'ಬಿಲ್ಲ ರಂಗ ಭಾಷಾ' ಸಿನಿಮಾ ಸ್ಥಗಿತ ವದಂತಿಗೆ ಬ್ರೇಕ್​; ಶೂಟಿಂಗ್​ ಬಗ್ಗೆ ಕಿಚ್ಚ ಸುದೀಪ್​ ಕೊಟ್ಟ ಅಪ್ಡೇಟ್​ ಇಷ್ಟು..Kichcha Sudeep

Billa Ranga Baasha
Billa Ranga Baasha
Published on

ಪ್ರಮುಖ ಮುಖ್ಯಾಂಶಗಳು

  • ಜೂ. 26ರಿಂದ ಬಿಲ್ಲ ರಂಗ ಭಾಷಾ ಸಿನಿಮಾ ಶೂಟಿಂಗ್​ ಆರಂಭ ಎಂದ ಸುದೀಪ್
  • ಬಿಲ್ಲ ರಂಗ ಭಾಷಾ ಸಿನಿಮಾ ಸ್ಥಗಿತ ಎನ್ನುವ ಊಹಾಪೋಹಕ್ಕೆ ಬ್ರೇಕ್
  • ಶೀಘ್ರದಲ್ಲೇ ಆ ಸಿನಿಮಾ ಶೂಟಿಂಗ್ ಪ್ರಾರಂಭಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಪೋಸ್ಟ್
Billa Ranga Baasha: ಬಿಗ್​ಬಾಸ್​ ಸೀಸನ್​ 12 ಮತ್ತು  ಮಾರ್ಕ್​​ ನಂತರ ಕಾಣಿಸಿಕೊಂಡಿದ್ದು, ಇತ್ತೀಚೆಗೆ ಅವರ ಅಕ್ಕನ ಮಗನ ಸಿನಿಮಾ ಮ್ಯಾಂಗೋ ಪಚ್ಚಾ ರಿಲೀಸ್​ ಆದಾಗ. ಈ ನಡುವೆ ಸುದೀಪ್​ ಅವರ ಸಿನಿಮಾ ಬಗ್ಗೆ ಯಾವುದೇ ಅಪಡೇಟ್​ ಇರಲಿಲ್ಲ. ಈಗಾಗಲೇ ಬಿಗ್​ಬಾಸ್​ ಪ್ರೋಮೋ ರಿಲೀಸ್​ ಆಗಿದೆ. ಇನ್ನೂ ಅದರಲ್ಲಿ ಸಿಲುಕಿಕೊಂಡರೆ ಈ ವರ್ಷ ಅವರ ಬಿಲ್ಲ ರಂಗ ಭಾಷಾ ಸಿನಿಮಾ ನೋಡೋದು ಡೌಟೇ ಎಂದು ಫ್ಯಾನ್ಸ್​ ಬೇಸರ ವ್ಯಕ್ತಪಡಿಸಿದ್ದಾರೆ.
ಸೋಶಿಯಲ್​ ಮೀಡಿಯಾದಲ್ಲಿ ನಟ ಕಿಚ್ಚ ಸುದೀಪ್​ ಅವರ ಬಹು ನಿರೀಕ್ಷಿತ ಸಿನಿಮಾ ಬಿಲ್ಲರಂಗ ಭಾಷಾ  ಸ್ಥಗಿತಗೊಂಡಿದೆ ಎನ್ನುವ ಬಗ್ಗೆ ಊಹಾಪೋಹಾ ಹರಿದಾಡಿತ್ತು. ಈ ಬಗ್ಗೆ ಕಿಚ್ಚ ಸುದೀಪ್​ ಅವರೇ ಖುದ್ದಾಗಿ ಎಕ್ಸ್​ನಲ್ಲಿ  ಪೋಸ್ಟ್ ಹಂಚಿಕೊಳ್ಳುವ ಮೂಲಕ ವದಂತಿಗೆ ಬ್ರೇಕ್​ ಕೊಟ್ಟಿದ್ದಾರೆ.​ ಸಿನಿಮಾಗಾಗಿ ಸಿದ್ಧತೆ ಜೋರಾಗಿ ನಡೆಯುತ್ತಿದೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.
ಕಿಚ್ಚ ಸುದೀಪ್​ ಪೋಸ್ಟ್​ನಲ್ಲಿ ಏನಿದೆ?
ನಾನು ಬೇರೆ ಕೆಲಸದಲ್ಲಿ ಬ್ಯುಸಿ ಇದ್ದೆ. ಆ ಕಾರಣದಿಂದ ನಿಮ್ಮ ಪ್ರೀತಿಯನ್ನಾಗಲಿ ಅಥವಾ ಈ ಸಿಕ್ಕಿರುವ ಅದ್ಭುತವಾದ ವೃತ್ತಿಜೀವನವನ್ನಾಗಲಿ ನಾನು ನಿರ್ಲಕ್ಷಿಸಿದ್ದೇನೆ ಎಂದಲ್ಲ. ಸಿನಿಮಾ ಕತೆ ಕೇಳುವುದು, ನಟಿಸುವುದು, ನಿಮಗೆ ಮನರಂಜನೆ ನೀಡುವುದಕ್ಕಿಂತ ಹೆಚ್ಚಿನದ್ದಾಗಿ ನಾನೇನನ್ನು ಪ್ರೀತಿಸುವುದಿಲ್ಲನನ್ನನ್ನು ಹುರಿದುಂಬಿಸುವನಿಮ್ಮ ಈ ಪ್ರಯತ್ನ, ನನ್ನ ಕೆಲಸದ ಮೇಲಿನ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಮಧುರವಾದ ಮಾರ್ಗವಾಗಿದೆ, ಧನ್ಯವಾದಗಳು ಎಂದರು.

