ಚೀನಾ, ನೇಪಾಳ, ಭಾರತ ಮತ್ತು ಭೂತಾನ್ ದೇಶಗಳು ಪರಿಸರದಿಂದ ಪರಸ್ಪರ ಬೆಸೆದುಕೊಂಡಿವೆ ಎಂದಿರುವ ಖನಾಲ್, ಈ ರಾಷ್ಟ್ರಗಳ ಒಟ್ಟಾರೆ ಉಳಿವು ಮತ್ತು ಭವಿಷ್ಯವು ಸಂಪೂರ್ಣವಾಗಿ ಹಿಮಾಲಯದ ಪರಿಸರವನ್ನು ರಕ್ಷಿಸುವುದರ ಮೇಲೆ ಅವಲಂಬಿತವಾಗಿದೆ ಎಂದು ತಿಳಿಸಿದ್ದಾರೆ. ರಾಜಕೀಯ ಪೈಪೋಟಿಗಳು ಏನೇ ಇದ್ದರೂ, ಹವಾಮಾನ ವೈಪರೀತ್ಯಕ್ಕೆ ಅತ್ಯಂತ ಸಂತ್ರಸ್ತವಾಗಿರುವ ಹಿಮಾಲಯನ್ ಪ್ರದೇಶದ ರಕ್ಷಣೆಗಾಗಿ ಎಲ್ಲರೂ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಟ್ಟಾಗಿ ಕೈಜೋಡಿಸಬೇಕಾದ ಅನಿವಾರ್ಯತೆ ಇದೆ ಎಂದು ಖನಾಲ್ ಕರೆ ನೀಡಿದ್ದಾರೆ.