Rashmika Mandanna On First Love:
ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡ ಸಿನಿಮಾಕ್ಕೆ ಬಂದ ನಟಿ ರಶ್ಮಿಕಾ ಮಂದಣ್ಣ, ಅವರ ಡಿಫರೆಂಟ್ ಲುಕ್ನಿಂದಲೇ ಎಲ್ಲರಿಗೂ ಇಷ್ಟವಾಗಿದ್ದರು. ಈ ಸಿನಿಮಾದಿಂದ ಗೀತಗೋವಿಂದಂನಲ್ಲಿ ನಟಿಸಲು ಅವಕಾಶ ಸಿಕ್ಕಿತ್ತು. ಈ ಮಧ್ಯೆ ರಕ್ಷಿತ್ ಶೆಟ್ಟಿ ಜೊತೆಗೆ ಎಂಗೇಜ್ಮೆಂಟ್ ಕೂಡ ನಡೆದಿತ್ತು..ಆ ಬೆನ್ನಲ್ಲೇ ಕೇಳಿ ಬಂದಿದ್ದ ಅಘಾತ ಸುದ್ದಿ ಎಂದರೆ, ಇಬ್ಬರ ಬ್ರೇಕಪ್ ವಿಚಾರ. ಫ್ಯಾನ್ಸ್, ಕಾಂಟೆಂಟ್ ಕ್ರಿಯೇಟರ್ಸ್ ತಮ್ಮದೇ ಆದ ಕತೆಗಳನ್ನು ಕಟ್ಟಿದ್ದರು. ಇದು ಇಡೀ ಭಾರತಕ್ಕೆ ಗೊತ್ತಿರುವ ವಿಚಾರ. ಆದರೆ, ಈ ಮಧ್ಯೆ ಕಾಕ್ಟೇಲ್-2 ಸಿನಿಮಾ ಸಮಾರಂಭವೊಂದರಲ್ಲಿ ರಶ್ಮಿಕಾ ಮಂದಣ್ಣ ಅವರು ತಮ್ಮ ಮೊದಲ ಪ್ರೀತಿ ಬಗ್ಗೆ ಕೊಟ್ಟಿರುವ ಹೇಳಿಕೆಯು ಅಚ್ಚರಿ ಮೂಡಿಸಿದೆ.
ಜೂನ್19ರಂದು ಕಾಕ್ಟೇಲ್2 ಸಿನಿಮಾ ರಿಲೀಸ್ ಆಗಲಿದೆ.ಈ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ತಮ್ಮ ಮೊದಲ ಪ್ರೀತಿ ಬಗ್ಗೆ ರಶ್ಮಿಕಾ ಮಂದಣ್ಣ, ಕೃತಿ ಸನೂನು ಹಾಗೂ ಶಾಹಿದ್ ಕಪೂರ್ ಮಾತನಾಡಿರುವುದು ಸದ್ಯ ವೈರಲ್ ಆಗ್ತಿದೆ. ಅದರಲ್ಲು ರಶ್ಮಿಕಾ ಮಂದಣ್ಣ ಅವರು ತಮ್ಮ ಮೊದಲ ಮಾಜಿ ಪ್ರೇಮಿಯಾದ ರಕ್ಷಿತ್ ಶೆಟ್ಟಿ ಬಗ್ಗೆ ಮಾತನಾಡದೇ ನೇರವಾಗಿ ವಿಜಯ್ ದೇವರಕೊಂಡ ಜೊತೆಗೆ ಮದುವೆ ಮಾಡಿಕೊಂಡು ಸಂತೋಷವಾಗಿದ್ದೇನೆ ಎಂದಿರುವುದು ಇನ್ನಷ್ಟು ಚರ್ಚೆಗೆ ಕಾರಣವಾಗಿದೆ.
ರಶ್ಮಿಕಾ, ಕೃತಿ ಸನೂನ್ ಚರ್ಚೆ ಹೀಗಿತ್ತು
ಕಾಕ್ಟೇಲ್ ಸಿನಿಮಾ ಸ್ನೇಹ, ಪ್ರೀತಿ ಹಾಗೂ ಭಾವನಾತ್ಮಕತೆಯನ್ನು ಹೊಂದಿರುವ ಸಿನಿಮಾವಾದ ಕಾರಣ, ಸಿನಿಮಾದ ಪ್ರಮುಖ ಪಾತ್ರಧಾರಿಗಳಿಗೆ ಮೊದಲ ಪ್ರೀತಿ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಆಗ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದು ಹೀಗೆ..