ಜೂ. 26ರಿಂದ ಸಿನಿಮಾ ಶೂಟಿಂಗ್

ಇದೇ ತಿಂಗಳ 26 ರಿಂದ "BRB" ಚಿತ್ರದೊಂದಿಗೆ ಶೂಟಿಂಗ್ ಅಖಾಡಕ್ಕೆ ಇಳಿಯುತ್ತಿದ್ದೇನೆ,, ಆನಂತರ ನಿರಂತರವಾಗಿ ಸಿನಿಮಾಗಳನ್ನು ಮಾಡುವ ಪ್ರಕ್ರಿಯೆ ಮುಂದುವರಿಯುತ್ತದೆ. ಈಗಾಗಲೇ 4 ಸ್ಕ್ರಿಪ್ಟ್‌ಗಳನ್ನು ಒಪ್ಪಿಕೊಂಡಿದ್ದೇನೆ. ಶೀಘ್ರದಲ್ಲೇ ಆ ಸಿನಿಮಾ ಶೂಟಿಂಗ್ ಪ್ರಾರಂಭಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ. 

ಸಿನಿಮಾ ಶೂಟಿಂಗ್ ತಡವಾಗ್ತಿರೋದು ಯಾಕೆ?

ಎರಡು ಶತಮಾನಗಳ ಹಿಂದಿನ ಕಾಲವನ್ನು ಸೃಷ್ಟಿಸಲು ಕಲಾ ನಿರ್ದೇಶಕರು, ಡಿಸೈನರ್​ಬಗಳು ಬೃಹತ್​ ಸೆಟ್​ ನಿರ್ಮಾಣಕ್ಕೆ  ಮುಂದಾಗಬೇಕಿದೆ. ಇದೇ ಕಾರಣದಿಮದ ಬಿಲ್ಲ ರಂಗಭಾಷಾ ಸಿನಿಮಾದ ಪ್ರೀ ಪ್ರೊಡಕ್ಷನ್​ ಹಾಗೂ ಮೇಕಿಂಗ್​ ತಡವಾಗುತ್ತಿದೆ ಎನ್ನಲಾಗಿದೆ. ​​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net