ಅಂದಹಾಗೆ, ಪುಲ್ಕಿತ್ ಮಣಿ ಅವರನ್ನು ಆನ್ಲೈನ್ನಲ್ಲಿ 'ಹನಿ' ಅಥವಾ @hunnywhoisfunny ಎಂದೂ ಕರೆಯಲಾಗುತ್ತದೆ. ಈತ ಭಾರತೀಯ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಹಾಗೂ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿದ್ದು, ಮುಖ್ಯವಾಗಿ ಮಿಮಿಕ್ರಿ, ವ್ಯಂಗ್ಯ ಮತ್ತು ಶಾರ್ಟ್-ಫಾರ್ಮ್ ಕಾಮಿಡಿ ವಿಡಿಯೋಗಳಿಗೆ ಹೆಸರುವಾಸಿಯಾಗಿದ್ದಾರೆ. 2021 ರಿಂದ ವೃತ್ತಿಪರರಾಗಿ ಸ್ಟ್ಯಾಂಡ್-ಅಪ್ ಪ್ರದರ್ಶನಗಳನ್ನು ನೀಡುತ್ತಾ ಬಂದಿರುವ ಮಣಿ, ಸಾಮಾಜಿಕ ಜಾಲತಾಣಗಳ ಮೂಲಕವೇ ಹೆಚ್ಚಿನ ಪ್ರೇಕ್ಷಕರನ್ನು ಸಂಪಾದಿಸಿಕೊಂಡಿದ್ದಾರೆ.