'ನಾನೀಗ ವಿಜಯ್ ದೇವರಕೊಂಡ ಜೊತೆಗೆ ಸಂತೋಷವಾಗಿ ಮದುವೆಯಾಗಿದ್ದೇನೆ. ಹಾಗಾಗಿ ನಾನು ನನ್ನ ನಿರ್ಧಾರದಿಂದ ಹಿಂದೆ ಸರಿಯುವ ತೀರ್ಮಾನ ಎಂದು ಕೈಗೊಳ್ಳೋದಿಲ್ಲ ಎಂದು ಹೇಳಿದ್ದಾರೆ. ಆಗ ಕೃತಿ ಸನೂನ್ ಅವರು ಮತ್ತೆ ಮೊದಲ ಪ್ರೀತಿ ನೆನಪಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ರಶ್ಮಿಕಾ ಮಂದಣ್ಣ ಅವರು ಜಾಣ್ಮೆಯಿಂದ ಉತ್ತರಿಸಿದ್ದಾರೆ. 'ಯಾಕೆ? ನಾನೀಗ ವಿಜಯ್ನ ಮದುವೆಯಾಗಿ ಅಪಾರ ಸಂತೋಷದಲ್ಲಿದ್ದೇನೆ' ಎಂದು ಹೇಳಿದ್ದಾರೆ.
ಆಗ ಶಾಹಿದ್ ಕಪೂರ್ ಅವರು 'ಕೆಲವೊಮ್ಮೆ ಮೊದಲ ಪ್ರೀತಿ ಯಾರಿಗೂ ನೆನಪಿರೋದಿಲ್ಲ. ಪ್ರೀತಿ ಎಂದರೆ ನಾವು ಯಾರ ಜೊತೆಗೆ ಜೀವನ ಕಳೆಯುತ್ತೇವೆ. ಅವರು ಹೇಗಿರುತ್ತಾರೆಯೋ ಹಾಗೆ ಸ್ವೀಕರಿಸುತ್ತೇವೆ' ಎನ್ನುವದರ ಮೇಲೆ ನಿರ್ಧಾರವಾಗುತ್ತದೆ ಎಂದಿದ್ದಾರೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು 2018ರಲ್ಲಿ ರಿಲೀಸ್ ಆಗಿದ್ದ ಗೀತಗೋವಿಂದಂ ಸಿನಿಮಾ ಮೂಲಕ ಪರಿಚಯವಾದರು. ಸಿನಿಮಾ ರಿಲೀಸ್ ನಂತರ ರಕ್ಷಿತ್ ಶೆಟ್ಟಿಯೊಂದಿಗೆ ಬ್ರೇಕಪ್ ಮಾಡಿಕೊಂಡಿದ್ದರು. 2019ರಲ್ಲಿ ಡಿಯರ್ ಕಾಮ್ರೇಡ್ ಸಿನಿಮಾ ರಿಲೀಸ್ನಂತರ ಒಟ್ಟಾಗಿ ಕೆಲಸ ಮಾಡಿದ್ದು ಕಡಿಮೆಯೇ.
ಇಬ್ಬರು ಎಂಟು ವರ್ಷಗಳ ಕಾಲ ಡೇಟಿಂಗ್ನಲ್ಲಿದ್ದರು ಎನ್ನಲಾಗಿದೆ. ಇಬ್ಬರು ಒಂದೇ ಪ್ಲೇಸ್ನಲ್ಲಿರುವ ಫೋಟೋಗಳನ್ನು ಪ್ರತ್ಯೇಕವಾಗಿ ಪೋಸ್ಟ್ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಆಗಾಗ್ಗೆ ಸುದ್ದಿ ಹಂಚಿಕೊಳ್ಳುತ್ತಿದ್ದರು. ಕೊನೆಗೂ ಎಲ್ಲರ ಊಹೆಯು ಸರಿ ಎನ್ನುವಂತೆ ಫೆಬ್ರವರಿ 26ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.