ಪ್ರೇಕ್ಷಕರಿಗೆ ಧನ್ಯವಾದ' ಎಂದಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net